ಒಂದು ಕಪ್ ಉದ್ದು ನೆನೆ ಹಾಕಿ. ಅರ್ಧ ಗಂಟೆ ಬಿಟ್ಟು ನೀರು ಬಸಿದು ಮಿಕ್ಸೀಯಲ್ಲಿ ಅರೆಯಿರಿ. ನುಣ್ಣಗಾಗಲು 2 -3 ಚಮಚಾ ನೀರು ಹಾಕಿ. ರುಚಿಗೆ ಉಪ್ಪು ಸೇರಿಸಿ ತೆಗೆಯಿರಿ.
ಬೇವಿನೆಸಳು, ಶುಂಠಿ, ಹಸಿಮೆಣಸು ಚಿಕ್ಕದಾಗಿ ಕತ್ತರಿಸಿ ಹಿಟ್ಟಿಗೆ ಹಾಕಿ.
2 ಚಮಚಾ ಅಕ್ಕೀ ತರಿ ಹಾಕಿಕೊಂಡು ಚೆನ್ನಾಗಿ ಕಲಸಿ ಅರ್ಧ ಗಂಟೆ ಮುಚ್ಚಿ ಇಡಿ.
ದಪ್ಪ ತಳದ ಬಾಣಲೆಯಲ್ಲಿ ಎಣ್ಣೆ ಕಾಯಲಿಡಿ.
ಎಣ್ಣೆ ಬಿಸಿಯಾಯಿತೇ, ಅಂಗೈಯನ್ನು ಒದ್ದೆ ಮಾಡಿಕೊಂಡು ಲಿಂಬೇ ಗಾತ್ರದಷ್ಟು ಹಿಟ್ಟನ್ನು ತೆಗೆದು ಕೈ ಬೆರಳಿನಲ್ಲಿ ತೂತು ಕೊರೆದು ಎಣ್ಣೆಗೆ ಬಿಡಿ. ತೂತಿನ ವಡೆಗೆ ಸ್ವಲ್ಪ ಅಭ್ಯಾಸವೂ ಬೇಕಾಗುತ್ತದೆ. ಮಗುಚಿ ಹಾಕಿ ಎರಡೂ ಬದಿ ಬೇಯಿಸುವುದು ಅವಶ್ಯ. ಹೊಂಬಣ್ಣ ಬಂದಾಗ ತೆಗೆಯಿರಿ.
ಒಂದು ಬಟ್ಟಲು ಸಿಹಿ ಮೂಸರು.
ರುಚಿಗೆ ಉಪ್ಪು, ಸಕ್ಕರೆ.
ಸುವಾಸನೆಗೆ ಜೀರಿಗೆ, ಓಮ, ಹಸಿ ಮೆಣಸು.
ಇವನ್ನೆಲ್ಲ ಸಿದ್ಧ ಪಡಿಸಿ ಇಂಗು ಹಾಕಿ ಒಗ್ಗರಣೆ ಕೊಡಿ.
ಮಸಾಲಾ ಮೊಸರಿನಲ್ಲಿ ಮಾಡಿಟ್ಟ ವಡೆಗಳನ್ನು ಹಾಕಿಡಿ.
ಅರ್ಧ ಗಂಟೆ ಬಿಟ್ಟು ಈ ತೈರೊಡೆ ತಿನ್ನಿ.
ತೊಗರೀಬೇಳೆ ರಸಂ ಹೇಗೂ ಊಟಕ್ಕಾಗಿ ಮಾಡಿಯೇ ಇರುತ್ತೀರಿ.
ರಸಂ ಎರೆದು ಇಟ್ಟುಕೊಳ್ಳಿ.
ಸಂಜೆಯ ಟೀ ಜೊತೆ ಸವಿಯಿರಿ.
ಉಳಿದದ್ದನ್ನು ತೆಗೆದಿಡಿ.
ನಾಳೆ ತಿಂದರಾಯಿತು.
Posted via DraftCraft app
0 comments:
Post a Comment