Monday, 10 June 2013
ಹೇಳೇ ಗೆಳತೀ..
" ಎಲ್ಲಿದ್ದೆವು ನಾವು ನೆನಪಿದೆಯ..."
" ಹೇಗಿದ್ದೆವು ನಾವು ತಿಳಿದಿದೆಯ..."
" ಹ್ಞೂಂ, ಇಲಸ್ಟ್ರೇಟೆಡ್ ವೀಕ್ಲೀ ಆಫ್ ಇಂಡಿಯಾ ಪತ್ರಿಕೆಯ ಪುಟದೊಳಗೆ ಮೆರೆಯುತ್ತಿದ್ದೆವಲ್ಲವೇನೇ..."
" ಹೌದೂ, ಈಗ ನೆನಪಾಯಿತು, ರೇಖಾ- ಚಿತ್ರ ಮೂಡಿಸಿದ ಕಲಾಕಾರ ಯಾರು ಹೇಳೇ ಸಖೀ..."
" ಮರೆತೇ ಹೋಗಿದೆ, ಐವತ್ತು ವರ್ಷಗಳಾಗಿ ಹೋದವು, ಈ ಪತ್ರಿಕೆ ಈಗ ಇಲ್ಲವಂತೆ ಗೊತ್ತಾ ... "
" ಹೀಗೂ ಕಿತಾಪತಿ ಮಾಡ್ಬೌದಾ, ನಮ್ಮ ಪಾಡಿಗೆ ನಾವು ಇದ್ದೆವಲ್ಲ, ಎಳೆ ಎಳೆದು ತಂದು ಕಸೂತಿ ಕಲೆ ಮಾಡಿದ್ದು ಸರಿಯಾ..."
" ಅದಕ್ಕೆ ಚೌಕಟ್ಟು ಹಾಕಿಸಿ ಗೋಡೆಯಲ್ಲಿ ನೇತಾಡಿಸಿದ್ದು ಸರಿಯಾ "
" ತಾಯ್ಮನೆಗೆ ಬಂದು ' ಓಹ್ಹೋ, ನನ್ನ ಕಲೆಗಾರಿಕೆ ಇಲ್ಲಿದೇ ' ಎಂದು ಬೆನ್ನು ತಟ್ಟಿಕೊಳ್ಳಬಹುದೇ ಹೇಳಕ್ಕಾ "
" ಕೆಮರಾದಲ್ಲಿ ಸೆರೆ ಹಿಡಿದು ಸಾಧಿಸಿದ್ದೇನಂತೆ ಕೇಳೇ "
" ಅದು ಹೋಗಲಿ ಬಿಡೇ, ಈಗ ನಮ್ಮನ್ನು ಹೂದೋಟದಲ್ಲಿ, ನೀರು ಹರಿವ ಝರಿ ಪಕ್ಕದಲ್ಲಿ ನಿಲ್ಲಿಸಿ ಚೆಂದ ನೋಡುವ ವೈಖರಿ ಗಮನಿಸಿದ್ದಿಯೇನೇ "
" ಬರ್ತೀವಿ.."
" ಎಲ್ಲಿಗೆ ಹೋಗ್ತೀರಾ ಅಂತಿದಾಳೆ ಈ ಅಕ್ಕ "
" ಇನ್ನು ಇಲ್ಲೇ ಖಾಯಂ ನೆಲೆ, ಎಲ್ಲಿಗೂ ಹೋಗೂದು ಬೇಡವಂತೆ "
" ಹೌದ್ಹೌದು, ಹಳೆಯ ಕಲೆಗೊಂದು ಹೊಸ ನೆಲೆ ಸಿಕ್ಕಿಯೇ ಬಿಡ್ತು ಅನ್ನೋಣ "
" ಹ...ಹಹ..."
Posted via DraftCraft app
Subscribe to:
Post Comments (Atom)
0 comments:
Post a Comment