Pages

Ads 468x60px

Thursday 2 June 2022

ಗೋಧಿ ಕಡಿ ಇಡ್ಲಿ

 



ಬೆಳಗಾದ್ರೆ ದೋಸೆ ಎರೆಯುವುದೇ ಆಗ್ಹೋಯ್ತು ನಾಳೆ ಬೇರೆ ತಿಂಡಿ ಆಗ್ಬೇಕು.. "  ಮಕ್ಕಳೇನೂ ಅಂದಿದ್ದಲ್ಲ ನಾನೇ ನನ್ನ ಪಾಡಿಗೆ ಅಂದ್ಕೊಂಡಿದ್ದು.


ಅಡುಗೆಮನೆಯಲ್ಲಿ ಗೋಧಿ ನುಚ್ಚು ಯಾ ಗೋಧಿ ಕಡಿ ತಂದಿದ್ದು ಇದೆ.   ಪಾಯಸಕ್ಕೇಂತ ತಂದಿದ್ದು ಸಾಕಷ್ಟು ಉಳಿದಿದೆ.   ಇಡ್ಲಿ ಮಾಡಿದ್ರೆ ಹೇಗೆ ಉಪ್ಪಿಟ್ಟೂ ಆದೀತು.  

ಹಿಂದೆ ಗದ್ದೆ ಬೇಸಾಯ ಇದ್ದಾಗ ಕುಚ್ಚುಲಕ್ಕಿಯಿಂದಲೇ ಇಡ್ಲಿ ಮಾಡ್ತಿದ್ದೆವು ಉದ್ದು + 4 ಅಕ್ಕಿಯ ಅಳತೆ ಬಹಳ ಮೃದುವಾಗಿ ಬರುತ್ತಿದ್ದ  ಇಡ್ಲಿ ಮನೆ ಮಂದಿ ಮಾತ್ರವಲ್ಲದೆ ಕೆಲಸದಾಳುಗಳ ಹೊಟ್ಟೆ ಭರ್ತಿ ಮಾಡುತ್ತಿದ್ದುದು ನೆನಪಾಯಿತು.

ಈಗ ಗೋಧಿ ನುಚ್ಚಿನ ಇಡ್ಲಿಗೂ ಇದೇ ಅಳತೆ ಸರಿ ಹೋದೀತು ಆದರೂ ಮನೆಯೊಳಗೆ ಸಾಕಷ್ಟು ಜನರಿಲ್ಲ ಗೋಧಿ ನುಚ್ಚು ತುಸು ಕಡಿಮೆ ಹಾಕಿದರಾಯಿತು.


ಒಂದು ಲೋಟ ಉದ್ದು ನೆನೆಯಿತು

ಲೋಟ ಗೋಧಿನುಚ್ಚು ಮುಳುಗುವಷ್ಟು ನೀರೆರೆದು ಇಡತಕ್ಕದ್ದು ಲೋಟ ನೀರು ಎರೆಯಿರಿ.

ಅರ್ಧ ಗಂಟೆ ಬಿಟ್ಟು ಉದ್ದು ಅರೆಯಿರಿ.

ಈಗ ಗೋಧಿ ನುಚ್ಚು ನೆನೆದು ನೀರನ್ನು ಹೀರಿರುತ್ತದೆ ಅರೆದ ಉದ್ದಿನ ಹಿಟ್ಟನ್ನು  ಬೆರೆಸಿ ರುಚಿಗೆ ಉಪ್ಪು ಹಾಕಿ ರಾತ್ರಿ ಬೆಳಗಾಗುವ ತನಕ ಮುಚ್ಚಿ ಇರಿಸಿರಿ.

ಪುನಃ ಬೇರೆ ನೀರು ಕೂಡಿಸುವ ಅಗತ್ಯ ನನಗೆ ಬರಲಿಲ್ಲಇಡ್ಲಿ ಎರೆಯಿರಿ ಇಡ್ಲಿಯ ಮಾಮೂಲಿ ಸಮಯ 10 ನಿಮಿಷ ಸಾಲದು ನೀರು ಕುದಿದ ನಂತರ 20ರಿಂದ 25 ನಿಮಿಷ ಆದರೂ ಬೇಯಿಸಬೇಕಾಗುತ್ತದೆ.


ರುಚಿ ಶುಚಿಯಾದ ಇಡ್ಲಿಯನ್ನು ಕಾಯಿ ಚಟ್ಣಿ ಗಟ್ಟಿ ಮೊಸರಿನೊಂದಿಗೆ ಸವಿಯಿರಿ.


ಕೊತ್ತಂಬರಿ ಸೊಪ್ಪು ಇದ್ದರೆ ಇದನ್ನು ಪುಟ್ಟ ಒಗ್ಗರಣೆಯೊಂದಿಗೆ ಮಸಾಲಾ ಇಡ್ಲಿಯಾಗಿ ಪರಿವರ್ತಿಸಬಹುದು.   ನಿಮ್ಮ ಅಡುಗೆಯ ಕಲ್ಪನೆಯಂತೆ ಕ್ಯಾರಟ್ ತುರಿ ಬೀನ್ಸ್  ಇತ್ಯಾದಿಗಳನ್ನು ಸೇರಿಸಿ.   ಮಾರುಕಟ್ಟೆಯಲ್ಲಿ ಸಿಗುವ ಇಡ್ಲಿ ಮಿಕ್ಸ್ ಗೆ ಇದರ ಮುಂದೆ ನಿಲ್ಲುವ ಯೋಗ್ಯತೆಯಿಲ್ಲ.