Pages

Ads 468x60px

Tuesday 9 July 2024

ಹಣ್ಣಿನ ದೋಸೆ



ದೋಸೆಗಾಗಿ ಹಲಸಿನ ಸೊಳೆಗಳನ್ನು ಸಿದ್ಧಪಡಿಸಿ ಇಟ್ಟಿದ್ದ ರಂಗಣ್ಣ .

ಪಕ್ಕದ ಮನೆಯಿಂದ ಹಣ್ಣಿನ ಸೊಳೆಗಳು ಬಂದುವು.

“ ಕಾಯಿಸೊಳೆ ದೋಸೆ ಸುಮ್ಮನೆ, ಹಣ್ಣಿನದ್ದು ಇನ್ನೂ ಚೆನ್ನಾಗಿರುತ್ತದೆ. “

ರಂಗಣ್ಣನ ಸೊಳೆ ಫ್ರಿಜ್ ಒಳ ಹೋಯಿತು.


ಹಣ್ಣಿನ ದೋಸೆಗಾಗಿ ಎರಡು ಲೋಟ ಅಕ್ಕಿ ನೆನೆಯಿತು.

ಇದ್ದಿದ್ದು ಹತ್ತೋ ಹನ್ನೆರಡು ಸೊಳೆಗಳು.

ಮಿಕ್ಸಿಯಲ್ಲಿ ಹಣ್ಣುಸೊಳೆ ಮುದ್ದೆ ಆಯ್ತು,  ತೆಗೆದಿರಿಸಿ ,  ಅಕ್ಕಿಯನ್ನು ಅರೆಯಲಾಯಿತು.

ಅಕ್ಕಿ ನುಣ್ಣಗಾದ ನಂತರ ಹಣ್ಣಿನ ಮುದ್ದೆಯನ್ನು ಸೇರಿಸಿ ಇನ್ನೊಮ್ಮೆ ಅರೆದಾಗ ದೋಸೆ ಹಿಟ್ಟು ಪ್ರಾಪ್ತಿ.

ರುಚಿಗೆ ಉಪ್ಪು ಕೂಡಿ,  ಮುಚ್ಚಿ ಇರಿಸಲಾಯಿತು.

ಮಾರನೇ ದಿನ  ದೋಸೆ ಎರೆದು,  ಅಂಬಟೆ ಚಟ್ಣಿ ಕೂಡಿ ತಿನ್ನಲಾಯಿತು.

ಮಳೆಗಾಲದ ಸಮಯ,  ಹಲಸಿನ ಎಲ್ಲ ಖಾದ್ಯಗಳೂ ರುಚಿಕರ.