Pages

Ads 468x60px

Friday 23 October 2020

ಇಡ್ಲಿ ಉಸ್ಲಿ


 

ಮುಂಜಾನೆ ಇಡ್ಲಿ ತಿಂದಾಯ್ತು ನಾನೇ ಮಾಡಿದ್ದು ಕಣ್ರೀ ಹಿಟ್ಟು ತಂದಿದ್ದಲ್ಲ ಲಕ್ಷಣವಾಗಿ ನಿನ್ನೆ ಸಂಜೆ ಒಂದು ಲೋಟ ಉದ್ದು ನೀರೆರೆದು ತೊಳೆದು ಪುನಃ ನೀರೆರೆದು ಇಟ್ಟು ಎರಡು ಲೋಟ ನುಚ್ಚಕ್ಕಿಯನ್ನು ಕುದಿಯುವ ನೀರೆರೆದು ಇಟ್ಟು ಇಡ್ಲಿ ಮೃದುವಾಗಿ ಬರಲು  ಉಪಾಯ ನನ್ನದು ಇಡ್ಲಿಗೆ ನುಚ್ಚಕ್ಕಿ ಚೆನ್ನಾಗಿರುತ್ತದೆಂಬುದು ಸ್ವಾನುಭವ ಹಾಗೂ ಪ್ರಥಮ ದರ್ಜೆಯ ಉದ್ದಿನಬೇಳೆಯನ್ನೇ ಬಳಸಬೇಕು.               


ಉದ್ದು ನುಣ್ಣಗೆ ಮಿಕ್ಸಿಯಲ್ಲಿ ಅರೆಯಲ್ಪಟ್ಟಿತು ಅರೆಯುವಾಗ ನೆನೆಸಿದ ನೀರಿನಲ್ಲೇ ಅರೆಯಿರಿ.

ಉದ್ದು ನುಣ್ಣಗಾಗಲು ಅಂದಾಜು ಒಂದು ನಿಮಿಷ ಸಾಕು.

ಕುದಿ ನೀರಿನಲ್ಲಿ ನೆನೆದ ನುಚ್ಚಕ್ಕಿ ಈಗ ತಣಿದಿದೆ ನೀರು ಚೆಲ್ಲಿ ತೊಳೆದು ಉದ್ದಿನ ಹಿಟ್ಟಿನೊಂದಿಗೆ ಬೆರೆಸಿಮಿಕ್ಸಿಯನ್ನು ಇನ್ನೊಮ್ಮೆ ತಿರುಗಿಸಿ ಅಂದಾಜು ಅರ್ಧ ನಿಮಿಷ ಯಾ ಮೂವತ್ತು ಸೆಕುಂಡ್ ಸಮಯ ಸಾಕು.

ಉದ್ದು ಅಕ್ಕಿ ಸಮರಸದಲ್ಲಿ ಕೂಡಿದಂತೆಯೂ ಆಯಿತು ನುಚ್ಚಕ್ಕಿ ತರಿತರಿ ಹುಡಿಯಾದಂತೆಯೂ ಆಯಿತು.

 ಮಿಶ್ರಣವನ್ನು ತಪಲೆಯಲ್ಲಿ ಹಾಕಿಟ್ಟು ರುಚಿಗೆ ಉಪ್ಪು ಬೆರೆಸಿ ಅವಶ್ಯವಿದ್ದರೆ ಸ್ವಲ್ಪವೇ ನೀರು ಕೂಡಿಸಿ,  ಹುದುಗು ಬರಲು ಬೆಚ್ಚಗಿನ ಜಾಗದಲ್ಲಿ ಮುಚ್ಚಿ ಇಡುವುದು.


ಮಾರನೇ ದಿನ  ಹಿಟ್ಟನಿಂದ ಇಡ್ಲಿ ತಯಾರಿಸಿದಾಗ ಹದಿನೈದು ಇಡ್ಲಿಗಳಾಯಿತು ನೀರು ಕುದಿದ ನಂತರ ಹತ್ತೂ ನಿಮಿಷಗಳಲ್ಲಿ ಅಕ್ಕಿ ಇಡ್ಲಿಯೂ ಆಗಿ ಹೋಯಿತು.


ಮನೆಯಲ್ಲಿ ಎಲ್ಲರೂ ಇರುತ್ತಿದ್ದರೆ ಮೂವತ್ತು ಇಡ್ಲಿ ಆದರೂ ಸಾಲದುಇರಲಿ ಈಗ ಉಳಿದ ಇಡ್ಲಿಗಳು ಸಂಜೆಯ ವೇಳೆ ಸೊಗಸಾದ ಉಪ್ ಮಾ ಆಗಲಿದೆ.

ಅಂದ ಹಾಗೆ ಇಡ್ಲಿಯನ್ನು ಪುಡಿ ಮಾಡಿ ಒಗ್ಗರಿಸಿ ತಿನ್ನುವ  ತಿಂಡಿಗೆ ಅದೆಷ್ಟು ಹೆಸರುಗಳು!

 ಉಪ್ ಮಾಯಾ ಉಪ್ಮಾ ಉಪ್ಪಿಟ್ಟುಉಪ್ಕರಿಉಸ್ಲಿ ಯಾ ಉಸುಳಿ...   - ಕಾರ ನಾಲಿಗೆಯಲ್ಲಿ ಹೊರಳದವರಿಗೆ ಉಸುಲಿ.   ಎಲ್ಲವೂ -ಕಾರದಿಂದಲೇ ಆರಂಭ ಅದರಲ್ಲು ಉಪ್ ಗೆ ಆದ್ಯತೆ ಅಂತೂ ಬೇರೇನೂ ಮಸಾಲೆ ಇಲ್ಲದಿದ್ದರೂ ಆದೀತು ಉಪ್ಪು ಇದ್ದರೆ ಸಾಕು.


ನಾವು ಉಸ್ಲಿ ಮಾಡೋಣ.

ಉಳಿದ ಐದಾರು ಇಡ್ಲಿಗಳನ್ನು ಕೈಯಲ್ಲಿ ಹುಡಿ ಮಾಡುವುದು.

ಎರಡು ಚಮಚ ಕಾಯಿತುರಿ ಮಧ್ಯಾಹ್ನದ ಅಡುಗೆಯ ಹೊತ್ತಿನಲ್ಲಿ ತೆಗೆದಿರಿಸಬೇಕು.

ಒಂದು ಹದ ಗಾತ್ರದ ನೀರುಳ್ಳಿ ಹೆಚ್ಚಿ ಇಡುವುದು ಹಸಿಮೆಣಸೂ ಇರಲಿ,

ಒಂದೆಸಳು ಕರಿಬೇವು ಕಡ್ಡಾಯ ಹಿತ್ತಲ ಕಡೆ ಹೋದಾಗ ಕೊಯ್ದು ತಂದಿಟ್ಟಿರಬೇಕು.

ಅರ್ಧ ಚಮಚ ಉಪ್ಪು ತುಸು ನೀರೆರೆದು ಕರಗಿಸಿ ಇಡುವುದು.

ಬೇಕಿದ್ದರೆ ಒಂದೆರಡು ಚಮಚ ಸಕ್ಕರೆ.

ಶೋಭೆಗೆ ಚಿಟಿಕೆ ಅರಸಿಣ


ಇದೀಗ ಸೂಕ್ತ ಬಾಣಲೆಯನ್ನು ಒಲೆಗೇರಿಸುವ ಸಮಯ.

ದಪ್ಪ ತಳದ ಬಾಣಲೆಯೇ ಆಗಬೇಕು ನಮ್ಮ ಉಸ್ಲಿ ಸ್ವಲ್ಪವೂ ಕರಟಬಾರದು ತಳ ಹಿಡಿದ ಉಸ್ಲಿಯನ್ನು 

ತಿನ್ನುವಂತಿಲ್ಲ.

ಒಗ್ಗರಣೆ ಸಾಹಿತ್ಯಗಳನ್ನು ತುಂಬಿ ಸ್ಟವ್ ಹೊತ್ತಿಸಿ 

ಪರಿಶುದ್ಧವಾದ ತಂಗಿನೆಣ್ಣೆ ನಮ್ಮ ಆಯ್ಕೆ.  ನಾಲ್ಕು ಚಮಚ ಎರೆಯಿರಿ.

ಸಾಸಿವೆ ಸಿಡಿದಾಗಅನುಕ್ರಮವಾಗಿ ಕರಿಬೇವುಹಸಿಮೆಣಸುನೀರುಳ್ಳಿಗಳನ್ನು ತಳ್ಳಿ  ಬಾಡಿದಾಗ ಉಪ್ಪು ನೀರು ಎರೆದುಸಕ್ಕರೆಯನ್ನೂ ಹಾಕಿಚಿಟಿಕೆ ಅರಸಿಣ ಉದುರಿಸಿಹುಡಿ ಮಾಡಿದಂತಹ ಇಡ್ಲಿಗಳನ್ನು ಹಾಕುತ್ತಕಾಯಿತುರಿ ಉದುರಿಸಿಸೌಟಿನಿಂದ ಮೇಲು ಕೆಳಗು ಆಡ್ಡಾಡಿಸಿಉರಿ ನಂದಿಸಿ ಚಹಾ ಆಗುವ ತನಕ ಮುಚ್ಚಿಟ್ಟು ಬಿಸಿ ಬಿಸಿಯಾಗಿ ಉಪ್ ಮಾ ತಿನ್ನಿರಿ ಉಫ್.. ಇಷ್ಟೇನಾ ಅನ್ನದಿರಿ.


ಸಂಜೆಯ ಹೊತ್ತು ತಿಂಡಿ ತಿನ್ನುವ ರೂಢಿ ಇಲ್ಲವೆಂದಾದಲ್ಲಿ ನಾಳೆ ಮುಂಜಾನೆಗೆ ಉಸ್ಲಿ ತಯಾರಿಸಿ ಇಡ್ಲಿಗಳನ್ನು ನಾಳೆಯ ಬಳಕೆಗಾಗಿ ಫ್ರಿಜ್ ಒಳಗೆ ಇಡದಿರಿ ಗಟ್ಟಿ ಕಲ್ಲಿನಂತಾದೀತು ಉಸ್ಲಿಗಾಗಿ ಹುಡಿ ಮಾಡಿಕೊಳ್ಳಲು ಸಾಧ್ಯವಾಗದು.




0 comments:

Post a Comment