ಮರದಲ್ಲಿರುವ ಹಣ್ಣುಗಳನ್ನು ತಿನ್ನುವ ಉಪಾಯ ತಿಳಿದಾಯಿತು. ಎಲ್ಲವನ್ನೂ ಹಣ್ಣು ಮಾಡಿ ತಿನ್ನಬೇಕಾಗಿಲ್ಲ. ರುಚಿಕರವಾದ ಇನ್ನಷ್ಟು ಖಾದ್ಯಗಳನ್ನು ಮಾಡೋಣ. ಸುಲಭವಾಗಿ, ವೇಗವಾಗಿ ಮಾಡಬಹುದಾದ ಹಲ್ವಾ ತಯಾರಿಸೋಣ.
ಚೆನ್ನಾಗಿ ಬಲಿತ, ಇನ್ನೂ ಹಣ್ಣಾಗಿರದ ಪಪ್ಪಾಯವನ್ನು ಆಯ್ಕೆ ಮಾಡಿ ಕತ್ತರಿಸಿಡಿ.
ಮಿಕ್ಸೀ ಇದೆಯಲ್ಲ, ಹೀಗೆ ತುರಿ ಮಾಡಿಕೊಳ್ಳಿ.
ಬೇಯಿಸಿ. ದಪ್ಪ ತಳದ ಬಾಣಲೆಗೆ ಹಾಕಿ, ಸಿಹಿಗೆ ಬೇಕಾದಷ್ಟೇ ಸಕ್ಕರೆ ಸಾಕು.
ಸಕ್ಕರೆ ಕರಗಿತೇ, ಎರಡು ಚಮಚಾ ತುಪ್ಪ ಎರೆದು ಮುದ್ದೆ ಆಗುವ ತನಕ ಸೌಟಿನಲ್ಲಿ ಕೈಯಾಡಿಸಿ.
ಏಲಕ್ಕಿ, ದ್ರಾಕ್ಷೀ, ಗೋಡಂಬಿ ಬೇಕಿದ್ರೆ ಹಾಕಿ ಬಿಡಿ.
.
ಸಂಜೆಯ ಟೀ ಜೊತೆ ಬಿಸಿ ಬಿಸಿಯಾಗಿರುವಾಗಲೇ ತಿಂದು ಮುಗಿಸಿ ಬಿಡಿ.
Posted via DraftCraft app
0 comments:
Post a Comment