Pages

Ads 468x60px

Monday 21 February 2022

ಹಪ್ಪಳ ಗೊಜ್ಜು

 



ದಿಢೀರ್ ಅಡುಗೆ ಆಗಬೇಕೇ,

ಉದ್ದಿನ ಹಪ್ಪಳ ಕರಿಯಿರಿ.

ಕೈಯಲ್ಲಿ ಹುಡಿ ಮಾಡಿ,

ತಪಲೆಗೆ ಹಾಕಿ,

ಸೌಟು ದಪ್ಪ ಮೊಸರು ಎರೆಯಿರಿ.

ಶುಂಠಿ ಚಿಕ್ಕದಾಗಿ ಹೆಚ್ಚಿ ಹಾಕಿ,

ಹಸಿಮೆಣಸು ಕೂಡಾ ಹಾಕಬಹುದು.

ಮೇಲಿನಿಂದ ಪುಟ್ಟ ಒಗ್ಗರಣೆ ಚಟಪಟಾಯಿಸಿ,

ರುಚಿಗೆ ಸೂಕ್ತ ಪ್ರಮಾಣದಲ್ಲಿ ಉಪ್ಪು ಹಾಕಿ ಕಲಕುವಲ್ಲಿಗೆ  ಪುಟ್ಟ ವ್ಯಂಜನ ಸಿದ್ಧವಾದಂತೆ.


ಮನೆಯಲ್ಲಿ ವಿಶೇಷ ಭೂರಿಭೋಜನ ಕಾರ್ಯಕ್ರಮಗಳಿದ್ದಾಗ ಹಪ್ಪಳ ಕರಿದದ್ದು ಉಳಿದೇ ಉಳಿಯುತ್ತದೆ.   ಗರಿಗರಿಯಿದ್ದಾಗಲೇ  ಗಾಳಿಯಾಡದ ಪ್ಲಾಸ್ಟಿಕ್ ಕವರ್ ಒಳಗೆ ಸಂಗ್ರಹಿಸಿಟ್ಟರೆ ಕೆಲವು ದಿನ ತಾಜಾ ಆಗಿ ಇರುತ್ತದೆ ಮತ್ತೂ ಮುಗಿಯಲಿಲ್ಲಾಂದರೆ  ಥರ ಹಪ್ಪಳದ ಗೊಜ್ಜು ಸವಿಯಿರಿ



Tuesday 1 February 2022

ದೋಸೆ - ಚಟ್ಣಿ ಪುಡಿ

 


 ಬಾರಿ ತೋಟದ ಹುಲ್ಲು ಅಂದ್ರೆ ಕಳೆ ತೆಗಯಲು ಮೆಶೀನ್ ಸಿದ್ಧವಾಗಿದೆ.  ಮೆಶೀನ್ ಹುಲ್ಲನ್ನು ನಿರಾಯಾಸವಾಗಿ ಸವರುತ್ತಿದ್ದಂತೆದಪ್ಪ ದಪ್ಪ ಕಾಂಡಗಳ ಕಳೆಗಳನ್ನು ಕತ್ತಿಯಿಂದ ಸವರಲಾಯಿತು.  ರಥ ಹೂವಿನ ಗಿಡದಂತಹ ಬೇರು ಆಳವಾಗಿ ನೆಲದೊಳಗೆ ಇಳಿಯುವ ಸಸ್ಯಗಳನ್ನು ಪಿಕ್ಕಾಸಿಯಿಂದ ಕೀಳಲಾಯಿತು.  ಅಂತೂ ತೋಟ ಟೆನ್ನಿಸ್ ಆಟದ ನೆಲದಂತೆ ಚೊಕ್ಕಟ ಆಯ್ತು.


ಆದರೂ ತೋಟದೊಳಗೆ ಸಸ್ಯ ಸಾಮ್ರಾಜ್ಯ ಮೇಲೇಳದಿರುವುದೇ ಹನಿ ಹನಿ ಇಬ್ಬನಿ ಬಿದ್ದರೂ ಸಾಕು,

ಕಾಂಡ ಕಿತ್ತ ಕರಿಬೇವಿನ ಗಿಡಗಳು ಶೋಭಾಯಮಾನದಿಂದ ಚಿಗುರಿವೆ ಚಿಗುರೆಲೆಗಳೇ ಅಡುಗೆಯ ಆಕರ್ಷಣೆ.

ಹುಲ್ಲು ಕಿತ್ತ ಕೆಲಸಗಾರರೇ ಸಂಜೆ ತೆರಳುವಾಗ ಕರಿಬೇವಿನೆಲೆಗಳ ಗ್ರಾಹಕರು ಇಷ್ಟೂ ಎಲೆ ತೆಕ್ಕೊಂಡು ಹೋಗ್ತೀಯಲ್ಲ... ? "

ಅಕ್ಕ ಪಕ್ಕದ ಮನೆಯವರಿಗೂ ಕೊಡುತೀವಿ. " ಎಂದು ನಕ್ಕ.


ಮತ್ತೊಂದು ದಿನ ನಮ್ಮೆಜಮಾನ್ರೇ ಕರಿಬೇವಿನೆಲೆಗಳನ್ನು ಟೊಂಗೆ ಸಹಿತ ತಂದು ಅಡುಗೆ ಮನೆ ತುಂಬಿಸಿದ್ರು.   ಇದನ್ನು ಏನುಮಾಡಲೀ.. "

ಕೆಲ್ಸದವರು ಹೋಗುವಾಗ ದಿನಾ ಒಯ್ತಾರೆ...  ಸ್ವಲ್ಪ ನಿನಗೇಂತ ತಂದಿದ್ದು ಏನಾದ್ರೂ ಮಾಡಿಕೋ... "

 ಎಲ್ಲವನ್ನೂ ಕಿತ್ತು ಓರಣವಾಗಿ ಡಬ್ಬದಲ್ಲಿ ತುಂಬಿಟ್ಟೆ ನಾಳೆ ಒಂದು ಚಟ್ಣಿಪುಡಿ ಮಾಡಿಟ್ಕೊಳ್ಳೋಣ.




ಚಟ್ಣಿಪುಡಿ ಅಂತ ಇದ್ದ ಎಲೆಗಳನ್ನೆಲ್ಲ ಹಾಕುವುದಕ್ಕಿಲ್ಲ,  ಹಸಿ ಹಸಿಯಾದ  ಎಲೆಗಳು ವಾರ ಕಳೆದರೂ ಹಾಳಾಗುವಂತದ್ದಲ್ಲ.  ನಮಗೆ ಏಳೆಂಟು ಕಣೆ ಸಾಕು.

ಫ್ರಿಜ್ ಒಳಗೆ ಐದಾರು ಕಾಯಿ ಕಡಿಗಳು ಸಂಕ್ರಾಂತಿಯ ಪ್ರಸಾದವೆಂದು ದೇವಸ್ಥಾನದಿಂದ ಬಂದಿದ್ದು ಕಣ್ರೀ...

ನನ್ನ ನಿತ್ಯದ ಅಡುಗೆಗೆ ಒಂದು ಕಡಿ ಸಾಕಾಗುತ್ತದೆ ಅಂತಾದ್ರಲ್ಲಿ  ಕಾಯಿ ಕಡಿಗಳು ಮುಗಿಯುವುದು ಯಾವಾಗ?

ತೆಂಗಿನಕಾಯಿ ಚಟ್ಣಿ ಹುಡಿ ತುಂಬ ಪರಿಮಳ,   ಮಗ ಬೆಂಗಳೂರಿನಿಂದಲೂ ಚಟ್ಣಿಹುಡಿ ತರುವುದಿದೆ ಅದು ಬೇಳೆಕಾಳುಗಳ ಮಿಶ್ರಣ ಹೌದೋ ಅಲ್ವೋ ಎಂಬಂತೆ ಕರಿಬೇವಿನ ಕಮ್ಮನೆ ಅಷ್ಟೇ.    ಬಾರಿ ಬಂದಾಗ ಬೇವಿನ ಚಟ್ಣಿಪುಡಿ ಎಂಬ ಲೇಬಲ್ ಹೊತ್ತ ಇನ್ನೊಂದು ಬಂದಿದೆ ಬಿಡಿಸಿ ನೋಡಿ ಬಾಯಿಗಿಟ್ರೆ ಕಹೀ ಅಂದ್ರೆ ಕಹಿ ಎಲ್ಲೋ ಇದು ಯುಗಾದಿಯ ಬೇವು...


ಅಮ್ಮ ಬೆಂಗ್ಳೂರಿನಲ್ಲಿ ಹೀಗೂ ತಿಂತಾರೆ ಮೆಡಿಸಿನ್ ಅಂತ.."

ಇರಬಹುದು ನಾನೂ ದಿನಾ ಒಂಚೂರು ತಿಂದು ಮುಗಿಸೂದು ಅಷ್ಟೇಯ.. "

ನಮ್ಮ ಕಡೆ ಕಹಿ ಬೇವು ಕಾಣಲಾರೆವು ನೆಟ್ಟರೂ ಅದೇನೂ ದೀರ್ಘಾಯುಷಿ ಅಲ್ಲ ಔಷಧಿಗೂ ಸಿಕ್ಕಸಿಕ್ಕಂತೆ ಎಲೆ ಕಿತ್ತು ಕೊಡಲೂ ಬಾರದು ಎಂದೆಲ್ಲ ಕಟ್ಟುಪಾಡುಗಳು...

ಅಡುಗೆಯ ಬೇವು ಯಾವ ಕಟ್ಟುಪಾಡಿಗೂ ಒಳಪಟ್ಟಿಲ್ಲ ಆಡುಭಾಷೆಯಲ್ಲಿ ಕರಿಬೇವು ಅಂತ ಹೇಳಲಿಕ್ಕೂ ಇಲ್ಲ ಬೇವಿನಸೊಪ್ಪು ಎಂದರಾಯಿತು ಅಷ್ಟಕ್ಕೂ ಅಡುಗೆ ಬಳಕೆಯ ಬೇವು ಕರ್ರಗೇನೂ ಇಲ್ಲ ಕರಿ ಎಂಬ ಆಂಗ್ಲ ಪದವನ್ನು ಅಂಟಿಸಿದವರಾರೋತಿಳಿಯದು.    ಆನೆಗೂ ಕರಿ ಎನ್ನುವುದಿದೆ ಸಂಸ್ಕೃತದಲ್ಲಿಯೋ ಕನ್ನಡವೋ ತಿಳಿಯದು ನಮ್ಮ ಬೇವಿನೆಲೆ ಗಾತ್ರದಲ್ಲಿ ಪುಟ್ಟದು ಅಂಗಳದಲ್ಲಿ ಅಂಜೂರದ ಮರವೊಂದಿದೆ ಒಂದು ಎಲೆಯೆಂದರೆ ಪಂಚಭಕ್ಷ್ಯ ಪರಮಾನ್ನಗಳನ್ನು ಬಡಿಸುವಷ್ಟು ದೊಡ್ಡದು ಇರಲಿನಾವು ಚಟ್ಣಿಪುಡಿ ಮಾಡ ಹೊರಟಿದ್ದೇವೆ.  


ಸಾಂಬಾರು ಮಾಡಲಿಕ್ಕೆ ಕಾಯಿ ತುರಿಯುವಾಗ ಅರ್ಧ ಕಡಿ ಕಾಯಿ ಎಲ್ಲವನ್ನೂ ತುರಿಯುವುದು ಸಾಂಬಾರ್ ಆಗಿ ಉಳಿದ ಕಾಯಿತುರಿಯೆಲ್ಲವನ್ನೂ ಘಮ್ ಘಮ್ ಎಂದು ಪರಿಮಳ ಬರುವ ತನಕ ಹುರಿಯಿರಿ ಬದಿಗಿರಿಸಿ ತಣಿಯಲಿ ಕಾಯಿತುರಿ ಅಂದಾಜು ಒಂದು ಲೋಟ ಆದರೂ ಇರಲಿ ತೆಂಗಿನತುರಿಯನ್ನು ನೋಡಿಕೊಂಡು ಮಸಾಲೆಉಪ್ಪು ಹುಳಿ ಖಾರ ಹಾಕುವುದಾಗಿದೆ.

ಅದೇ ಬಾಣಲೆಯಲ್ಲಿ 7 - 8 ಕಣೆ ಬೇವಿನೆಸಳು ಬಿಡಿಸಿ ಹುರಿಯಿರಿ ಕೈಯಲ್ಲಿ ಮುಟ್ಟಿದರೆ ಪುಡಿ ಪುಡಿ ಆದರಾಯಿತು ಬದಿಗಿಟ್ಕೊಳ್ಳಿ.


ಇದಕ್ಕೆ ಮಸಾಲೆ ಏನೇನು?

8 -10 ಒಣಮೆಣಸು

ಚಮಚ ಉದ್ದಿನಬೇಳೆ

ಕಡಲೆ ಗಾತ್ರದ ಇಂಗು

ಅರ್ಧ ಲೋಟ ಕೊತ್ತಂಬರಿ

ಚಮಚ ಜೀರಿಗೆ ಹಾಗೂ ಮೆಂತೆ 

ಸಾಂಬಾರ್ ಮಸಾಲೆ ಸಾಮಗ್ರಿಗಳನ್ನೇ ಬಳಸಲಾಗಿದೆ.

ಅದೇ ಬಾಣಲೆಯಲ್ಲಿ ಇವೆಲ್ಲವನ್ನೂ ಹುರಿಯಿರಿ.

ನನ್ನ ಹುರಿಯುವಿಕೆಯಲ್ಲಿ ಎಣ್ಣೆ ಬಳಸಿಲ್ಲ.

ಏನಾಯ್ತೂ ಅಂದರೆ ಸಾಂಬಾರಿಗೆ ಹಾಕಲೆಂದು ತೆಗೆದಿಟ್ಟ ಕೊತ್ತಂಬರಿ ಸೊಪ್ಪು ಕಣ್ಣಿಗೆ ಬಿತ್ತು ಅದನ್ನೂ ಹುರಿಯುತ್ತಿರುವ  ಬಾಣಲೆಗೆ ಹಾಕಲಾಯಿತು.  

ರುಚಿಗೆ ಏನೇನು?

ಉಪ್ಪು ಹಾಗೂ ಹುಣಸೆ ಹುಳಿ ಬೆಲ್ಲ ಕಡ್ಡಾಯವಲ್ಲ.


ಈಗ ನನ್ನ ಪಾತ್ರೆಗಳನ್ನು ಡಿಶ್ ವಾಶರ್ ಎಂಬ ಯಂತ್ರ ತೊಳೆದು ಕೊಡುತ್ತಿದೆತೊಳೆಯುವ ಪ್ರಕ್ರಿಯೆಯಲ್ಲಿ ಎಲ್ಲ ಪಾತ್ರೋಪಕರಣಗಳು ಒಣಗಿಸಲ್ಪಟ್ಟು ಸಿಗುವುದು ಇದರ ವಿಶೇಷ ಹಾಗಾಗಿ ಮಿಕ್ಸಿಯ ಜಾರ್ ಕೂಡಾ ನೀರಪಸೆಯೇನೂ ಇಲ್ಲದೆ ಒರೆಸಿಟ್ಟಂತೆ ಇದೆ.

ಇನ್ನೇಕೆ ತಡ ಎಲ್ಲ ಸಾಮಗ್ರಿಗಳನ್ನು ತುಂಬಿ ಟೊರ್ರ್.. ಅನ್ನಿಸಿದ್ದಾಯಿತು.

ಜಾಡಿಗಳೂ ಅಷ್ಟೇ ಶುಭ್ರವಾಗಿ ಕುಳಿತಿವೆ,   ತುಂಬಿಸಿ ಇಟ್ಟೂ ಆಯ್ತು.

ತೆಂಗಿನ ಸುವಾಸನೆಕರಿಬೇವಿನ ಪರಿಮಳ ಕೊತ್ತಂಬರಿ ಸೊಪ್ಪಿನ ಸುಗಂಧ ಸೇರಿ ಚಟ್ಣಿ ವಿಶೇಷ ಸ್ವಾದವನ್ನು ಹೊಂದಿತು.   

10 ದಿನಕ್ಕೆ ಸಾಕು.

ಇದನ್ನು ಕೂಡಿ ತಿನ್ನಲು ನಾಳೆ ದೋಸೆ ಆಗಬೇಕಿದೆ.

ಬಾಳೆಹಣ್ಣು ಇದೆ ಏಳೆಂಟು ಕದಳಿ ಬಾಳೆಹಣ್ಣು ಸಾಕು.

ಲೋಟ ಅಕ್ಕಿನೆನೆಯಲಿ

ದೊಡ್ಡ ಚಮಚ ಮೆಂತೆ ನೆನೆಸಿ,

ಬಾಳೆಹಣ್ಣು, ದೋಸೆ ಹಿಟ್ಟು ಚೆನ್ನಾಗಿ ಹುದುಗು ಬರಲು ಪೂರಕ ಮೊಸರು ಇಲ್ಲದಿದ್ದರೂ ನಡೆಯುತ್ತೆ ಈಗ ತುಂಬಾ ಚಳಿ ಮೊಸರು ಕೂಡಾ ಹುಳಿಯಿರುವುದಿಲ್ಲ.

ಬಾಳೆಹಣ್ಣಿನ ಮೆಂತೆ ದೋಸೆ ಹೇಗಾಯ್ತು ನೋಡಿ,

ಚಟ್ಣಿಪುಡಿಯೊಂದಿಗೆ ಆಸ್ವಾದಿಸಿ.




ಸೂಚನೆ:  ಅರೆದ ಮೆಂತೆ ಬೆಣ್ಣೆಯಂತೆ ನುಣ್ಣಗಾಗಿರಲಿ.

ಬಾಳೆಹಣ್ಣನ್ನು ಕೈಯಲ್ಲಿ ಹಿಸುಕಿ ಹಾಕಿದರೆ ಸಾಲದು ಅಕ್ಕಿ ಮೆಂತೆಯೊಂದಿಗೆ ಅರೆಯಿರಿ.

ಬಾಳೆಹಣ್ಣೂ ಸೇರಿದ ಹಿಟ್ಟನ್ನು ದೊಡ್ಡ ತಪಲೆಯಲ್ಲಿ ಇರಿಸಿ ಹಿಟ್ಟು ಹುದುಗು ಬಂದು ಹೊರ ಚೆಲ್ಲಬಾರದಲ್ಲ...

ದೋಸೆಯ ಹಿಟ್ಟು ನೀರಾಗಬಾರದು ಇಡ್ಲಿ ಹಿಟ್ಟಿನ ಸಾಂದ್ರತೆ ಇರಲಿ.