Pages

Ads 468x60px

Monday 24 July 2023

ಮಸಾಲಾ ಮ್ಯಾಂಗೋ

 












ಮಳೆಗಾಲವೆಂದರೆ ಭರಪೂರ ಮಾವಿನ ಹಣ್ಣಿನ ಕಾಲ 

ಎಲ್ಲೆಲ್ಲಿಂದಲೋ ಆಗಮಿಸುವ  ಹಣ್ಣುಗಳ ಸ್ವಾದಕ್ಕೆ ಎಣೆಯಿಲ್ಲ.  ನೋಡಲಿಕ್ಕೆ ಹೋದರೆ ಹಿರಣ್ಯದ ತೋಟದ ರಾಜ್ಯದಲ್ಲಿ ಕಸಿ ಮಾವಿನ ಮರಗಳು ಸಾಕಷ್ಟಿವೆ.  ಅದನ್ನೆಲ್ಲ ನಾವು ತಿಂದು ಮುಗಿಸಲಿಕ್ಕುಂಟೇ,   ಹೇಳಿಕೇಳಿ ಇದು ಕೇರಳ ರಾಜ್ಯ,   ಕಾರ್ಮಿಕರ ಮಜೂರಿ ಅಂದರೆ ಅವರು ಕೇಳಿದಷ್ಟು ಕೊಡಲೇ ಬೇಕು.  “ ಹೋಗಯ್ಯ ಬಾರಯ್ಯ” ಅನ್ನುವ ಹಾಗೂ ಇಲ್ಲ.  ಮನೆಯ ಮಕ್ಕಳಿಗೆ ಅಷ್ಟಿಷ್ಟು ಕೊಟ್ಟು ಕಳಿಸುವಲ್ಲಿಗೆ  “ಸಾಕಪ್ಪ,   ಮಾವಿನಹಣ್ಣಿನ ವ್ಯವಹಾರ “ ಎಂದೆನ್ನಿಸುವಲ್ಲಿಗೆ ಮಾವಿನ ಹಣ್ಣುಗಳು ಕಳಿತುಕೊಳೆತು,  ಉದುರಿ ಬಿದ್ದೇ ಹೋದವು.


ಈಗ ಮಾವಿನಹಣ್ಣುಗಳನ್ನು ಕೊಂಡು ತರುವುದು.   ಮಾವಿನ ಹಣ್ಣುಗಳ ಸಿಪ್ಪೆ ಹೆರೆದು ಹೋಳು ಮಾಡಿ ತಿಂದರೇನೇ ರುಚಿ ಊಟಕ್ಕೆ ಉಪ್ಪಿನಕಾಯಿ ಇಲ್ಲದೇ ಹೋದ್ರೂ ಆದೀತು ತಟ್ಟೆ ತುಂಬ ಮಾವಿನ ಹಣ್ಣಿನ ಹೋಳುಗಳು ಇದ್ರೆ ಸಾಕು.


ಹೀಗೆ ಮಳೆ ಸುರಿಯುತ್ತಿರುವಾಗ ಹಸಿ ಹಸಿ ಹಣ್ಣು ತಿಂದರೆ ಶೀತಕೆಮ್ಮು ಜಾಸ್ತಿ ಆದೀತು. “

ಮತ್ತೇನು ಮಾಡು ಅಂತೀರಾ? “

“ ಬೇಯಿಸಿ ತಿಂದರಾದೀತು. “

“ ಸರಿ ಉಪ್ಪಿನಕಾಯಿ ಹೊರಡಿ ಬೆರೆಸಿ ತಿನ್ನೋಣ. “

“ ನಿನ್ನ ಉಪ್ಪಿನಕಾಯಿ ಏನೂ ಬೇಡ ಸಕ್ಕರೆ ಹಾಕಿ ಬೇಯಿಸಿ ಇಟ್ಟರೆ ಫ್ರೀಜರ್ ನಲ್ಲಿ ಒಂದು ವರ್ಷ ಇಡಲಿಕ್ಕಾಗುತ್ತಂತೆ. “

“ ನೀವೇ ಮಾಡ್ಕೊಳ್ಳಿ. “

ಎರಡು ದಿನ ಸಕ್ಕರೆಯ ಮಾವಿನ ಹಣ್ಣು ತಿಂದಿದ್ದಾಯಿತು.

ಸಕ್ಕರೆಯ ಬದಲು ಪೆಪ್ಪರ್ಜೀರಾಉಪ್ಪು ಹಾಕಿದ್ರೆ ಹೇಗೆ ಎಲ್ಲ ಹುಡಿಗಳೂ ಅಡುಗೆಮನೆಯೊಳಗೆ ಇವೆ.”

ಅನುಮೋದನೆ ದೊರೆಯಿತು.


ತಟ್ಟೆ ತುಂಬ ಮಾವಿನ ಹೋಳು ಇರಲಿ.

ನಾನ್ ಸ್ಟಿಕ್ ತಪಲೆ ಉತ್ತಮತಳ ಹತ್ತುವ ರಗಳೆಯಿಲ್ಲ.

ಇಂಡಕ್ಷನ್ ಸ್ಟವ್ ಆದೀತು ನಿಮಿಷದ ಲೆಕ್ಕದಲ್ಲಿ ಸ್ಟವ್ ಆರಿಸಬಹುದು.


ಒಂದು ಚಮಚ ತಾಜಾ ತುಪ್ಪ ಹಾಗೂ ಮಾವಿನ ಹೋಳು ಬಿಸಿಯಾಗುತ್ತ ಇದ್ದಂತೆ ರುಚಿಗೆ ತಕ್ಕಷ್ಟು ಕಾಳುಮೆಣಸಿನ ಹುಡಿ ಜೀರಿಗೆಹುಡಿ ಚಿಟಿಕೆ ಅರಸಿಣ ಉಪ್ಪು ಇರಲೀ ಅಂತ ತುಸು ಸಕ್ಕರೆ ಹಾಕಿರಿ ಸೌಟು ಆಡಿಸಿ ಹೋಳುಗಳು  ಮೆತ್ತಗೆ ಆದ ಕೂಡಲೇ ಸ್ಟವ್ ಆರಿಸಿ ಮಾವಿನ ಹೋಳು ಚಮಚದಲ್ಲಿ ತೆಗೆದು ಬಾಯಿಗೆ ಹಾಕಿಕೊಳ್ಳಲು ಬರುವಂತಿದ್ದರಾಯಿತು.   ಬಿಸಿಯಾಗಿಯೂ ತಿನ್ನಿ ಆರಿದ ನಂತರವೂ ತಿನ್ನಿ.   ಉಳಿದದ್ದನ್ನು ಫ್ರೀಜರ್ ಒಳಗಿರಿಸಿ ನಾಳೆ ತಿನ್ನಿ.  






Friday 7 July 2023

ಕತೆ ಕೇಳು ಪುಟ್ಟಕ್ಕ

 



ಕಾಗೆಯೂ ಗುಬ್ಬಿಯೂ ಪುರ್ರ್ ಪುರ್ರನೆ ಹಾರಾಡುತ್ತ ಇದ್ದಾಗ ಕಾಗೆಗೆ ಹಸಿವು ಆಯಿತು “ ಗುಬ್ಬಕ್ಕ ಇಲ್ಲೇ ಹತ್ತಿರ ಜಗ್ಗಣ್ಣನ ಅಂಗಡಿಯಿದೆ ಅಲ್ಲಿ ಬಿಸ್ಕತ್ತು ಚಾಕಲೇಟು ಸಿಗುತ್ತಾ ನೋಡುವ..” ಅಂದಿತು ಕಾಗೆ.


 ಜಗ್ಗಣ್ಣನ ಅಂಗಡಿಗೆ ಬಂದಾಗ ಕಾಗೆಗೆ ತಿನ್ನಲು ಏನೂ ಸಿಗಲಿಲ್ಲ.   ಗುಬ್ಬಿಯು ಅಂಗಳದಲ್ಲಿ ಅಲ್ಲಲ್ಲಿ ಬಿದ್ದಿದ್ದ ಅಕ್ಕಿ ಕಾಳು ರಾಗಿ ಕಾಳುಜೋಳದ ಕಾಳು ಗೋಧಿ ಕಡಿಗಳನ್ನು ಕೊಕ್ಕಿನಲ್ಲಿ ಕುಕ್ಕೀ ಕುಕ್ಕಿಹೆಕ್ಕಿ ತಿಂದು ಹೊಟ್ಟೆ ತುಂಬಿಸಿ ಕೊಂಡಿತು.   “ ಗುಬ್ಬೀ ಕುಡಿಯಲು ನೀರು ಸಿಗುತ್ತಾ ನೋಡು.. “


“ ನೀರು ಈಗ ಪ್ಲಾಸ್ಟಿಕ್ ಬಾಟಲುಗಳಲ್ಲಿ ಹಾಕಿಡೂದುನಮಗೆ ತೋಡಿನ ನೀರೇ ಗತಿ… “ ಎಂದಿತು ಕೀವ್ ಕೀವ್ ಗುಬ್ಬಿ.


ಮಳೆಗಾಲ ಅಲ್ವೇ ಹಿರಣ್ಯ ದೇಗುಲದ ತೀರ್ಥಧಾರೆ ಜಳಜಳನೆ ಹರಿದು ಬೀಳುವುದ ಕಂಡು ಹಕ್ಕಿಗಳೆರಡೂ ಪುರ್ ಪುರ್ರನೆ ರೆಕ್ಕೆ ಬಡಿಯುತ್ತ ಹಾರಿ ಬಂದುವು ಅದೆಲ್ಲಿತ್ತೊ ದೇಗುಲದ ಕಾವಲು ನಾಯಿ ತುಂಟಿ “ ಇದು ದೇವರ ನೀರು ಮುಟ್ಟಬೇಡಿ.. “ ಎಂದು ಬೌ.. ಬೌ.. ಬೊಗಳಿತು.

ಆಯ್ತಲ್ಲಹಾಗಿದ್ರೆ ನಾವು ಎಲ್ಲಿಗೆ ಹೋಗೋಣಾ ಅಂತೀಯಾ? “ ಕೇಳಿತು ಕಾವ್ ಕಾವ್ ಕಾಗೆ.


“ ತೋಟದ ಬದಿಗೆ ತೋಡಿನಲ್ಲಿ ನೀರಿದೆ.. ಅದನ್ನು ಕುಡಿಯಿರಿ.. “ ಉತ್ತರಿಸಿದ ತುಂಟಿ ಹಸುಗಳನ್ನು ಅಟ್ಟಲು ಓಡಿತು.


ಕಾಗೆಯೂ ಗುಬ್ಬಿಯೂ ತೋಡಿನತ್ತ ಪುರ್ ಪುರ್ ಎಂದು ಹಾರಿದುವು.


ಅಲ್ಲಿ ನೋಡಿದ್ರೇ ಬೆಳ್ಳ… ಪ್ರವಾಹದಂತೆ ಕೆಂಪು ನೀರು ಹರಿದು ಹೋಗುತ್ತಲಿದೆ.   


“ ಕಾಗಕ್ಕಾ  ನೀರು ಕುಡಿಯಲು ಇಳಿದರೆ ನಾನು ಬೆೊಳ್ಳದ ನೀರಿನಲ್ಲಿ ಕೊಚ್ಚಿ ಹೋಗಿ ಸಮುದ್ರ ಸೇರಿಯೇನು… “ ಎಂದಳು ಗುಬ್ಬಕ್ಕ.


“ ಹೌದಲ್ವೇ ನೀರು ನಮಗೆ  ಬೇಡ.. “ ಪುನಃ ರೆಕ್ಕೆ ಬಡಿದು ಪುರ್ ಎಂದು ಹಾರಲು ಹೊರಟ ಹಕ್ಕಿಗಳಿಗೆ ಅಲ್ಲೊಂದು ಬಾವಿ ಕಾಣಿಸಿತು ಬಾವಿಕಟ್ಟೆ ಮೇಲೆ ಫಳಫಳಿಸುವ ಚೆಂಬು ಚೆಂಬು ತುಂಬ ನೀರು.   “ ಆಹ ಇದಲ್ಲವೇ ನಮ್ಮ ಭಾಗ್ಯ.. “


 ಸಮಯದಲ್ಲಿ ಅದೆಲ್ಲಿದ್ದಳೋ ನಮ್ಮ ಪುಟ್ಟಕ್ಕ ಓಡಿ ಓಡಿ ಬಂದಳು.   “ ಅಮ್ಮ ಬಾ ಅಪ್ಪ ಬಾ..  ಕಾಗೆ ನಮ್ಮ ಬಾವಿ ನೀರು ಕುಡಿಯಲು ಬಂದಿದೆ… “


ಅಪ್ಪ ಅಮ್ಮ ಇಬ್ಬರೂ ಓಡೋಡಿ ಬಂದರು.   “ ಪಾಪ.. ಕಾಗೆ ನೀರು ಕುಡಿಯಲಿ. “ ಎಂದನು ಅಪ್ಪ.


“ ಕಾಗೆ ನೀರು ಕುಡಿದ್ರೆ ಚೆಂಬು ಬಾವಿಯೊಳಗಿದ್ದೀತುಇದಾಗದು.. “ ಎಂದಳು ಅಮ್ಮ.


ಚೆಂಬನ್ನು ನೆಲದ ಮೇಲಿರಿಸಿದ ಅಪ್ಪ ಹಕ್ಕಿಗಳೆರಡೂ ನೀರನ್ನು ಕುಡಿದು ಆನಂದದಿಂದ ಆಕಾಶದಲ್ಲಿ ಹಾರುತ್ತ ಮುಂದೆ ಸಾಗಿದುವು.   ಪುಟ್ಟಕ್ಕ ತನ್ನ ಅಪ್ಪ ಅಮ್ಮನ ಜೊತೆಗೂಡಿ ಮನೆಗೆ ತೆರಳಿದಳು.






ಕತೆ ಮುಗಿಯಿತು.   

ಮನೆಗೊಂದು ಪುಟ್ಟ ಮಗು ಬಂದಿದೆ ದಿನದ ಹೆಚ್ಚಿನ ಸಮಯವನ್ನು ನಿದ್ರೆಗೇ ಮೀಸಲಿಡುವ ಮಗು ಎಚ್ಚರದಲ್ಲಿದ್ದಾಗ ಎಲ್ಲವನ್ನೂಗಮನಿಸಲಾರಂಭಿಸುತ್ತದೆ ತನ್ನ ಸುತ್ತಮುತ್ತಪ್ರೀತಿಪಾತ್ರರನ್ನು ಪಕ್ಕ ಸಳೆಯುತ್ತದೆ  ಸಮಯದಲ್ಲಿ ನಾವು ಮಗುವಿನೊಂದಿಗೆ ಸಂವಹನ ಪ್ರಾರಂಭಿಸಲೇ ಬೇಕು.   ಹಾಗಂತ ನಾವು ವಾಚಾಳಿಗಳಲ್ಲ ಅದಕ್ಕಾಗಿ ನಾನು ಆಯ್ದು ಕೊಂಡಿದ್ದು ಕತೆ ಹೇಳುವ ಸಲ್ಲಾಪ.   ಸರಳ ಭಾಷೆಯಲ್ಲಿ ಮಗುವಿನ ಬಾಲ ಭಾಷೆಯಲ್ಲಿ ಕಣ್ಣರಳಿಸಿ ಹಾವ ಭಾವಗಳೊಂದಿಗೆಧ್ವನಿಯ ಏರಿಳಿತದೊಂದಿಗೆ ಹೇಳಬೇಕಾಗುತ್ತದೆ ಪುಸ್ತಕ ಓದಿದಂತೆ ಹೇಳಿದರಾಗದು.

ನಮ್ಮ ಮಗುವಿಗೆ ಅರ್ಥವಾಗುವುದು ಮುಖ್ಯವಲ್ಲ.   ನೀವು ನಂಬ್ತೀರೋ ಗೊತ್ತಿಲ್ಲ ಕತೆ ಕೇಳುತ್ತ ಕೇಳುತ್ತ ಅದೂ ಒಂದು ದಿನ ನಾಲಿಗೆ ಹೊರಳಿಸಿ ಒಂದಕ್ಷರ ಉಚ್ಚರಿಸಿಯೇ ಬಿಟ್ಟಿತು!   ಹಹ