Pages

Ads 468x60px

Saturday 4 July 2020

ಹಲಸಿನ ಹಣ್ಣಿನ ಹಲ್ವ





ಸುಮ್ಮನೇ ಬೆರಟಿ ಮಾಡಿ ಇಡಬೇಡ..  "

ಮತ್ತೇನು ಮಾಡ್ಬೇಕು ಅಂತೀರಾ? "

ಮೊನ್ನೆ ಮಾಡಿದ ಅನನಾಸ್ ಜಾಮ್ ಚೆನ್ನಾಗಿತ್ತು ಅದೇ ತರ ಹಲಸಿನ ಹಣ್ಣಿಂದು ಆಗೂದಿಲ್ವ? "

 ಸಕ್ಕರೆ ಹಾಕಿ ಮಾಡಿದ ಅನಾನಸ್ ಜಾಮ್,   ಕ್ರಿಸ್ಟಲ್ ತರ ಹರಳುಗಟ್ಟಿ ಹುಳಿ ರುಚಿಯೂ ಸೇರಿ ಸೊಗಸಾಗಿ ಬಂದಿತ್ತು.

ಹಲಸಿನ ಹಣ್ಣು ಧಂಡಿಯಾಗಿ ಇರೂದ್ರಿಂದ ಬೆಲ್ಲವೇ ಉತ್ತಮ ಎಂಬ ಅಭಿಪ್ರಾಯ ನನ್ನದಾಗಿತ್ತು.


ನಿನ್ನದೇ ಅಂದಾಜಿನಲ್ಲಿ ಏನೋ ಮಾಡಿ ಇಡ್ಬೇಡ.   ಹಲ್ವಜಾಮ್ ಮಾಡಲಿಕ್ಕೆ ಸಕ್ಕರೆ ಹಾಕು..   

ನಮ್ಮ ಮನೆಯ ಸುಪ್ರೀಂಕೋರ್ಟು ಹುಕುಂ ಬಂದಿತು.


ಹಲಸಿನ ಹಣ್ಣಿನ ಹಲ್ವ ಮಾಡುವಂತಾಯಿತು.


ಹಲ್ವ ಮಾಡಿದ್ದು ಹೇಗೆ?


20ರಿಂದ 25 ಬಿಡಿಸಿಟ್ಟ ಹಲಸಿನ ಹಣ್ಣು

ಬೇಳೆ ತೆಗೆದು ಅಡುಗೆಗಾಗಿ ಸಂಗ್ರಹಿಸಿ ಇಡುವುದು.


ನನ್ನ ಹಣ್ಣು ಸಿಹಿಯಾಗಿದ್ದರೂ ಮಳೆಗಾಲವಾದುದರಿಂದ ಮೆತ್ತಗಾಗಿ ನೀರು ಒಸರುವಂತೆ ಇದ್ದಿತು.


ಸೂಕ್ತವಾದ ಪಾತ್ರೆ ಯಾವುದು?

ಕುಕ್ಕರ್ ನನ್ನ ಆಯ್ಕೆ ದಪ್ಪ ತಳವೂಕೈ ಬಿಸಿಯಾಗದಂತೆ ಹಿಡಿಕೆಯೂ ಇರುವ ಕುಕ್ಕರ್ ಉತ್ತಮ.

ಮರದ ಸಟ್ಟುಗವೂ ಇರಬೇಕು.

 ಅಡುಗೆಗೆ ಇಂಡಕ್ಷನ್ ಸ್ಟವ್ ಅತ್ಯುತ್ತಮವಾಗಿರುತ್ತದೆ

ಹಾಗಾಗಿ ಕುಕ್ಕರ್ ಕೂಡಾ ಇಂಡಕ್ಷನ್ ಬೇಸ್ ಹೊಂದಿರಬೇಕು.

ಇಂಡಕ್ಷನ್ ಸ್ಟವ್ ಕೂಡಾ ವಿದ್ಯುತ್ ನಿಯಂತ್ರಕ ಬಟನ್ ಗಳಿಂದ ಸುವ್ಯವಸ್ಥೆಯಲ್ಲಿರಬೇಕು.

ಮುಖ್ಯವಾಗಿ ಅಡುಗೆ ಮಾಡುವ ನಮಗೂ  ಬಟನ್ ಗಳ ಕಾರ್ಯವೈಖರಿ ತಿಳಿದಿರಬೇಕು.


ಮೆತ್ತಗೆ ಇದ್ದಂತಹ ಹಣ್ಣಿನ ಸೊಳೆಗಳನ್ನು ಮಿಕ್ಸಿಯಲ್ಲಿ ಅರೆಯುವ ಕೆಲಸ ಬಿಡಲಾಯಿತು.

ಕುಕ್ಕರ್ ಒಳಗೆ ತುಂಬಿ ಒಲೆಯ ಮೇಲಿರಿಸುವುದು.

ಚಮಚ ತುಪ್ಪ ಎರೆದು ಬೇಯಿಸುವುದು.

ಆಗಾಗ ಸೌಟಾಡಿಸುತ್ತ ಹಲಸಿನ ಸೊಳೆಗಳನ್ನು ತಿರುವುತ್ತಾ ಇರಬೇಕು.

ಹಲಸಿನಲ್ಲಿರುವ ನೀರಿನಂಶದಿಂದಲೇ ಹಣ್ಣು ಬೆಂದಿತು.

ಬೆಂದ ಪರಿಮಳ ಬಂದಿತು ಅನ್ನಿ.


ಒಂದು ಪಾವು ಸಕ್ಕರೆ ಅಂದಾಜು 250 ಗ್ರಾಂ ಆದೀತು ಸುರಿಯಿರಿ.

ಪುನಃ ಸೌಟಾಡಿಸುತ್ತ ಕೆದಕುತ್ತ ಇರಬೇಕು ಸಕ್ಕರೆ ಕರಗಿ ಪುನಃ ಘನರೂಪಕ್ಕೆ ಬರುವ ತನಕ ಹಲ್ವದ ಹದ ಬರಲಾರದು.


ಉರಿಯನ್ನು ನಿಯಂತ್ರಿಸುತ್ತ ಸೌಟಿನಲ್ಲಿ ತಿರುವುತ್ತ ಇದ್ದಂತೆ ಘನವಾದ ಹಲ್ವ ಎದ್ದಿತುಅಂದಾಜು ಹದಿನೈದು ನಿಮಿಷಗಳಲ್ಲಿ ಆಯ್ತು ಅನ್ನಿ.


ಏಲಕ್ಕಿಯೇನೋ ಇತ್ತು ಗುದ್ದಿ ಹುಡಿ ಮಾಡಿ ಹಾಕಲಾಯಿತು.

ಆರಿದ ನಂತರ ತುಂಬಿಸಿ ಇಡಲು ಜಾಡಿಯೂ ಸಿದ್ಧ.


ದಿನವೂ ದೋಸೆ ಇಡ್ಲಿ ತೆಳ್ಳವು ತಿನ್ನುವುದಿದೆ ಚಟ್ಣಿಯೊಂದಿಗೆ ಕೂಡಿ ತಿನ್ನಲು ಹಲ್ವಾ ಸಿದ್ಧವಾಗಿದೆ.


ಹಲ್ವ ಆಯ್ತು ಬನ್ನಿ... "


ಗೌರತ್ತೆ ಮೊದಲು ಓಡಿ ಬಂದರು ತಟ್ಟೆ ಗಿಟ್ಟೆ ಏನೂ ಬೇಡ ಹಂಗೇ ಕೈಗೆ ಕೊಡು.. "   ಅಂದರು.  

ತಿನ್ನುತ್ತ ,   ಗೋಧಿ ಹಲ್ವದ ಪಾಕ ಬಂದಿದೆ... " ಎಂಬ ರಿಮಾರ್ಕು ದೊರೆಯಿತು.




ಹಲಸಿನ ಜಾಮ್ ಎಂಬ ಹೆಸರು ನೀಡಬೇಕಿದ್ದರೆ ತುಪ್ಪ ಏನೂ ಹಾಕದಿದ್ದರಾಯಿತು.

ಅತಿಯಾಗಿ ಮಾಡಬಾರದು ಒಂಂದು ಪುಟ್ಟ ಜಾಡಿಯಲ್ಲಿ ಹಿಡಿಸುವಷ್ಟೇ ಮಾಡಲು ಯಾರ ಸಹಕಾರವೂ ಬೇಡ.

ಈಗ ಅಂಗಡಿಯಿಂದ   ಅದು ತನ್ನಿ ಇದು ತನ್ನಿ.. " ಎಂದು ಹೇಳುವ ಕಾಲವಲ್ಲ ದ್ರಾಕ್ಷಿ ಗೋಡಂಬಿ ಬಾದಾಮಿ ಇಲ್ಲದಿದ್ದರೂ ಹಲ್ವದ ಸ್ವಾದಕ್ಕೆ ಕೊರತೆ ಬಾರದು.

 ಘನಪಾಕದಿಂದ ಹಲಸಿನ ಹಣ್ಣಿನ ಇನ್ನಿತರ ಖಾದ್ಯಗಳಾದ ಪಾಯಸ ಮುಳ್ಕಗೆಣಸಲೆ ಇತ್ಯಾದಿಗಳನ್ನು ಜಾಣತನದಿಂದ ಮಾಡಿಕೊಳ್ಳಲೂ ಸಾಧ್ಯವಿದೆ.

ಚೆನ್ನಾಗಿ ಪಾಕ ಬಂದಂತಹ ಹಲ್ವ ಜೋಪಾನವಾಗಿ ಇರಿಸಲು ರೆಫ್ರಿಜರೇಟರ್ ಬೇಡ ಇರುವೆಗಳು ಮುತ್ತದಂತೆ ಗಾಳಿಯಾಡದಂತೆ ಮುಚ್ಚಿ ಇರಿಸಬೇಕು ಒದ್ದೆ ಚಮಚ ಬಳಸಬಾರದು ಪ್ರತಿ ಬಾರಿ ಮುಚ್ಚಳ ತೆರೆದಾಗ ಸ್ವಚ್ಛ ಚಮಚವನ್ನೇ ಬಳಸುತ್ತಿರಬೇಕು


ಅಡುಗೆ ಮಾಡುತ್ತಿರೋಣ

ರಸಪಾಕ ಕಲಿಯೋಣ

ಎಲ್ಲರಿಗೂ ಹಂಚೋಣ

ಎಂಬ ಸೂತ್ರದನ್ವಯ ಬ್ಲಾಗ್ ಬರಹ ಸಿದ್ಧವಾಗಿದೆ.






0 comments:

Post a Comment