ಇದು ಯಕ್ಷಗಾನದ ವೇಷಭೂಷಣ
ಈ ನೋಟವೋ ರುದ್ರ ವಿಲಕ್ಷಣ
ಯಾರದೋ ಛಾಯಾಗ್ರಹಣ
ಯಾವುದೋ ಹಳೆಯ ಪತ್ರಿಕೆಯ ವಿಶೇಷಾಂಕಣ
ತಿಳಿಯದಿದೆ ಯಾರದೀ ಪಾತ್ರಧಾರಣ |
ಕುಂಚದಲ್ಲಿ ಬಣ್ಣಗಳ ಮಿಶ್ರಣ
ಮೂಡಿಹುದು ಜಲವರ್ಣ ಚಿತ್ರಣ
ಯಕ್ಷನರ್ತನ ತಧಿಂಗಿಣ
ಬಂದಿಹುದು ಕಲೆಗೆ ಬೆರಗಿನ ಕಿರಣ
ತಳೆದಿಹುದು ಈಗ ಹೊಸ ಮುದ್ರಣ |
Posted via DraftCraft app
0 comments:
Post a Comment