Pages

Ads 468x60px

Saturday, 28 May 2022

ಅಜ್ಜಿಯ ಲಾಲಿಪಾಪು

 



ಕೂದಲೇನೋ ಕಪ್ಪಗಿದೆ

ಅಜ್ಜಿಯಾದೆನು

ಇನ್ನೂ ಇವೆ ಹಲ್ಲುಗಳು 

ಅಜ್ಜಿಯಾದೆನು

ಊರಲಿಲ್ಲ ದಂಟೆ

ಅಜ್ಜಿಯಾದೆನು

ಬಾಗಲಿಲ್ಲ ಸೊಂಟ

ಆಹ... ನಾನು ಅಜ್ಜಿಯಾದೆನು


ಯಾಕಳುವೆ ನೀ ಕಂದ

ಮಲಗಿ ಏಳಲಾರೆ ಎಂದೇ

ಹಾಯಾಗಿ ಮಲಗು ನೀ ಕಂದ

ನಲಿನಲಿದು ಬರಲಾರೆ ಎಂದೇ 

ಗತಿಯೀಗ ನಿನಗೆ ಅಳುವೊಂದೇ

ನಿನ್ನಳುವೆ ಸುಗಮ ಸಂಗೀತವೆಂದೇ

ಹಾಯಾಗಿ ಮಲಗು ನೀ ಕಂದ

ಆಹ...  ನಾನು ಅಜ್ಜಿಯಾದೆನು



Monday, 16 May 2022

ಮ್ಯಾಂಗೋ ಶಿರಾ


 

ಹೇಳಿ ಕೇಳಿ ಈಗ ಮಾವಿನಹಣ್ಣುಗಳ ಕಾಲ ಮನೆ ತುಂಬ ಕಾಟು ಮಾವಿನ ಹಣ್ಣುಗಳ ಪರಿಮಳ.   ಊಟದಲ್ಲಿಉಪ್ಪಿನಕಾಯಿಯಂತೆ  ಮಾವಿನಹಣ್ಣುಗಳದ್ದೇ ಭೋಜನ.

 ಮರದ ಹಣ್ಣಿನ ರುಚಿ ನೋಡು.. " ಎಂದು ಒಬ್ಬರಿಗೊಬ್ಬರು ಕೊಡುವುದೇನು  ಕಡೆಯಿಂದ ಇನ್ನೊಂದಿಪ್ಪತ್ತು ಹಣ್ಣುಗಳನ್ನುಸ್ವೀಕರಿಸುವುದೇನು ವಸಂತ ಕಾಲದ  ವೈಭವ ಇನ್ನೇನು ಮುಗಿಯಲಿಕ್ಕಾಯಿತು.


ಮಾವಿನ ಹಣ್ಣುಗಳ ರಸರುಚಿ ಬರೆದು ಮುಗಿಯಲಾರದು.   ಒಂದು ಸಂಜೆ ಇದ್ದಕ್ಕಿದ್ದಂತೆ ನನಗೂ ಒಂದು ಐಡಿಯಾ ಬಂದಿತು ಮಾವಿನ ಹಣ್ಣಿನ ಶಿರಾ ಮಾಡಿದರೆ ಹೇಗೆ?


ಚಿರೋಟಿ ರವೆ ಇರಲಿಲ್ಲ ಬಾಂಬಿನೋ ವರ್ಮಿಸಿಲಿ ಇತ್ತು ಮೈತ್ರಿ ತಂದಿಟ್ಟಿದ್ದುಎಷ್ಟಿದೇ ಅಳೆದಾಗ ಭರ್ತಿ ಒಂದು ಲೋಟಆಯ್ತು ಪ್ಯಾಕೇಟಿನಲ್ಲಿ ಹುರಿದೇ ಇಟ್ಟಿರೋದು ಅಂತ ಬರೆದಿದೆ ನಾವು ಹುರಿಯಬೇಕಿಲ್ಲ.


ಮೂರು ಕಾಟು ಮಾವಿನಹಣ್ಣು ಸಾಕು,   ತೊಳೆದು ತೊಟ್ಟು ತೆಗೆದು..

ಒಂದೂವರೆ ಲೋಟ ನೀರು ಅಳೆದು ಮಾವಿನಹಣ್ಣುಗಳ ರಸವೆಲ್ಲ ನೀರಿಗೆ ಸೇರಲಿ.

ದಪ್ಪ ಬಾಣಲೆಗೆ 2 ಚಮಚ ತುಪ್ಪ ಎರೆದು ಹುರಿದ ಶಾವಿಗೆ ಹಾಗೂ ನೀರು ಬೆರೆತ ಹಣ್ಣಿನ ರಸ ಎರೆದು ಬೇಯಿಸಿ.

ಬೆಂದ ನಂತರ ಅರ್ಧ ಲೋಟ ಸಕ್ಕರೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿ ಬೇಯಲಿ.


ಬೆಂದಿದೆ ಇನ್ನೆರಡು ಚಮಚ ತುಪ್ಪ ಬೆರೆಸಿ ಕೆಳಗಿಳಿಸಿ ಬಿಸಿ ಇರುವಾಗಲೇ ತಿನ್ನಿ.   

ಮಾವಿನಹಣ್ಣು ಇರುವಾಗ ಮಾಡಿದ್ದು ಗಡಿಬಿಡಿಯ  ತಿನಿಸು ಮನೆ ಮಂದಿಯ ಒಲವಿಗೂ ಪಾತ್ರವಾಯಿತು.   "ಅತ್ತೇ ಇದನ್ನುನಿಮ್ಮ ಬ್ಲಾಗಿನಲ್ಲಿ ಬರೆಯಿರಿ.. "  ಮಾವಿನ ಹಣ್ಣುಗಳನ್ನು ಮರದ ಬುಡದಿಂದ ಹೆಕ್ಕಿ ತಂದ ಶ್ಯಾಮ ಸಲಹೆ ಕೊಟ್ಟ.