Pages

Ads 468x60px

Wednesday 26 October 2022

ಗ್ರಹಣ

 


"ಇವತ್ತು ಗ್ರಹಣ ಗೊತ್ತುಂಟೊ? "

"ಹ್ಞಾ ಈಗ ತಾನೇ ಒಂದು ಬ್ಲಾಗ್ ಲೇಖನ ಫೇಸ್ ಬುಕ್ಕಲ್ಲಿ ಬಂದಿದೆ...”

ಅದೆಲ್ಲ ನಂಗೆ ಬೇಡ ನಾನು ಕಳಿಸಿದ ಟೆಲಿಗ್ರಾಂ  ಫೋಟೋಸ್ ನೋಡು.."


"ನೋಡಿ ಆಯ್ತು..  ಹಳೇ ಕಾಗದ ಪತ್ರದಲ್ಲಿ ಏನುಂಟು ಅಂತ ಒಮ್ಮೆ ಹೇಳಿ..."

"ಅದೇ ಗ್ರಹಣದ ವಿಷಯಅಂದಾಜು 200 ವರ್ಷ ಹಳೆಯದು ತಿಳೀತಾ.."

... ಹಾಗೆ ವಿಷಯ ಅನ್ನಿ ಅತಿ ಪುರಾತನ ಸಂಗ್ರಹ ಬರಹಗಳು ನಮ್ಮ ಬಳಿ ಇದೇ... "





“ ಇವು ಯಾವುದಾದರೂ ಪಂಚಾಂಗದ ಪುಟಗಳೇ? "  ಫೇಸ್ ಬುಕ್ ಮಿತ್ರರಾದ ಶ್ರೀಯುತ ಚಿದಂಬರ ಕಾಕತ್ಕರ್ ಪ್ರಶ್ನೆಯೊಂದನ್ನು ಎಸೆದರು.


 ಪಂಚಾಂಗ ಅಂತ ಹೇಳಲಿಕ್ಕೆ ಬರುವುದಿಲ್ಲ ಮಂಗಳೂರಿನ ಬಾಸೆಲ್ ಮಿಶನ್ ಪ್ರಕಟಿತ ಪುಸ್ತಕ ಕತೆಗಳೂ ಇದೆ ಕೆಲವೇ ಪುಟಗಳು ಲಭ್ಯವಾಗಿದ್ದು ನಮ್ಮ ಹಿರಿಯರು ಲೆಕ್ಕಪತ್ರ ಪುಸ್ತಕದ ಬೈಂಡ್ ಪೇಪರ್ ಆಗಿ ಬಳಸಿದ  ಕಾಗದದ ತುಣುಕುಗಳನ್ನು ಗಮನಿಸಿ ನನ್ನ ಪತಿ ಜೋಪಾನವಾಗಿ ಇರಿಸಿಕೊಂಡಿದ್ದಾರೆ...


 ತೆರನಾದ ಉತ್ತರ ನನ್ನಿಂದ ಹೋಯಿತು.


ಹಿರಣ್ಯದ ನೆಲದಲ್ಲಿರುವ ನಾಗಬನದ ಜೀರ್ಣೋದ್ಧಾರ ಕ್ರಿಯೆ ಆರಂಭವಾಗ ಬೇಕಾದರೆ ಒಂದು ಬಂಟ ಸಮುದಾಯ ನಮ್ಮೊಂದಿಗೆ ಸೇರಿಕೊಂಡಿದ್ದೇ ಕಾರಣವಾಯಿತು.   ಹಲವು ಅಷ್ಟಮಂಗಲ ಪ್ರಶ್ನೆಗಳೂ ನಡೆದು ದೈವ ಸಾನಿಧ್ಯವೂ ಇಲ್ಲಿದೆಯೆಂದು ತಿಳಿದು ಬಂದಿತು ಇದು ಎಲ್ಲರ ಉತ್ಸಾಹಕ್ಕೆ ಕಾರಣವೂ ಆಯಿತು.


ಬಾಯಾರು ಕಂಬಳಗುತ್ತು ಮನೆತನದ ಬಂಟ ಸಮುದಾಯ  ಮಣ್ಣಿನವರು ಎಂದೂ ದೃಢ ಪಟ್ಟಿತು ತದ ನಂತರ ಅಟ್ಟದಲ್ಲಿದ್ದ ಹಳೆಯ ಕಾಗದಪತ್ರಗಳು ಒಂದೊಂದಾಗಿ ಹೊರಬಂದವು.


ಬಂಟ ಸಮುದಾಯ ಇಲ್ಲಿ 200 ವರ್ಷಗಳ ಹಿಂದೆ ಇದ್ದವರೆಂದು ತೀರ್ಮಾನಕ್ಕೆ ಬರಲಾಯಿತು ಕುಡಿತ ಜುಗಾರಿ ಇತ್ಯಾದಿ ದುರ್ವ್ಯಸನಗಳಿಂದ ಆಸ್ತಿಪಾಸ್ತಿಗಳನ್ನೆಲ್ಲ ಕಳೆದು ಭಿಕಾರಿಗಳಾಗಿ ಎತ್ತಲೋ ಹೋದರು.

 ತರುವಾಯ ಮುಸ್ಲಿಂ ಸಮುದಾಯ ಇಲ್ಲಿ ತಲೆಯೆತ್ತಿತು ಅವರೂ ಕುಟುಂಬ ಸಮಸ್ಯೆಸಂತಾನಹೀನತೆ ಇತ್ಯಾದಿಗಳಿಂದ ದೂರ ಸರಿದರು ನಮ್ಮ ಮುತ್ತಜ್ಜ ಹಿರಣ್ಯ ಗಣಪಯ್ಯ, ಇಸವಿ 1880ರಲ್ಲಿ ಹಿರಣ್ಯದ ಭೂ ಪ್ರದೇಶವನ್ನು ಕೊಂಡುಕೊಂಡರು ಗ್ರಾಮಾಧಿಕಾರಿಯಾಗಿ ಕಾರುಭಾರು ನಡೆಸಿದ ಹಿರಣ್ಯ ಗಣಪಯ್ಯ ಬರೆದಿರಿಸಿದ ಲೆಕ್ಕಪತ್ರದ ಪುಸ್ತಕದ ಬೈಂಡ್ ಪೇಪರ್ ಆಗಿ ಬಳಸಿದ ಕಾಗದ ಇಲ್ಲಿರುವ ಗ್ರಹಣದ ಚಿತ್ರಣ




 


0 comments:

Post a Comment