Pages

Ads 468x60px

Friday 31 July 2020

ಕೆಂಪ ಹಲಸು







ನಮ್ಮ ತೋಟದ ಕೆಂಪ ಬಕ್ಕೆ ಹಲಸು.

ಪಾದೆಕಲ್ಲುಗಳ ನಡುವೆ ಬೆಳೆದು ನಿಂತಿರುವ ಮರ.

 ಬಣ್ಣವೂ ಸಿಹಿಯೂ ಸುವಾಸನೆಯೂ ಕೂಡಿ ಅಪೂರ್ವ ವೃಕ್ಷ .   ಹಲಸಿನ ಮರಕ್ಕೆ ಇರಬೇಕಾದ ಸಹಜ ಬೆಳವಣಿಗೆ  ಮರಕ್ಕೆ ದೊರೆತಿಲ್ಲ ಬಂಡೆಕಲ್ಲುಗಳ ಎಡೆಯಿಂದ ಹೇಗೋ ಎದ್ದು ಬಂದಿದೆ.


ಮೊದಲೇ  ಮರ ಇದ್ದುದರಿಂದ ನೆಟ್ಟವರು ಯಾರೆಂದು ತಿಳಿದಿಲ್ಲ ಮಳೆಗಾಲದಲ್ಲಿ ಹರಿಯುವ ನೀರಿನ ಹಳ್ಳವೂ ಇಲ್ಲಿ ಇರುವುದರಿಂದ ನೀರಿನಲ್ಲಿ ಹರಿದು ಬಂದ ಹಲಸಿನ ಬೀಜದಿಂದ ಜನಿಸಿದ್ದು ಎಂದು ತೀರ್ಮಾನಿಸಿದ್ದೇವೆ





ಮನೆಯಲ್ಲಿ ಇದ್ದಂತಹ ಹಳೆಯ ಕಡತಗಳಲ್ಲಿ ದೊರೆತ ದಾಖಲೆಯಂತೆ ಹಿರಣ್ಯದ ವ್ಯಾಪ್ತಿಯೊಳಗೆ ಇದ್ದಂತಹ ಹಲವು ಹಲಸಿನಮರಗಳೂಮರಗಳಿಗೆ ಇದ್ದಂತಹ ಹೆಸರುಗಳೂ ಲಭ್ಯವಾದವು ಇಸವಿ 1924 ದಾಖಲೆ ಪತ್ರ ಇದಾಗಿದ್ದು ಹಳೆಗನ್ನಡ ಓದಲು ಬಲ್ಲವರಿಗೆ ಸುಸೂತ್ರವಾಗಿ ಓದಬಹುದಾಗಿದೆ.


ಬಿಳಿ ಬಕ್ಕೆ ಗಾಳಿ ಬಕ್ಕೆ ಅಟ್ಟೊಳಿಗೆ ಬಕ್ಕೆ ಬರೆ ತುಳುವ ಓಳಿ ತುಳುವ ಕೆಂಪ ತುಳುವ  ಹೀಗೆ ಹೆಸರುಗಳ ಪಟ್ಟಿ ದೊರೆಯಿತುಹಿಂದಿನಿಂದಲೇ ಕೆಂಪ ಎಂಬ ಹೆಸರಿನ ಹಲಸಿನ ಮರ ಇದ್ದಿತು ಎಂದು ತಿಳಿಯಿತು.



 ವರ್ಷ ಕೆಂಪ ಹಲಸು ನಮ್ಮ ಮನೆ ಉಪಯೋಗಕ್ಕೆ ಕೊರತೆ ಬರದಂತೆ ಸಾಕಷ್ಟು ಫಲ ನೀಡಿದೆ.

ಬೇಸಿಗೆಯಲ್ಲೇ ಹಣ್ಣು ದೊರೆತಿದ್ದರಿಂದ ತಿಂದು ಹೆಚ್ಚಾದ ಹಣ್ಣನ್ನು ಒಣಗಿಸಿ ಇಡಲಾಗಿದೆಒಣಹಣ್ಣು ರುಚಿಯಾಗಿ ಇದೆ.  




ನಾವು  ಕೆಂಪು ಹಲಸನ್ನು ನಮ್ಮ ಬಳಿ ಇರುವ ಇನ್ನಿತರ ಹಲಸಿನ ಹಣ್ಣುಗಳಂತೆ ಉಪಯೋಗಿಸುತ್ತ ಬಂದಿದ್ದೇವೆ ಇದೂ ಒಂದು ವಿಶೇಷವಾದ ಹಲಸಿನ ಜಾತಿ ಎಂದು ಕಳೆದ ಕೆಲ ವರ್ಷಗಳಿಂದ ಮಾಧ್ಯಮಗಳ ಹಲಸು ಪ್ರಚಾರದಿಂದಾಗಿ ತಿಳಿದು ಬಂದಿತು.





ಒಂದಷ್ಟು ಗಿಡಗಳನ್ನೂ ಮಾಡಿ ಇರಿಸಲಾಗಿದೆಯಾದರೂ ಮಾರಾಟದ ಉದ್ಧೇಶ ನಮ್ಮದಲ್ಲ.





0 comments:

Post a Comment