ಲೇಖಕರು ಸಾಮಾನ್ಯವಾಗಿ ಒಂದು ಬರಹವನ್ನು ಸಿದ್ಧಪಡಿಸಿ , ನಂತರ ಅದಕ್ಕೆ ಸೂಕ್ತವಾದ ಚಿತ್ರಕ್ಕಾಗಿ ತಡಕಾಡುತ್ತಾರೆ . ಯಾರಿಂದಲಾದರೂ ಚಿತ್ರ ಬರೆಸುತ್ತಾರೆ . ಇಲ್ಲಿ ವಿಭಿನ್ನ ಸ್ಥಿತಿ . ಚಿತ್ರಗಳಿವೆ , ಒಂದೊಂದು ಚಿತ್ರವೂ ಒಂದೊಂದು ವಿಷಯವನ್ನು ಬಿಡಿಸುತ್ತಾ ಹೋಗುತ್ತದೆ . ಅದನ್ನು ಅಕ್ಷರ ರೂಪದಲ್ಲಿ ತರುವ ಪ್ರಯತ್ನ .....
ನಮ್ಮ ಬಾಲ್ಯವೆಲ್ಲವೂ ಪುಸ್ತಕಗಳ ಒಡನಾಟದಲ್ಲೇ ಕಳೆಯಿತು . ಅಕ್ಷರ ಕಲಿತ ಕೂಡಲೇ , ಓದಲು ಪ್ರಾರಂಭಿಸಿದ್ದು ಮಕ್ಕಳ ಕಥೆಗಳನ್ನು . ನಮ್ಮಪ್ಪ ಪ್ರತೀ 15 ದಿನಕ್ಕೊಮ್ಮೆ ಮಂಗಳೂರಿಗೆ ಹೋಗಿಯೇ ಹೋಗುತ್ತಿದ್ದರು . ಅಡಿಕೆ ಮಾರುಕಟ್ಟೆ ಧಾರಣೆ ತಿಳಿಯಲು , ಭಂಡಸಾಲೆಯಲ್ಲಿ ಹಾಕಿದ್ದ ಅಡಿಕೆ ಮಾರಾಟವಾಯಿತೇ , ಇತ್ಯಾದಿ ವ್ಯವಹಾರಗಳು . ಅಡಿಕೆಯೆಂದರೆ ಆ ಕಾಲದಲ್ಲೇ ' ಝಣ ಝಣ ಕಾಂಚಾಣ ' , ಬರುವಾಗ ಮಕ್ಕಳಿಗೆ ಓದಲು ಕಥೆ ಪುಸ್ತಕಗಳು . ಈಗಲೂ ನೆನೆದರೆ ' ಹಾಯ್'.....
ಮಂಗಳೂರಿನ ' ಬಾಲ ಸಾಹಿತ್ಯ ಮಂಡಲ ' ದಿಂದ ಪ್ರಕಟವಾಗುತ್ತಿದ್ದ ಪಂಜೆ ಮಂಗೇಶ ರಾಯರ ಶಿಶು ಸಾಹಿತ್ಯ , ' ತಟಪಟ ಹನಿಯಪ್ಪ ' , ' ಇಲಿಗಳ ತಕ ಥೈ ' , ' ಕಾಗಕ್ಕ ಗುಬ್ಬಕ್ಕನ ಕಥೆ ' ಇವುಗಳನ್ನೆಲ್ಲ ನಾವು ಓದಿಯೇ ಆನಂದಿಸಿದ್ದೇವೆ . ತಿಂಗಳಿಗೊಮ್ಮೆ ಬರುತ್ತಿದ್ದ ' ಚಂದಮಾಮ ' ಹಿರಿಕಿರಿಯರೆಲ್ಲರಿಗೂ ಪ್ರಿಯ ಸಂಗಾತಿ . ಅದರಲ್ಲಿ ಮಕ್ಕಳ ಕಥೆಗಳಲ್ಲದೆ ಬಂಗಾಲೀ ಕಾದಂಬರಿಗಳೂ ಅನುವಾದಿತವಾಗಿ ಬರುತ್ತಿದ್ದವು . ' ದುರ್ಗೆಶ ನಂದಿನಿ ' , ' ನವಾಬ ನಂದಿನಿ ' ಧಾರಾವಾಹಿ ರೂಪದಲ್ಲಿ , ಮಹಾಭಾರತ ವರ್ಣ ರಂಜಿತ ಮುಖಪುಟದಲ್ಲಿ , ಬೇತಾಳ ಕಥೆಗಳು , ಪರೋಪಕಾರೀ ಪಾಪಣ್ಣ ,... ಹೇಳಿದಷ್ಟೂ ಮುಗಿಯದ ಲಿಸ್ಟು .
ಹೊಸ ಹೊಸ ಮಕ್ಕಳ ಸಾಹಿತ್ಯ ಪ್ರಕಟವಾಗುತ್ತಿದ್ದಂತೆ , ತಪ್ಪದೆ ಮನೆಗೆ ಬರುತ್ತಿತ್ತು . ಅದರಲ್ಲಿ ಒಂದು ಭಾರತ ಭಾರತೀ ಪುಸ್ತಕ ಮಾಲೆ . ಹತ್ತು ಪುಸ್ತಕಗಳ ಒಂದು ಸಂಪುಟ , ಒಂದೇ ಬಾರಿಗೆ ಸಿಗುತ್ತಿತ್ತು . ಮನೆಯ ಮಕ್ಕಳೆಲ್ಲ ಎಳೆದಾಡಿ ಓದುವವರೇ . ಅದರಲ್ಲಿ ಒಂದು ಪುಸ್ತಕ ಕರ್ನಾಟಕದ ಚಿತ್ರ ಕಲಾವಿದ ಬಿ. ವೆಂಕಟಪ್ಪ ಅವರ ಬಗ್ಗೆ ಇತ್ತು . ಬರೆದ ಲೇಖಕರ ಹೆಸರು ನೆನಪಿಲ್ಲ , ಆದರೆ ಅದರ ಮುಖಪುಟದ ಚಿತ್ರ ಬಿಡಿಸಿದವರು ಚಂದ್ರನಾಥ್ ಆಚಾರ್ಯ . ಒಳಪುಟದ ಬರಹಕ್ಕಿಂತ ನನ್ನನ್ನು ಆಕರ್ಷಿಸಿದ್ದು ಮುಖಪುಟದ ಚಿತ್ರ . ಅದನ್ನು. ಹಾಗೇ ಪಡಿಮೂಡಿಸಲು ಆಗ ಪ್ರಯತ್ನಿಸಿದ್ದು ......

ಓದುವಿಕೆಯ ವ್ಯಾಪ್ತಿ ಹಿಗ್ಗಿದಂತೆ ಮುಂದೆ ಎನ್. ನರಸಿಂಹಯ್ಯ , ತ್ರಿವೇಣಿ , ಅ ನ ಕೃ . ಕೃಷ್ಣಮೂರ್ತಿ ಪುರಾಣಿಕರೆಲ್ಲ ಆಪ್ತರಾದರು . ಅಲ್ಲಿಂದ ಮುಂದೆ ಶಿವರಾಮ ಕಾರಂತ ದರ್ಶನ , ಹೀಗೇ ಮುಂದುವರೆದು ಎಸ್. ಎಲ್. ಭೈರಪ್ಪ ಬಂದರು , ಇತ್ತೀಚೆಗಿನ 'ಕವಲು' ವರೆಗೆ . ಭೈರಪ್ಪ ಬರೆದ ಕೃತಿಗಳ ಹಿಂಭಾಗದ ರಕ್ಷಕವಚದಲ್ಲಿ ಒಂದು ಚಿಕ್ಕ ಸೈಜಿನ ಕಪ್ಪು ಬಿಳುಪಿನ ಚಿತ್ರ ಇರುತ್ತಿತ್ತು . ಆಗ ಇಂದಿನಂತೆ ದೃಶ್ಯ ಮಾಧ್ಯಮಗಳಿರಲಿಲ್ಲವಾಗಿ , ಆ ಚಿತ್ರವೇ ಲೇಖಕರ ಪ್ರತಿಬಿಂಬವಾಗಿ ......
'ಉದಯವಾಣಿ ' ....ಹೊಸ ದಿನಪತ್ರಿಕೆ ಬಂದಿತು . ಅದರೊಂದಿಗೆ 'ತುಷಾರ ' ಮಾಸ ಪತ್ರಿಕೆಯೂ . ಅದರಲ್ಲಿ ಜನಪ್ರಿಯವಾಗಿದ್ದ ಒಂದು ಲೇಖನಮಾಲೆ ' ಸರಸ ' . ಅದನ್ನು ಓದಲು ಅಕ್ಕಪಕ್ಕದ ಮನೆಯ ಯುವತಿಯರೆಲ್ಲ ಓಡಿ ಬರ್ತಿದ್ರು , ನಮ್ಮ ಮನೆಗೆ . ಅದನ್ನು ಅಚ್ಚುಕಟ್ಟಾಗಿ ಈಶ್ವರಯ್ಯ ಬರೆಯುತ್ತಿದ್ದರು . ಆ ಅಂಕಣದಲ್ಲಿ ಒಂದು ಪುಟ್ಟ ರೇಖಾ ಚಿತ್ರ ..... ನಾನೂ ಬಿಡ್ತೇನಾ , ನೋಡಿಯೇ ಬಿಟ್ಟೆ ಒಂದು ಕೈ ...
ಸಾಹಿತ್ಯವನ್ನು ಓದುವಾಗ ಕೇವಲ ಕಥೆ ಕಾದಂಬರಿಗಳು ಮಾತ್ರವಲ್ಲ , ಕಾವ್ಯ ಕವಿತೆಗಳೂ ಓದುವ ವ್ಯಾಪ್ತಿಗೆ ಬಂದೇ ಬರುತ್ತವೆ . ಕವಿ ಮುದ್ದಣನ ' ಅದ್ಭುತ ರಾಮಾಯಣಂ ', ನಿಸ್ಸಾರ್ ಅಹಮದ್ ರ ' ಸಂಜೆ ಐದರ ಮಳೆ ' ಯೂ ಭೋರ್ಗರೆದು ಸುರಿದೇ ಬಿಟ್ಟಿತು ....
Posted via DraftCraft app
0 comments:
Post a Comment