Pages

Ads 468x60px

Friday 31 March 2023

ಉಪ್ಪಿನಕಾಯಿ ಹೊರಡಿ

 



ಹಸಿ ಮಸಾಲೆ ಹೇಗೆ?


ಬೇಕಾಗುವ ಸಾಮಗ್ರಿ

ಮೆಣಸು ಸಾಸಿವೆ ಅರಸಿಣ


ನಾನು ಮೆಣಸಿನ ಹುಡಿಯನ್ನು ಬಳಸಿದ್ಜೇನೆ ಸಾಮಾನ್ಯವಾಗಿ 3 ಅಳತೆ ಮೆಣಸು ಅಂದರೆ ಒಂದು ಅಳತೆ ಮೆಣಸಿನ ಹುಡಿ ಎಂದು ತಿಳಿಯಿರಿ.

ಒಂದು ಅಳತೆ ಸಾಸಿವೆ ಹಾಗೂ ಮೂರನೇ ಒಂದರಷ್ಟು ಅರಸಿನ ಇರಲಿ.


ಅಳತೆ ಆಯ್ತು.

ಇದನ್ನು ಹಾಗೇನೇ ಹುಡಿ ಮಾಡಿದರಾಯ್ತು.   ಸಾಸಿವೆ ನುಣ್ಣಗೆ ಆದ ನಂತರ ಮೆಣಸಿನ ಹುಡಿ ಅರಸಿನ ಹುಡಿ ಸೇರಿಸಿ ಬೆರೆಸಿ ಎಲ್ಲವನ್ನೂ ಮಿಕ್ಸಿ ಮಾಡಿಕೊಡುತ್ತೆ ಜಾರ್ ಮಾತ್ರ ನೀರ ಪಸೆ ಇರದೆ ಶುಭ್ರವಾಗಿರಬೇಕು.


ಹುರಿದ ಮಸಾಲೆ


ಜೀರಿಗೆ ಮೆಂತೆಇಂಗು ಹುರಿಯಿರಿ ಸ್ವಲ್ಪ ಸ್ವಲ್ಪ ಸಾಕು.

ಎಣ್ಣೆ ಹಾಕಿಯೂ ಹಾಕದೆಯೂ ಹುರಿಯಬಹುದು.

ಸಾಸಿವೆ ಅರ್ಧ ಲೋಟ ಸೇರಿಸಿ  ಸಿಡಿಯುವ ತನಕ ಹುರಿಯಿರಿ ಅಂದಾಜು ನಾಲ್ಕು ನಿಮಿಷ ಬೇಕಾದೀತು.

ನಂತರ ಅರ್ಧ ಲೋಟ ಮೆಣಸಿನ ಹುಡಿ, 2 ಚಮಚ ಅರಸಿನ ಸೇರಿಸಿ ಬೆರೆಸಿಕೊಳ್ಳಿ.   ಕೂಡಲೇ ಸ್ಟವ್ ನಂದಿಸಿ ತಣಿಯಲು ಬಿಡಿ.


ಚೆನ್ನಾಗಿ ಆರಿದ ನಂತರ ಹುಡಿ ಮಾಡಿ ಇಟ್ಟುಕೊಳ್ಳುವುದು.   

 ಹುರಿದ ಮಸಾಲೆಗೆ ಕಾಳುಮೆಣಸಿನ ಹುಡಿ ಬೆಳ್ಳುಳ್ಳಿ ಕರಿಬೇವು ಇತ್ಯಾದಿ ಹುರಿಯುವಾಗ ಸೇರಿಸಬಹುದಾಗಿದೆ.   ಪ್ರತಿ ಬಾರಿ ಹುಡಿ ಮಾಡಿದಾಗ ವಿಭಿನ್ನ ರುಚಿಯ ಮಸಾಲೆ ನಮ್ಮದು ಸಾಂಬಾರ್ ಹುಡಿ ಮಾಡುವ ತರಹವೇ ಮಾಡಿದರಾಯ್ತು.  


ಕೊನೆಯಲ್ಲಿ ಶುಭ್ರವಾದ ಜಾಡಿಗೆ ತುಂಬಿಸಿ ಮುಚ್ಚಿ ಇಡುವುದು.


ನಮ್ಮ ಊರಿನ ಕ್ರಮದ ಉಪ್ಪಿನಕಾಯಿಗೆ ಎಣ್ಣೆ ಹಾಕುವುದಕ್ಕಿಲ್ಲ.

ಈಗ ವರ್ಷವಾದರೂ ಮುಗಿಯದಷ್ಟು ಉಪ್ಪಿನಕಾಯಿ ಹಾಕುವುದಕ್ಕೂ ಇಲ್ಲ ಆಯಾ ಋತುಮಾನದಲ್ಲಿ ಸಿಗುವ ಹುಳಿ ಮಿಶ್ರಿತಹಣ್ಣುಗಳೇ ನಮ್ಮ ಉಪ್ಪಿನಕಾಯಿಗಳು.   ಕರಂಡೆ ಅಂಬಟೆ ದಾರೆಹುಳಿ ಬೀಂಬುಳಿ ಲಿಂಬೆ

ನನ್ನ ಮಕ್ಕಳ ಬಳಗದಲ್ಲಿ ಎಳೆಯ ಸೌತೇಕಾಯಿ ಭಲೇ ಫೇಮಸ್…..



Saturday 25 March 2023

ಬಚ್ಚಂಗಾಯ್ ಉಪ್ಪಿನಕಾಯ್

 


ಬಚ್ಚಂಗಾಯಿ ಹೋಳು ಮಾಡುತ್ತ ಇದ್ದ ಹಾಗೆಥಟ್ ಎಂದು ಆಲೋಚನೆಯೊಂದು ಹುಟ್ಟಿತು  ಬಾರಿ ಬಚ್ಚಂಗಾಯಿ ಸಿಪ್ಪೆಯಿಂದ ಉಪ್ಪಿನಕಾಯಿ ಹಾಕಿದರೆ ಹೇಗೆ?


“ ಅಡ್ಡಿಯಿಲ್ಲಹೇಗೆ ಹಾಕಿದ್ರೀ.. ?  


ಜಾಡಿ ಹಿಡಿಸುವಷ್ಟೇನೂ ಹೆಚ್ಚಿ ಹಾಕಿಲ್ಲ ನಮಗಿಬ್ಬರಿಗೆ ಎರಡು ಹೊತ್ತಿನ ಊಟಕ್ಕೆ ಸಾಕಾಗುವಷ್ಟು ಹೆಚ್ಚಿದ್ದು ಅಷ್ಟೇ ಅದರಲ್ಲಿಯ ಹಸಿರು ಸಿಪ್ಪೆ ಹೆರೆದು ತೆಗೆಯಬೇಕು ನಂತರ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ


ಉಪ್ಪಿನಕಾಯಿ ಹಸಿ ಹೊರಡಿ (ಮಸಾಲೆಹಾಗೂ ಹುರಿದ ಹೊರಡಿಗಳೆರಡೂ ಅಡುಗೆ ಮನೆಯೊಳಗೆ ಇತ್ತು ಬಿಡುವಿದ್ದಾಗ ಮಾಡಿಇಟ್ಕೊಂಡಿದ್ದು ಕಣ್ರೀ..


ಎರಡೂ ವಿಧದ ಮಸಾಲೆಗಳನ್ನು ಒಂದೊಂದು ಚಮಚ ಬೆರೆಸಿ ಹೊಂದಿಸುವಲ್ಲಿಗೆ ಉಪ್ಪಿನಕಾಯಿ ಸಿದ್ಧವಾಗಿ ಬಿಟ್ಟಿತು.  


ನಮ್ಮ ಮನೆ ಯಜಮಾನರಂತೂ  ಉಪ್ಪಿನಕಾಯಿ ತಿಂದು ಪುಟ್ಟ ಭಾಷಣ ಬಿಗಿದರು “ ಹೌದೂ,   ದೊಡ್ಡ ಸಮಾರಂಭ ಇರುವಾಗ ಬಚ್ಚಂಗಾಯಿ ಜ್ಯೂಸು ಮಾಡುವುದು ಸಿಪ್ಪೆ ಅತ್ತ ಬಿಸಾಡುವುದು ಊಟದ ಸಮಯಕ್ಕೆ ಬೇರೇನೋ ಉಪ್ಪಿನಕಾಯಿ..  ಮೇಲೋಗರಕ್ಕೆ ಇನ್ಯಾವುದೋ ತರಕಾರಿ ನೋಡೋಣ ಮುಂದಿನ ಬಾರಿ ಅಡುಗೆಯವರ ಬಳಿ ಹೇಳಬೇಕು ತರಕಾರಿ ಹೆಚ್ಚುವ ಸುಧರಿಕೆಯವರು ಬಚ್ಚಂಗಾಯಿ ಕೊಚ್ಚಿ ಕೊಡಲಿಕ್ಕಾಗದು ಎಂದೇನೂ ಹೇಳುವವರಲ್ಲ. “


“ ಮೇಲೋಗರ ಆಗದಿದ್ರೆ ಬೇಡ ಪಲ್ಯ ಆದರೂ 

ಮಾಡಬಹುದು.





 

Tuesday 14 March 2023

ಕಾಯಿ ನೀರಿನ ದೋಸೆ

 











ಬೆಳಗ್ಗೆ ತೆಂಗಿನಕಾಯಿ ಒಡೆದ ನೀರನ್ನು ಗ್ಲಾಸಿನಲ್ಲಿ ತೆಗೆದಿಟ್ಟುಅರ್ಧ ಚಮಚ ಸಕ್ಕರೆ ಬೆರೆಸಿ,  ಸಂಜೆ ದೋಸೆಗೆ ಅರೆಯುವಾಗ ಸೇರಿಸತಕ್ಕದ್ದು.    ಐಡಿಯಾವನ್ನು ಇಡ್ಲಿ,  ಪಾಲಪ್ಪಂ,  ಇತ್ಯಾದಿ ಹುಳಿ ಬರಬೇಕಾದ ಹಿಟ್ಟುಗಳಿಗೆ ಉಪಯೋಗಿಸಬಹುದು.  ಚಳಿಗಾಲದಲ್ಲಿ ಉಪಯುಕ್ತ ಎಂದು ತಿಳಿಯಿರಿ.

ಇಂದಿನ ಕಾಯಿ ನೀರು ಮಾರನೇ ದಿನಕ್ಕೆ ಆಗದು ಹುಳಿ ವಾಸನೆ ಬಂದೀತು.


ದೋಸೆಯ ಅಳತೆ


ಲೋಟ ಬೆಳ್ತಿಗೆ ಅಕ್ಕಿ

ಲೋಟ ಕುಚ್ಚುಲಕ್ಕಿ ರಾಜಮುಡಿ ಅಕ್ಕಿ ಬೇಗನೆ ನುಣ್ಣಗೆ ಆಗುತ್ತದೆ ರೇಶನ್ ಶಾಪಿನ ಬೆಳ್ತಿಗೆ ಅಕ್ಕಿಯೂ ಬೇಗನೆ ನುಣ್ಣಗೆಆಗುತ್ತದೆ  ಎರಡೂ ಪ್ರತಿ ಅಕ್ಕಿಗಳನ್ನು ಒಟ್ಟಿಗೇ ತೊಳೆದು ನೆನೆಯಲು ಹಾಕಿರಿಸಬಹುದು.    ವಿಧಾನ ನಮ್ಮ ಪಾರಂಪರಿಕ ಕ್ರಮಎಂದು ತಿಳಿದಿರಲಿ.   ಸಂಜೆ ರುಬ್ಬುವ ಕಲ್ಲಿನಲ್ಲಿ  ಅರೆಯಬೇಕಾದರೆ ಮುಂಜಾನೆಯೇ ಕುಚ್ಚುಲಕ್ಕಿ ಬೆಳ್ತಿಗೆ ಅಕ್ಕಿಗಳನ್ನು ನೆನೆಯಲುಹಾಕಿ ಕಲ್ಲು ಜಳ್ಳು ಸೋಸಿ ಇಡಬೇಕಾಗಿತ್ತು ಈಗ ನಾವು ದಿಢೀರ್ ಯುಗದಲ್ಲಿದ್ದೇವೆ ಅಷ್ಟೇ.


ಬೇಳೆಕಾಳುಗಳು ಎಷ್ಟು?


ನಮ್ಮ ಉದ್ದೇಶ ಮೆಂತೆ ದೋಸೆಯ ತಯಾರಿಕೆ

ಚಮಚ ಮೆಂತೆ

ಚಮಚ ಉದ್ದಿನಬೇಳೆ

ಚಮಚ ಪಂಚರಂಗೀ ಬೇಳೆ

ಹೌದೂಪಂಚರಂಗಿ ಬೇಳೆ ಅಂದ್ರೇನು?

ಐದು ವಿವಿಧ ಬೇಳೆಗಳ ಮಿಶ್ರಣ ಅಷ್ಟೇ.

ನಿಮ್ಮೂರಿನಲ್ಲಿ ಸಿಗುವುದಿಲ್ಲವೇ ಅಡುಗೆಮನೆ ಡಬ್ಬದಲ್ಲಿ ಇರುವ ಬೇಳೆಗಳನ್ನೇ ಬಳಸಿದರಾಯ್ತು ತೊಗರಿ ಹೆಸ್ರು ಹುರುಳಿ ಕಡಲೆ ಇತ್ಯಾದಿ


ಮಾಮೂಲಿಯಾಗಿ ನಾವು ಮೆಂತೆ ದೋಸೆಗೆ ತುಸು ತೆಂಗಿನತುರಿ ಹಾಕುವುದಿದೆ ಇದಕ್ಕೂ ಹಾಕೋಣ.


ನೆನೆದ ಬೇಳೆಗಳನ್ನು ತೆಂಗಿನ ತುರಿ ಹಾಗೂ ತೆಂಗಿನನೀರು ಸೇರಿಸಿ ನುಣ್ಣಗೆ ಅರೆಯಿರಿ ಮಜ್ಜಿಗೆಯ ಬದಲು ಕಾಯಿನೀರು ಎಂದುತಿಳಿಯಿರಿ ಮಜ್ಜಿಗೆ ಕುಡಿದೇ ಮುಗಿಯುತ್ತೆ ಇನ್ನು ದೋಸೆಗೆ ಎಲ್ಲಿಂದ ತರೋಣ?


ನಂತರ ಅಕ್ಕಿಯನ್ನೂ ಅರೆದು ಸೇರಿಸಿಹಿಟ್ಟಿಗೆ ಉಪ್ಪು ಹಾಕಿ ಚೆನ್ನಾಗಿ ಬೆರೆಸಿ ಇಡತಕ್ಕದ್ದು ಹುದುಗು ಬರಲು 8 ಗಂಟೆಯ ಅವಧಿಇರಲೇ ಬೇಕು ಹಿಟ್ಟು ದೋಸೆ ಹಿಟ್ಟಿನ ಸಾಂದ್ರತೆಯಲ್ಲಿ ಇರತಕ್ಕದ್ದು.


ಮೂರು ನಾಲಕ್ಕು ಬಾರಿ ಮಾಡಿ ದೋಸೆ ಸವಿದಾಯ್ತು.   ಮೊನ್ನೆ ಮಧು ಬಂದಿದ್ದಾಗ ಪುನಃ ಮಾಡಿ ಅವನಿಗೂ ರುಚಿ ಹಿಡಿಸಿದ್ದಾಯ್ತು.  


ಈಗ ಬಿರು ಬೇಸಿಗೆಯ ಕಾಲ ಬಂದಿದೆ ಅಡುಗೆಮನೆಯಲ್ಲಿ ರಾಗಿ ಹುರಿಟ್ಟು ತರಿಸಿ ಇಟ್ಟಿದ್ದೇನೆ.   ಮುಂಜಾನೆ ಯಾವುದೇ ವಿಧಾನದ ದೋಸೆ ಮಾಡಿರಲಿ ಸಂಜೆಯ ಹೊತ್ತು ಒಂದೆರಡು ಚಮಚ ರಾಗಿ ಹುರಿಟ್ಟು ಸೇರಿಸಿ ದೋಸೆ ಹೊಯ್ಯುವ ರೂಢಿ ನನ್ನದು ನಮ್ಮವರೂ  ಕ್ರಮದ ದೋಸೆಯನ್ನು ಇಷ್ಟ ಪಟ್ಟು ತಿನ್ನುವವರು.   ಇನ್ನು ತುಂಟಿಯೂ ಕುಣಿದು ಕುಪ್ಪಳಿಸಿ ದೋಸೆ ನುಂಗುವವಳು…  ಇದು ಬೇಸಿಗೆಯ ಮಜಾ ಅನ್ನಿ.






Wednesday 1 March 2023

ಕಸದಿಂದ ರಸ



 ಬೇಸಿಗೆ ಬಂತಲ್ವೇ,  ಬಚ್ಚಂಗಾಯಿ ಮಾಮೂಲು,  ತಿನ್ನುವುದಕ್ಕಿಂತ ಹೆಚ್ಚು ಕಸ ವಿಲೇವಾರಿಯದ್ದೇ ಸಮಸ್ಯೆ ಆಗ್ಬಿಟ್ಟಿದೆ.


ಬೆಳಗಿನ ತಿಂಡಿಯ ನಂತರ ಹತ್ತು ಗಂಟೆಯ ಹೊತ್ತಿಗೆ ತಿನ್ನಲಿಕ್ಕಾಗಿ ಬಚ್ಚಂಗಾಯಿ ಹೋಳುಗಳು ತಯಾರಾದುವು ಪಕ್ಕದಲ್ಲಿ ಮಧ್ಯಾಹ್ನದ ಅಡುಗೆಗಾಗಿ ಸೌತೆಕಾಯಿ ಕಾಯುತ್ತಲಿತ್ತು ಸೌತೆಯೊಂದಿಗೆ ಬಚ್ಚಂಗಾಯಿ ಸಿಪ್ಪೆ ತರಕಾರಿ ಹೋಳುಗಳಾಗಿ ಮಾರ್ಪಟ್ಟಿತು.  


ತೊಗರಿ ಬೇಳೆ ಬೇಯಿಸಿದ್ದಾಯ್ತ ತರಕಾರಿ ಹೋಳುಗಳು ನಂತರ ಬೇಯಲಿ ಕುಕ್ಕರ್ ಒಂದು ಸೀಟಿ ಹಾಕಿದ ನಂತರ ಒತ್ತಡ ಇಳಿಸುತ್ತ ಬನ್ನಿ ನಂತರ ಮುಚ್ಚಳ ತೆರೆಯಿರಿ ಈಗ ಒಂದು ನೀರುಳ್ಳಿ ಹೆಚ್ಚಿ ಹಾಕಿರಿ.


ನಮ್ಮ ತೆಂಗಿನ ತುರಿಯೂ ಸಿದ್ಧವಿದೆ.   ಇನ್ನೇಕೆ ತಡ ಮಸಾಲೆ ಹುಡಿ ತಿಂಗಳಿಗಾಗುವಷ್ಟು ಮಾಡಿ ಇಡುವ ರೂಢಿ ನನ್ನದು.  

ತೆಂಗಿನತುರಿಮಸಾಲೆ ಹುಳಿ ಇತ್ಯಾದಿಗಳನ್ನು ಅರೆದು ಬೇಯಿಸಿದ ಸಾಮಗ್ರಿಗೆ ಕೂಡಿ ರುಚಿಗನುಸಾರ ಬೆಲ್ಲಉಪ್ಪು ಹಾಕಿ ಅವಶ್ಯಕತೆಗೆ ತಕ್ಕಷ್ಟು ನೀರೆರೆದು ಕುದಿಸಿ ಬೆಳ್ಳುಳ್ಳಿ ಹಾಗೂ ಕರಿಬೇವಿನ ಒಗ್ಗರಣೆ ಕೊಡುವಲ್ಲಿಗೆ ನಮ್ಮ ಅಡುಗೆ ಕಸದಿಂದ ರಸ ಸಿದ್ಧವಾಗಿದೆ.