Pages

Ads 468x60px

Monday 30 November 2020

ಹೂವು - ಮಾವು

 

ಎದುರುಗಡೆ ಎತ್ತರದ ದರೆ ಅದರಲ್ಲಿಯೂ ಬೆಳೆದಂತಹ ಏನೇನೋ ಹೆಸರೇ ತಿಳಿಯದ ಕುರುಚಲು ಸಸ್ಯಗಳು ಅವುಗಳೆಡೆಯಿಂದ ಇಣುಕುತ್ತಿರುವ ಹೂವುಗಳು.   ಯಾವ ಹೂವೂ ಅಂತ ತಲೆ ತುರಿಸುವುದಕ್ಕಿಲ್ಲ.   ವಿಶೇಷವಾಗಿ  ಶ್ರೀದೇವಿಯ ಪೂಜೆಗೆ ಬಳಸುವ ಅಪೂರ್ವ ಹೂವು ಕಿಸ್ಕಾರ.

ನಾಳೆಯೇನೂ ಸಂಕ್ರಾಂತಿ ಪೂಜೆಯ ದಿನವಲ್ಲ  ಎರಡು ಹೂ ಗೊಂಚಲು  ದಿನಕ್ಕಾಗುವಾಗ ಉದುರಿ ಹೋದೀತು ಅಂತೂ ಹೂ ಗೊಂಚಲು ನನ್ನೊಂದಿಗೆ ಮನೆಯೊಳಗೆ ಬಂದಿತು.





ತೋಟದ ನಿರ್ಮಲೀಕರಣದೊಂದಿಗೆ ಮನೆ ಹಿತ್ತಲು ಕೂಡಾ ಕತ್ತಿ ಪಿಕ್ಕಾಸುಗಳ ಹಾರಾಟದಿಂದ ಶುಚಿಯಾಗಿದೆ ಮಣ್ಣಿನೊಳಗೆ ಹುದುಗಿದ್ದ ಅರಸಿಣ ಗೆಡ್ಡೆಗಳು ಮಾವಿನ ಶುಂಠಿ ಗೆಡ್ಡೆಗಳು ಮೇಲೆದ್ದು ಅಡುಗೆ ಮನೆ ಪ್ರವೇಶದೊಂದಿಗೆ ಗೆಡ್ಡೆ ಗೆಣಸುಗಳನ್ನು ಅಡುಗೆಯಲ್ಲಿ ಬಳಸುವ ವ್ಯವಹಾರವೂ ನನ್ನದಾಗಿದೆ.


ಒಂದು ಹೊಸ ವಿನ್ಯಾಸದ ತಂಬುಳಿ ಮಾಡೋಣ.


ಕಿಸ್ಕಾರದ ಹೂವುಗಳು ಶುಚಿಗೊಳಿಸಲ್ಪಟ್ಟುವು ದೇವರ ಪೂಜೆಗೆಂದು ಆಯ್ದು ಇಡುವುದಿಲ್ಲವೇ ಅದೇ ಥರ ಅನ್ನಿ.

ಎರಡಿಂಚು ಉದ್ದದ ಮಾವಿನಶುಂಠಿಯನ್ನು ಮಣ್ಣು ಹೋಗಲು ತಿಕ್ಕಿ ತಿಕ್ಕಿ ತೊಳೆದು ವೃತ್ತಾಕಾರದ ಬಿಲ್ಲೆಗಳಂತೆ ಕತ್ತರಿಸಿಟ್ಟು,

ಒಂದು ಹಿಡಿ ತೆಂಗಿನತುರಿ ತೆಗೆದಿರಿಸಲಾಯಿತು.

ತಾಜಾ ಮಜ್ಜಿಗೆ ಫ್ರಿಜ್ ಪೆಟ್ಟಿಗೆಯಿಂದ ಹೊರ ಬಂದಿತು ಅರ್ಧ ಲೋಟ ಸಾಕು.

ಎಲ್ಲವನ್ನೂ ನುಣ್ಣಗೆ ಅರೆದು.

ಮಜ್ಜಿಗೆ ಎರೆದು,

ಹೊಂದುವಷ್ಟು ನೀರನ್ನೂ ಎರೆದು,

ರುಚಿಗೆ ಬೇಕಾದ ಉಪ್ಪೂ,

ಪುಟ್ಟದೊಂದು ಒಗ್ಗರಣೆಯೂ ಬೀಳುವಲ್ಲಿಗೆ 

ಮಾವಿನ ಪರಿಮಳದ ತಂಬುಳಿ ಬಂದಿತಲ್ಲ.

ಹೂವಿನ ಬಣ್ಣವೂ ಕೂಡಿತಲ್ಲ..

 ತಂಬುಳಿಗೆ ನಾವು ಮಾಮೂಲಿಯಾಗಿ ಹಾಕುವಂತಹ ಜೀರಿಗೆ ಯಾ ಕಾಳುಮೆಣಸನ್ನು ನಾನು ಹಾಕಿಲ್ಲ ಮಾವಿನಶುಂಠಿಯ ತಾಜಾ ಸುವಾಸನೆಯೇ ಸಾಕು.


ಮಾವಿನಶುಂಠಿ ಯಾ ಮಾಂಙನ್ನಾರಿಯ ಬಗ್ಗೆ ಸವಿವರ ಬರಹ  ಬ್ಲಾಗ್ ನಲ್ಲಿ ಹಿಂದೆಯೇ ಬರೆದಿದ್ದೇನೆ.

ಕಿಸ್ಕಾರ ಯಾ ಕೇಪುಳ ಹೂವು ಕೂಡಾ ಬ್ಲಾಗ್ ಬರಹವಾಗಿ  ಮೊದಲೇ ಬಂದಿದೆ ಪುನರಪಿ ಬರೆಯವ ಅವಶ್ಯಕತೆಯಿಲ್ಲ ಆಸಕ್ತರು  ಹುಡುಕಿ ಓದಿರಿ.






0 comments:

Post a Comment