Pages

Ads 468x60px

Friday 11 September 2015

ಉಪ್ಪು ಸೊಳೆ ರೊಟ್ಟಿ







ಮಳೆಗಾಲದ ಮುಂಜಾನೆಗೊಂದು ತಿಂಡಿಯ ಸೊಗಸು ಉಪ್ಪು ಸೊಳೆ ರೊಟ್ಟಿ.   ನಮ್ಮ ಮನೆ ಮಕ್ಕಳು ದಿನಾ ಮಾಡಿ ಕೊಟ್ರೂ ತಿನ್ತಿದ್ರು,  ರೊಟ್ಟಿ ಮೇಲೆ ಬೆಣ್ಣೆ,  ಜೊತೆಗಿಷ್ಟು ಹುಡಿಬೆಲ್ಲ ಇದ್ದರೆ ಸ್ವರ್ಗವೇ ಧರೆಗಿಳಿದು ಬಂದಂತೆ !

ರೊಟ್ಟಿ ಮಾಡಲು ಉಪ್ಪು ಸೊಳೆ ಹಾಕಿಟ್ಟಾಗಿದೆ,  ಎರಡು ಅಥವಾ ಮೂರು ಹಿಡಿ ಸೊಳೆಗಳನ್ನು ಉಪ್ಪಿನಿಂದ ತೆಗೆದು ನೀರಿನಲ್ಲಿ ಹಾಕಿರಿಸಲೇ ಬೇಕು,  ಮನೆಯ ಹಿಂಭಾಗದಲ್ಲಿ ಹರಿದು ಬರುತ್ತಿರುವ ನೀರಿನ ಕಾಲುವೆಯಲ್ಲಿ ಒಂದು ಬಟ್ಟೆಯಲ್ಲಿ ಗಂಟು ಕಟ್ಟಿ ನೀರಿನಲ್ಲಿ ಮುಳುಗಿಸಿಟ್ಟರೂ ನಡೆಯುತ್ತದೆ,  ಉಪ್ಪೆಲ್ಲವೂ ನೀರಿಗೆ ಬಿಟ್ಟುಕೊಳ್ಳಲೇ ಬೇಕು.
ಸೊಳೆಯಲ್ಲಿನ ಉಪ್ಪಿನ ಸಾಂದ್ರತೆಯೆಲ್ಲವೂ ತೊಳೆದು ಹೋಯಿತು,  ನೀರಿನಿಂದ ತೆಗೆದು ಬಸಿದು ಇಟ್ಟಾಯ್ತು.

ಅರ್ಧ ಕಡಿ ತೆಂಗಿನ ತುರಿ.
ಎರಡು ಲೋಟ ಅಕ್ಕಿ ಹುಡಿ.
ತುಸು ಜೀರಿಗೆ.
ರುಚಿಗೆ ಉಪ್ಪು ಬೇಡ, ತಿಳಿಯಿತಲ್ಲ.
ಮೊದಲು ಸೊಳೆಗಳನ್ನು ಅರೆಯುವುದು,  ಕಾಯಿತುರಿ, ಜೀರಿಗೆ ಕೂಡಿಕೊಂಡು ಪುನಃ ತಿರುಗಿಸಿ ತೆಗೆಯುವುದು.
ಅಕ್ಕಿ ಹುಡಿ ಹಾಕಿಕೊಳ್ಳುವುದು.
ಮುದ್ದೆಯಾದ ಹಿಟ್ಟಿನಿಂದ ಉಂಡೆಗಳನ್ನು ಮಾಡಿಕೊಳ್ಳುವುದು.
ಬಾಳೆ ಎಲೆಗೆ ಎಣ್ಣೆ ಸವರಿ,  ಉಂಡೆಯನ್ನು ಇಟ್ಟು ರೊಟ್ಟಿಮಣೆಯ ಸಹಾಯದಿಂದ ರೊಟ್ಟಿ ತಟ್ಟುವುದು.  ( ಕೈಯಲ್ಲೇ ತಟ್ಟಿಕೊಳ್ಳಲೂ ಬರುತ್ತದೆ )

ಉಪ್ಪು ಸೊಳೆ ಧಾರಾಳ ಇರುವುದಾದರೆ ಅಕ್ಕಿಹುಡಿ ಇಲ್ಲದೆಯೂ ರೊಟ್ಟಿ ಮಾಡಬಹುದಾಗಿದೆ.
ನೀರುಳ್ಳಿ,  ಹಸಿಮೆಣಸು,  ಕರಿಬೇವು,  ಶುಂಠಿ, ಕೊತ್ತಂಬರಿ ಸೊಪ್ಪು ಇತ್ಯಾದಿ ಹಾಕಲಡ್ಡಿಯಿಲ್ಲ.



0 comments:

Post a Comment