ಇದು ಜರ್ಮನಿಯಲ್ಲಿ ತಯಾರಾದ 1890 - 1900 ರ ಮಾಡೆಲ್ Winselmann, Titan ಹೊಲಿಗೆಯ ಯಂತ್ರ. ಸುಮಾರು 110 ವರ್ಷ ಹಿಂದಿನ ಈ ಯಂತ್ರ ಈಗಲೂ ಸುಸ್ಥಿತಿಯಲ್ಲಿದೆ. ಕೈಯಲ್ಲಿ ತಿರುಗಿಸಬಹುದಾದ ಒಂದು ಹ್ಯಾಂಡಲ್ ಬಲಭಾಗದಲ್ಲಿ ಇದೆ. ಎಲ್ಲಿ ಬೇಕಾದರೂ ಇಟ್ಟು ಹೊಲಿಗೆ ಕೆಲಸ ಮಾಡಬಹುದಾಗಿದೆ. ಉಪಯೋಗವಿಲ್ಲದಿದ್ದಾಗ ಕಪಾಟಿನಲ್ಲಿ ಇಡಬಹುದು. ಮೂರು ತಲೆಮಾರುಗಳನ್ನು ಕಂಡಿರುವ ಈ ಯಂತ್ರ ಈಗ ನನ್ನ ಬಳಿಯಿದೆ.
by Subhashini Hiranya
ಟಿಪ್ಪಣಿ : ಇಲ್ಲಿನ ಬರಹದಲ್ಲಿ ದಿನಾಂಕ 11, ಮಾರ್ಚ್, 2013 ರಂದು ಸಣ್ಣ ತಿದ್ದುಪಡಿ ಮಾಡಲಾಗಿದೆ.
Updated on January 2, 2023
ಹೈಸ್ಕೂಲ್ ದಿನಗಳಲ್ಲೇ ಹೊಲಿಗೆ ಮೆಶೀನ್ ನನ್ನದಾಗಿತ್ತು, ಆಗಿನದ್ದು ಉಷಾ ಯಂತ್ರ, ಓಣಂ ಹಬ್ಬದ ಸಮಯದಲ್ಲಿ ಖರೀದಿಸಿದ್ದು.
ಮದುವೆಯಾದ ನಂತರ ನಮ್ಮವರು ಮೆರಿಟ್ ಹೊಲಿಗೆ ಯಂತ್ರ ತೆಗೆದು ಕೊಟ್ಟರು, ವರ್ಷಗಳ ನಂತರ ಪ್ರಾಚೀನ ಸಂಗ್ರಹಗಳಲ್ಲಿ ಇಡಲು ಯೋಗ್ಯವಾದಂತಹ 18ನೇ ಶತಮಾನದ ಮೆಶೀನ್ ಬಂದಿತು.
ಈಗ ಮಗ ಆಧುನಿಕ ಕಾಲಕ್ಕೆ ತಕ್ಕಂತಹ ಇನ್ನೊಂದು ಹೊಲಿಗೆ ಯಂತ್ರ ತಂದಿದ್ದಾನೆ. ಹೊಲಿಯುತ್ತಿರೋಣ…
0 comments:
Post a Comment