Pages

Ads 468x60px

Tuesday 3 November 2020

ಗೋಧೀ ದೋಸೆ

 


ಕೋವಿಡ್19 ಹಿನ್ನಲೆಯಲ್ಲಿ ನಮ್ಮ ಕೇರಳ ಸರಕಾರವು ಕೊರೋನಾ ಸಂತ್ರಸ್ತರಾಗಿರುವ ಪೌರರ ನೆರವಿಗಾಗಿ ರೇಷನ್ ಕಿಟ್ ವಿತರಿಸುತ್ತಲಿದೆ.   ಮಧು ಮನೆಗೆ ಬಂದಿದ್ದಾಗ ರೇಷನ್ ಸಾಮಗ್ರಿಗಳನ್ನು ತಂದು ಕೊಟ್ಟ.    ಬಾರಿ ಅರ್ಧ ಲೀಟರ್ ಚಿಮಿಣಿಎಣ್ಣೆಯೂ ಬಂದಿದೆ ಇರಲಿ ತೋಟದ ಡೀಸೆಲ್ ಇಂಜಿನ್ ರಿಪೇರಿಗೆ ಬೇಕಾಗುತ್ತೆ.


ಮೂರು ಕೇಜಿ ಬೆಳ್ತಿಗೆ ಅಕ್ಕಿ ಗಂಧಸಾಲೆಯ ಪರಿಮಳ ಗೋಧಿಹುಡಿ ಪಚ್ಚೆಸ್ರು ಕಡಲೆಕಾಳು ಮೆಣಸಿನ ಹುಡಿ ತೆಂಗಿನೆಣ್ಣೆಸಾಲದ್ದಕ್ಕೆ ಟೇಬಲ್ ಸಾಲ್ಟ್ ಕೂಡಾ ಬಂತುಉಪ್ಪಿನಕಾಯಿ ಹಾಕಲಿಕ್ಕಾಯಿತು.   


ಗೋಧಿಹುಡಿ ತಂದಿಟ್ಕೊಂಡಿದ್ದೂ ಇತ್ತು,   ಈಗ ಬಂದಿದ್ದೂ ಸೇರಿ ಬೇಕಾದಷ್ಟಾಯ್ತು ದಿನಾ ಚಪಾತಿ ಲಟ್ಟಿಸಿ ತಿನ್ನುವುದೆಂದರೆ ನಮ್ಮಿಂದಾಗದು.   ದೋಸೆಯಾದರೂ ಆದೀತು.   ಅಮ್ಮ ಮಾಡುತ್ತಿದ್ದ ದೋಸೆ ನೆನಪಾಯ್ತು.

 ಅದೇ ಉಮೇದಿನಲ್ಲಿ ದೋಸೆ ಎರೆದು ತಿಂದು ತೇಗಿದಾಗ ಮಗಳ ಫೋನ್ ಬಂದಿತು.

ನನಗೇ ಕಾಲ್ ಬಂದರೆ ಅಡುಗೇ ವಿವರಗಳ ಸಂಭಾಷಣೆ...

ಅಲ್ಲದೆ ಮತ್ತೇನಿಲ್ಲ.


ನನ್ನ ಮುಂಜಾನೆಯ ದೋಸೆಯ ಚಿತ್ರಗಳು ರವಾನೆಯಾದುವು.

“ ಮಾಡುವ ಕ್ರಮ ಬರೆದು ಇಡು.. "  ಆರ್ಡರ್ ಆಯ್ತು.




ಒಂದು ಲೋಟ ಅಕ್ಕಿ

ನಾಲ್ಕು ಚಮಚ ಉದ್ದು

ಪಚ್ಚೆಸ್ರು ಕಾಳು ಅದೂ ನಾಲ್ಕು ಚಮಚ

ಎಲ್ಲವನ್ನೂ ಒಟ್ಟಿಗೆ ಹಾಕಿ ನೀರೆರೆದು ಇಡುವುದು

ನಾಲ್ಕಾರು ಗಂಟೆ ನೆನೆಯಲಿ

ಸಂಜೆ ಅರೆಯುವಾಗ ಚಿಕ್ಕ ತುಂಡು ಶುಂಠಿ ಎರಡು ಹಸಿಮೆಣಸು ಸೇರಿಸಿ ಅರೆಯುವುದು.

ತಪಲೆಗೆ ಒಂದು ಲೋಟ ಗೋಧಿ ಹುಡಿ ಹಾಕಿ ನೀರೆರೆದು ದೋಸೆ ಹಿಟ್ಟಿನ ಸಾಂದ್ರತೆ ಬರುವಂತೆ ಕಲಸುವುದು.

ಅರೆದ ಹಿಟ್ಟನ್ನು ಸೇರಿಸಿ ಪುನಃ ಕಲಸಿ ರುಚಿಗೆ ಉಪ್ಪು ಹಾಕಿಟ್ಟು ಮುಚ್ಚಿ ಇಡುವುದು.

ಮಾರನೇ ದಿನ ತೆಳ್ಳಗೆ ಉದ್ದಿನ ದೋಸೆಯಂತೆ ಹರಡಿ ಎರೆಯುವುದು.

ಗೋಧಿಯಿಂದಾಗಿ ದೋಸೆಯ ಹಿಂಭಾಗವೂ ಆಕರ್ಷಕ ಬಣ್ಣ ಬರುವುದು.


ಸೂಚನೆಗೋಧಿ ಹುಡಿ ಇದ್ದರೆ ಚಪಾತಿ ಬೇಕಿಲ್ಲದಿದ್ದರೆ ಮಾಡಬಹುದು.   

ಇದೇ ಮಾದರಿಯಲ್ಲಿ ರಾಗಿ ಹಿಟ್ಟು ಬೆರೆಸಿಯೂ ದೋಸೆ ಎರೆಯಬಹುದಾಗಿದೆ.





0 comments:

Post a Comment