Pages

Ads 468x60px

Monday 29 November 2021

ಮುಳ್ಳು ಸೌತೆ ದೋಸೆ

 


ಮುಳ್ಳುಸೌತೆಯಿಂದ ಮಾಡಬಹುದಾದ ವಿವಿಧ ಅಡುಗೆಗಳನ್ನು ಬಹಳ ಹಿಂದೆಯೇ ಬರೆದಿದ್ದೇನೆ ಈಗ ಎಲ್ಲರೂ ಬಯಸುವ ದೋಸೆಯ ಒಂದು ವಿಧ ಇಲ್ಲಿದೆ.


ಮುಳ್ಳುಸೌತೆಯ ದೋಸೆ ಕೇವಲ ಅಕ್ಕಿಯ ಹೊಂದಾಣಿಕೆಯಿಂದ ಮಾಡುವುದು ಸಾಂಪ್ರದಾಯಿಕ ವಿಧಾನ.

ಅಕ್ಕಿತೆಂಗಿನಕಾಯಿ ಸೇರಿಸಿ ಇನೊಂದು ವಿಧ.

ಅಕ್ಕಿ ತೆಂಗುಬೆಲ್ಲ ಕೂಡಿ ಮಾಡುವುದು ಮತ್ತೊಂದು ವಿಧ.

ಅತ್ಯಲ್ಪ ಪ್ರಮಾಣದಲ್ಲಿ ಮೆಂತೆಉದ್ದು ಸೇರಿದ ದೋಸೆ..  ಹೀಗೆ ಹಲವಾರು ಕ್ರಮದಲ್ಲಿ ಮುಳ್ಳುಸೌತೆ ದೋಸೆ ಕಾವಲಿಯಿಂದ ಎದ್ದುಬರುತ್ತದೆ.


ನನ್ನ ಬಳಿ ಪಂಚರಂಗೀ ಬೇಳೆ ಇನ್ನೂ ಮುಗಿದಿಲ್ಲಅಂಗಡಿಯಿಂದ ತಂದ ಒಂದು ಮುಳ್ಳುಸೌತೆ ಇದೆ

ಮೊದಲು ಮೂರು ಲೋಟ ಅಕ್ಕಿ ನೆನೆಯಲು ಹಾಕುವುದು.

ಒಂದು ಲೋಟ ತುಂಬುವಷ್ಟು ಉದ್ದಿನ ಬೇಳೆ ಹಾಗೂ ಪಂಚರಂಗಿ ಬೇಳೆ ಇರಲಿ ಎರಡು ಚಮಚ ಮೆಂತ್ಯದ ಕಾಳು ಬೇಳೆಕಾಳುಗಳನ್ನು ಒಂದೇ ಬಾರಿ ತೊಳೆದು ನೀರೆರೆದು ಇಡುವುದು.

ಪಂಚರಂಗಿ ಬೇಳೆ ಯಾವುದು

ಮಾರುಕಟ್ಟೆಯಲ್ಲಿ ಸಿಗುತ್ತದೆ ನಮ್ಮ ಅಡುಗೆ ಡಬ್ಬಿಯಲ್ಲಿರುವ ತೊಗರಿಬೇಳೆಹೆಸ್ರುಬೇಳೆಕಡ್ಲೆಬೇಳೆಹುರುಳಿಕಾಳು ಪಚ್ಚೆಸ್ರುಇತ್ಯಾದಿಗಳನ್ನು ಹೊಂದಿಸಿದರೆ ಆಯ್ತು ಪಂಚವರ್ಣದ ಐದು ಬಗೆಯ ಧಾನ್ಯಗಳು...


ಅಂದಾಜು ನಾಲ್ಕು ಗಂಟೆ ನೆನೆಯಲಿ.

ಮನೆಯ ಸದಸ್ಯರ ಸಂಖ್ಯೆಗನುಗುಣವಾಗಿ ಅಕ್ಕಿ ಹಾಕಿರಿ.

ನಾನು ಒಂದೂವರೆ ಲೋಟ ಅಕ್ಕಿ ತಗೊಂಡಿದ್ದು ಅದಕ್ಕೆ ಒಂದು ಮುಳ್ಳುಸೌತೆ ಸಾಕಾಯಿತು.  

ಮುಳ್ಳುಸೌತೆ ತೊಳೆದು ತುರಿಯಿರಿ.

ಬೇಳೆಕಾಳುಗಳೂ ಅಕ್ಕಿಯೂಮುಳ್ಳುಸೌತೆಯೂ ನುಣ್ಣಗೆ ಅರೆಯಲ್ಪಟ್ಟು ರುಚಿಗೆ ಉಪ್ಪು ಬೆರೆಸಿಉಪ್ಪು ಬೆರೆಸಿ ಹುದುಗು ಬರಲುಇಟ್ಟಾಯ್ತು ಈಗ ಚಳಿ ಅಲ್ವೇ ಬೆಚ್ಚಗಿನ ಜಾಗದಲ್ಲಿ ಇರಿಸಿ.


ಮುಂಜಾನೆ ತೆಂಗಿನಕಾಯಿ ಚಟ್ಣಿಯೊಂದಿಗೆ ದೋಸೆ ಸವಿಯಿರಿ.

ಮುಳ್ಳುಸೌತೆ ಹಸಿಯಾಗಿ ತಿನ್ನಲು ಎಲ್ಲರಿಗೂ ಇಷ್ಟವಾಗುವುದಿಲ್ಲಹೀಗೆ ತಿನ್ನಿ ತೂಕ ಇಳಿಸಿ.



Tuesday 23 November 2021

ಪಾಲಕ್ ಸವಿರುಚಿ


 ಅಮ್ಮ,  ಕಾಸರಗೋಡಿನಲ್ಲಿ  ಸೊಪ್ಪು ಸಿಕ್ಕಿತು,  ಇದು ಪಾಲಕ್ಇದು ಮತ್ತೊಂದು ಮೆಂತೆ ಸೊಪ್ಪು.. "


ಮೆಂತೆ ಸೊಪ್ಪು ಅಂದ್ರೆ ಇದಲ್ವ..  ಪಾಲಕ್ ಆದ್ರೂ ಯಾವಾಗಲೋ ತಂದಿತ್ತುಬೇಗ ಹಾಳಾಗುತ್ತೆ,"

ಫ್ರಿಜ್ ಒಳಗೂ ಇಡಬೇಡ.. "

ಸರಿ ಇವತ್ತೇ ಅಡುಗೆ ಮಾಡೂದು. "


ಎರಡೂ ಬಗೆಯ ಸೊಪ್ಪು ಸೇರಿದ ಸಾರು ಆಯ್ತು ಆಂಧ್ರ ಶೈಲಿಯ ದಾಲ್ ಪಪ್ಪು ಮಾಡಿ ಸವಿದೆವು.   

ಮಾಡಿದ್ದು ಹೇಗೆ

ವಿಧಾನಕ್ಕಾಗಿ ಗೂಗಲ್ ಅಜ್ಜಿಯನ್ನು ಕೇಳಲಾಯಿತು ಮೊದಲೇ ಬಸ್ಸಾರು ಬರೆದಿದ್ದೇನೆಇದು ತುಸು ಭಿನ್ನ ಅಲ್ಪ ಸ್ವಲ್ಪ ವ್ಯತ್ಯಾಸದಿಂದ ಅಡುಗೆಯ ಪ್ರಕಾರವೇ ಬದಲಾಗುವ ವಿಸ್ಮಯ ಇಲ್ಲಿ ಸಿಕ್ಕಿತು.  


ಪಾಲಕ್ ಹಾಗೂ ಮೆಂತೆ ಸೊಪ್ಪು ತೊಳೆದು ಕತ್ತರಿಸುವುದುಅವಶ್ಯಕತೆಗೆ ತಕ್ಕಷ್ಟು ಹೆಚ್ಚಿದರೆ ಸಾಕು.

ಎರಡು ನೀರುಳ್ಳಿಎರಡು ಟೊಮ್ಯಾಟೋ ಕತ್ತರಿಸಿ ಇಡುವುದು.

ನಾಲ್ಕು ಬೆಳ್ಳುಳ್ಳಿ ಎಸಳು ಶುಂಠಿ ಹಾಗೂ ಹಸಿಮೆಣಸು.

ಕೊತ್ತಂಬರಿ ಸೊಪ್ಪು ಇದ್ದರೆ ಉತ್ತಮ.

ತೊಗರಿಬೇಳೆ ಬೇಯಿಸಿಕೊಳ್ಳಿ ನನ್ನ ಬಳಿ ಪಂಚರಂಗಿ ದಾಲ್ ಕೂಡಾ ಇದ್ದಿತು ಅದನ್ನೂ ಹಾಕಲಾಯಿತು.

ಬಾಣಲೆಯಲ್ಲಿ ಒಗ್ಗರಣೆಗಿಟ್ಟು ಟೊಮ್ಯಾಟೋ ಇತ್ಯಾದಿಗಳನ್ನು ಒಗ್ಗರಣೆಯಲ್ಲೇ ಬೇಯಿಸಿ.

ನಂತರ ಸೊಪ್ಪುಗಳನ್ನು ಹಾಕಿ ಮುಚ್ಚಿ ಬೇಯಿಸಿ.

ಜಾಸ್ತಿ ನೀರು ಹಾಕಬೇಕಿಲ್ಲ.

ರುಚಿಗೆ ಉಪ್ಪು ,  ಚಿಟಿಕೆ ಅರಸಿಣ ಹಾಕತಕ್ಕದ್ದು.

ಬೆಂದ ನಂತರ ಬೇಯಿಸಿಟ್ಟ ತೊಗರಿಬೇಳೆ ಎರೆಯಿರಿ.

ಮೇಲಿನಿಂದ ಘಮಘಮಿಸುವ ತುಪ್ಪ ಒಂದೆರಡು ಚಮಚ ಎರೆದು,

ಕೊತ್ತಂಬರಿ ಸೊಪ್ಪು ಉದುರಿಸಿಮುಚ್ಚಿ ಇಡುವುದು.

ಇದು ಅನ್ನಕ್ಕೆ ಮಾತ್ರವಲ್ಲದೆ ರಾಗಿಮುದ್ದೆಚಪಾತಿಪರಾಠಾನಾನ್ಇಡ್ಲಿ ದೋಸೆಗಳಿಗೂ ಹಿತವಾದ ವ್ಯಂಜನ.



ಆದರೂ ಪಾಲಕ್ ಸೊಪ್ಪು ಉಳಿಯಿತು ಸೊಪ್ಪನ್ನು ಬೇಯಿಸಿ ಇಟ್ಟಾಯ್ತು.

ಲೋಟ ಅಕ್ಕಿ ನೆನೆಸಿಟ್ಟು  ದೋಸೆಗೆ ಅರೆಯುವಾಗ ಬೇಯಿಸಿಟ್ಟ ಸೊಪ್ಪನ್ನು ನೀರು ಸಹಿತವಾಗಿ ಹಾಕಿದುದರಲ್ಲಿ ಹಸಿರು ಬಣ್ಣದಹಿಟ್ಟು ದೊರೆಯಿತು.

ಸರಳವಾದ ನೀರು ದೋಸೆ  ರೂಪದಲ್ಲಿ ತಿನ್ನುವಂತಾಯಿತು.   ರುಚಿಕರವಾಗಲಿ ಅಂತ ಶುಂಠಿ ಹಾಗೂ ಹಸಿಮೆಣಸು ಅರೆಯುವಾಗ ಹಾಕಿದ್ದೇನೆ. " ಎಂದು ದೋಸೆ ತಿನ್ನುತ್ತಿದ್ದಾಗ ಹೇಳದಿದ್ದರಾದೀತೇ..

ಹಾಗೆ ಅನ್ನು.. " ಎಂದ ಮಧು.

ಹೀಗೇ ಉದ್ದಿನ ದೋಸೆಯನ್ನೂ ಮಾಡಲಿಕ್ಕಾಗುತ್ತದೆ ಮಾಡಿ ಫೋಟೊ ತೆಗೆದಿರಿಸಿದ್ದು ಗ್ಯಾಲರಿಯಲ್ಲಿದೆ ಹುಡುಕಬೇಕಷ್ಟೇ.."


ಉದ್ದಿನ ದೋಸೆಗಾಗಿ ಎಂದಿನಂತೆ 3 ಅಳತೆ ಅಕ್ಕಿ ಹಾಗೂ ಒಂದು ಅಳತೆ ಉದ್ದು ನೆನೆಸಿಟ್ಟು ಅರೆಯಿರಿ ಅರೆಯುವಾಗ ಬೇಯಿಸಿಟ್ಟ ಪಾಲಕ್ ಸೊಪ್ಪನ್ನೂ ಹಾಕಿದರಾಯಿತು..

ದೋಸೆ ಸೊಗಸಾಗಿ ಎದ್ದು ಬರುತ್ತದೆ.

ತೆಂಗಿನಕಾಯಿ ಚಟ್ಣಿಯೊಂದಿಗೆ ಕೂಡಿ ತಿನ್ನಲು ಹಿತ.

ಇದೇ ಮಾದರಿಯಲ್ಲಿ ಹಸಿರು ಬಣ್ಣದ ಇಡ್ಲಿ ಮಾಡಬಹುದಿತ್ತು ಸೊಪ್ಪು ಮುಗಿದಿದೆ...


ಇಂದಿನ ರೋಗಪೀಡಿತ ಸಮಾಜದಲ್ಲಿ ಪಾಲಕ್ ಸೊಪ್ಪು ಸೇವನೆ ಪರಿಣಾಮಕಾರಿ ಕ್ಯಾಲ್ಸಿಯಂ ಒಂದೇ ಸಾಕು ಹಲ್ಲುಗಳ ರಕ್ಷಣೆ.

ನಾರಿನಂಶ ಅಧಿಕ,   ಕರುಳುಗಳ ಶುದ್ಧಿ ಕಾಂತಿಯಿಂದ ಹೊಳೆಯುವ ದೇಹ ಸೌಂದರ್ಯ ಪಡೆಯಿರಿ.

ಕಬ್ಬಿಣಾಂಶ ಹಾಗೂ ವಿಟಮಿನ್  ಕಣ್ಣುಗಳ ರಕ್ಷಕ.

ಪುರುಷರಲ್ಲಿ ವೀರ್ಯವರ್ಧಕ.

ಹೃದಯರೋಗಿಗಳಿಗೂಮಧುಮೇಹಿಗಳಿಗೂಅತಿ ತೂಕದ ದೇಹದವರಿಗೂ ಪ್ರಕೃತಿ ನೀಡಿದ ಔಷಧಿ  ಪಾಲಕ್ ಸೊಪ್ಪು.


ಬಹುತೇಕ ಬಸಳೆಯನ್ನೇ ಹೋಲುವ ಪಾಲಕ್ amaranthaceae, ಕುಟುಂಬಕ್ಕೆ ಸೇರಿದೆ ಬೇಯಿಸಿದರೂ ತನ್ನ ತಾಜಾ ಹಸಿರುಬಣ್ಣವನ್ನು ಬಿಟ್ಟುಕೊಡದ ಸಸ್ಯ.

ಸಸ್ಯವಿಜ್ಞಾನಿಗಳು Spinacia oleracea ಎಂಬ ಹೆಸರನ್ನು ದಯಪಾಲಿಸಿದ್ದಾರೆ.



Sunday 14 November 2021

ಬೀಟ್ರೂಟ್ ಸ್ವೀಟ್

 



ಎರಡು ದೊಡ್ಡ ಗಾತ್ರದ ಬೀಟ್ ರೂಟ್ ಗೆಡ್ಡೆಗಳಿವೆ,   ನಾಳೆ ಬೆಂಗಳೂರಿಗೆ ಹೊರಡುವುದಿದೆ ಬರುವಾಗ ವಾರ ಆಗುತ್ತೊ ತಿಳಿಯದು ಅಂತೂ  ಬಾರಿ ದೀಪಾವಳಿ ಮಕ್ಕಳ ಮನೆಯಲ್ಲಿ.


ತುಪ್ಪ ಸಕ್ಕರೆ ಇರುವಾಗಬೀಟ್ರೂಟ್ ಸಿಹಿ ತಿನಿಸು ಮಾಡಿಯೇ ಬಿಡೋಣ.


ಬೀಟ್ರೂಟು ಸಿಪ್ಪೆ ಹೆರೆದು ತುರಿಯಿರಿ.

ಮೂರು ದೊಡ್ಡ ಲೋಟ ತುಂಬ ಬೀಟ್ರೂಟು ತುರಿ ಸಿಕ್ಕಿತು.

ಸಕ್ಕರೆ ಅರ್ಧದಷ್ಟು ಸಾಕು ಬೀಟ್ರೂಟು ಸ್ವಲ್ಪ ಸಿಹಿಯೇ ಇರುತ್ತದೆ.

ಬೇಯಿಸಲಿಕ್ಕೆ ಒಂದು ಲೋಟ ಹಾಲು ಇರಬೇಕು.

ದಪ್ಪ ಬಾಣಲೆ ಒಲೆಗೇರಿಸಿ ನಾನು ಇಂಡಕ್ಷನ್ ಸ್ಟವ್ ಉಪಯೋಗಿಸಿದ್ದು ಬೇಗ ಆಗುತ್ತೆ ಅಷ್ಟೇ ಸಮಯದ ಲೆಕ್ಕಾಚಾರವೂ ಇಲ್ಲಿ ಸಿಗುತ್ತದೆ ಹಾಗಾಗಿ ನನ್ನ ಸಿಹಿ ತಿನಿಸು ಕೇವಲ ಹದಿನೈದು ನಿಮಿಷಗಳಲ್ಲಿ ಆಗಿಯೇ ಹೋಯ್ತು ನಾಳೆ ಹೊರಡುವುದಿದೆಯಲ್ಲ..


ಬಾಣಲೆಗೆ ತುಪ್ಪ ,  ಅಂದಾಜು ಅರ್ಧ ಸೌಟು ಎರೆದು ಬೀಟ್ರೂಟು ತುರಿ ಸುರಿದುಸೌಟಾಡಿಸಿ ಸ್ವಲ್ಪ ಸ್ವಲ್ವವೇ ಹಾಲು ಎರೆಯುತ್ತ ಬೇಯಿಸಿಕೊಳ್ಳಿ.

ಇಟ್ಟಂತಹ ಹಾಲು ಮುಗಿಯಿತುಬೀಟ್ರೂಟು ಬೆಂದಿದೆ.

ಹಾಲು ಎರೆದದ್ದು ಹೆಚ್ಚಾಯ್ತೇನೋ ಎಂದು ಚಿಂತಿಸದಿರಿ ಹಾಲು ರುಚಿವರ್ಧಕ ಎಂದು ತಿಳಿಯಿರಿ.

ಇದೀಗ ಸಕ್ಕರೆ ಹಾಕುವ ಸಮಯ ಒಂದೂವರೆ ಲೋಟ ಸಕ್ಕರೆ ಅಳೆದು ಸುರಿಯಿರಿ.

ಸಕ್ಕರೆ ಕರಗುತ್ತಿರಲಿ.


ಏಲಕ್ಕಿ ಒಣದ್ರಾಕ್ಷಿ ಗೇರುಬೀಜಗಳು ಹೊರ ಬರಲಿ.

ಏಲಕ್ಕಿ ಗುದ್ದಿರಿ ಅಂದ ಹಾಗೆ ಅಳಿಯ ತಂದ್ಕೊಟ್ಟ ಕೇಸರಿ ಇದೆಯಲ್ಲ ಅದನ್ನೂ ಪ್ಯಾಕ್ ಬಿಡಿಸಿದ್ದಾಯ್ತು.



ಸೌಟಾಡಿಸುತ್ತ ಗಟ್ಟಿಯಾಗುತ್ತ ಬಂದಿದೆ ತುಪ್ಪ ಇನ್ನಷ್ಟು ಹಾಕಲಡ್ಡಿಯಿಲ್ಲ

ಕೊನೆಯ ಹಂತದಲ್ಲಿ ಎರಡು ಚಮಚ ಜೋಳದ ಹಿಟ್ಟು ಹಾಕಿ ಚೆನ್ನಾಗಿ ತಿರುವಿ ಹಲ್ವ ಬೇಗನೆ ಗಟ್ಟಿಯಾಗಲು ಇದು ಒಂದು ಉಪಾಯ.

ಸುವಾಸಿತ ದ್ರವ್ಯಗಳನ್ನು ಹಾಕುವ ಸಮಯ,

ತಳ ಬಿಟ್ಟು ತುಪ್ಪವೂ ಬೇರ್ಪಡುವಂತಾದಾಗ ಸ್ಟವ್ ಆರಿಸಿಬಾಣಲೆ ಕೆಳಗಿಳಿಸಿ.

ಇನ್ನೊಂದು ತಟ್ಟೆಗೆ ತುಪ್ಪ ಸವರಿ ಬೀಟ್ರೂಟ್ ಹಲ್ವ ಸುರಿದುಸಪಾಟಾಗಿ ಸೌಟಿನಲ್ಲಿ ತಟ್ಟಿರಿ.

ಅಂತೂ ಕಾಲು ಗಂಟೆಯಲ್ಲಿ ಆಗಿ ಹೋದ ಹಲ್ವ ಊಟದ ಸಿಹಿಯೂ ಆಯ್ತು,   ನಮ್ಮ ಮನೆ ಯಜಮಾನರೂ ಆಗ ತಾನೇ ಆದಹಲ್ವವನ್ನು ಇಷ್ಟ ಪಟ್ಟು ತಿಂದರು.


ಹೇಗೂ ನಾವಿಬ್ಬರೇ ತಿಂದು ಮುಗಿಯುವಂತದ್ದಲ್ಲ ಬೆಂಗಳೂರಿಗೆ ತೆರಳಲು ಪ್ಯಾಕ್ ಮಾಡಿ ಇಟ್ಟೂ ಆಯ್ತು ಎಲ್ಲರೂ ಸಿಹಿ ಹಂಚಿ ತಿನ್ನೋಣ.