Pages

Ads 468x60px

Tuesday 19 April 2022

ಗೊರಟಿನ ಗೊಜ್ಜು

 



 ಬಾರಿ ಕಾಟು ಮಾವಿನ ಹಣ್ಣು ಧಾರಾಳ ಮಕ್ಕಳೂ ಮನೆಯಲ್ಲಿ ಠಿಕಾಣಿ ಹೂಡಿದ್ದಾರೆ ಮಾವಿನ ಹಣ್ಣು ಉಂಟೆಂದು ಅಲ್ಲ ಕಣ್ರೀ ಹಿರಣ್ಯ ದುರ್ಗಾಮಾತೆಯ ಆಲಯದಲ್ಲಿ ವಾರ್ಷಿಕ ಉತ್ಸವ ಧರ್ಮನೇಮ ಇತ್ಯಾದಿಯಾಗಿ ವಾರ ಪೂರ್ತಿ ಕಲಾ ಕಾರ್ಯಕ್ರಮಗಳು.


ಇದರೆಡೆಯಲ್ಲಿ ಒಂದು ದಿನ ರಾತ್ರಿ ಭರಪೂರ ಮಳೆ ಸುರಿಯಿತು ಗಾಳಿ ಗುಡುಗು...

ಕಾಟು ಮಾವಿನ ಹಣ್ಣುಗಳು ತೊಪತೊಪನೆ ಉದುರಿದುವು.

ಮಗನೂ ಅಳಿಯನೂ ಹಣ್ಣುಗಳ ಸಂಗ್ರಾಹಕರು.

ಎಲ್ಲವನ್ನೂ ಒಂದು ಗೋಣಿತಾಟಿನಲ್ಲಿ ಹರವಿ ಇಡಲಾಯಿತು.

ನಮ್ಮ ಅತ್ತಿಗೆಯೂ ಬಂದಿದ್ದರು ಮಾವಿನ ಹಣ್ಣಿನ ಪಾನಕ ತಯಾರಿಸಿದ್ದೂ ಆಯ್ತು ಬಂದ ಹಣ್ಣುಗಳನ್ನು ಆಯ್ದು ಕಾಯಿಗಳನ್ನು ಬೇರೆ ತೆಗೆದಿಟ್ಟು ಒಂದು ಜಾಡಿ ಭರ್ತಿ ಉಪ್ಪಿನಕಾಯಿಯೂ ನಮ್ಮ ಅತ್ತಿಗೆಯ ಕೃಪೆಯಿಂದ ದಕ್ಕಿತು.

ದೇವಸ್ಥಾನದ ಉತ್ಸವ ಮುಗಿದು ಹೊರಡುವಾಗ ಎಲ್ಲರೂ ತಮ ತಮಗೆ ಬೇಕಾದ ಹಾಗೆ ಮಾವಿನ ಹಣ್ಣು ತೆಕ್ಕೊಂಡು ಹೋದರು.


ಈಗ ಎಂದಿನಂತೆ ಮನೆಯಲ್ಲಿ ನಾವೇ ಅತಿಯಾಗಿ ಮಾವಿನಹಣ್ಣು ತಿನ್ನಲೂ ಬಾರದು ಇದಕ್ಕೊಂದು ಉಪಾಯ ಕಂಡುಕೊಳ್ಳದಿದ್ದರಾದೀತೇ?


ಹತ್ತಾರು ಮಾವಿನಹಣ್ಣುಗಳನ್ನು ಚೆನ್ನಾಗಿ ತೊಳೆದುತೊಟ್ಟು ತೆಗೆದುಸಿಪ್ಪೆ ಸುಲಿದು ಸಿಪ್ಪೆಗಳಿಗೆ ಒಂದು ಲೋಟ ನೀರು ಸುರಿದು ಗಿವುಚಿ ರಸವನ್ನು ಮಾವಿನ ಗೊರಟುಗಳಿಗೆ ಎರೆದು ಒಂದಚ್ಚು ಬೆಲ್ಲ ಸ್ವಲ್ಪ ಉಪ್ಪು ಕೂಡಿಸಿದಾಗ ಮಾವಿನ ಹಸಿ ಗೊಜ್ಜು ಎದ್ದಿತು.

ಇದನ್ನು ಒಲೆಯ ಮೇಲಿಟ್ಟು ಕುದಿಸಿ ಸಾಧ್ಯವಾದಷ್ಟು ಬತ್ತಿಸಿದಾಗ ಮಾವಿನ ಹಣ್ಣಿನ ಮಾಂಬಳದ ಸುವಾಸನೆ ಹೊರ ಹೊಮ್ಮಿತು ನನ್ನ ಅಳಿಯ ಶ್ಯಾಮ ಅತ್ತೇ ಅಡಿಗೆ ಸೂಪರ್... " ಅಂದ.

ಮಾವಿನ ಹಣ್ಣಿನ ರಸರುಚಿಯ ಅಡುಗೆ ಸಾಕಷ್ಟು ಬರೆದಿದ್ದೇನೆ ಇದು ಹೊಸ ಸೇರ್ಪಡೆ.

ಶುಂಠಿ ಹಸಿಮೆಣಸು ಹೆಚ್ಚಿ ಹಾಕಿ ಮಾಡಿದಂತಹ  ಗೊಜ್ಜನ್ನು ಮಾವಿನ ಹಣ್ಣಿನ ಪುಳಿಂಜಿ ಅನ್ನಲಡ್ಡಿಯಿಲ್ಲ.

 ಗೊಜ್ಜು ತಂಪು ಪೆಟ್ಟಿಗೆಯಲ್ಲಿ ಇರಿಸಿ ಮುಗಿಯುವ ತನಕ ಉಪಯೋಗಿಸುವಂತದ್ದಾಗಿದೆ.

ಮಾವಿನ ತೋಟ ನಿಮ್ಮಲ್ಲಿ ಇದ್ದರೆ ದಿನವೂ ಸಂಗ್ರಹಿಸಿದೊಡ್ಡ ಜಾಡಿ ತುಂಬ ಮಾಡಿಟ್ಕೊಳ್ಳಿ.

ಹಣ್ಣುಗಳ ಕಾಲ ಸೀಮಿತತೋಟದಲ್ಲಿ ಹಣ್ಣಿಲ್ಲ ಅಂದರೂ ಊಟದೊಂದಿಗೆ ಗೊರಟಿನ ಗೊಜ್ಜು ಸವಿಯುವ ಆಹ್ಲಾದ ನಮ್ಮದು.