Pages

Ads 468x60px

Tuesday 16 April 2024

ಮಾವಿನ ಪುಳಿಂಜಿ

 


ಈ ಬಾರಿ ಕಾಟು ಮಾವಿನ ಅಬ್ಬರ ಇಲ್ಲ.  ಆದರೂ ಹಿರಣ್ಯ ದೇಗುಲದ ವಾರ್ಷಿಕ ಉತ್ಸವ ಹಾಗೂ ರಜಾ ದಿನಗಳ ಸಂಭ್ರಮಾಚರಣೆಗಾಗಿ ಮಗಳು ಬಂದಿದ್ದಾಳೆ,  ಮಾವಿನ ಹಣ್ಣೂಗಳೂ   “ನಾವಿದ್ದೇವೆ “  ಅಂದಿವೆ.


ಕೆಲವೇ ಮಾವಿನಹಣ್ಣುಗಳಿಂದ ಹತ್ತೂ ಮಂದಿ ಸವಿಯಬಹುದಾದ ರಸರುಚಿ ತಯಾರಿಸುವುದು ಹೇಗೆ?


ಮಾವಿನಹಣ್ಣುಗಳನ್ನು ತೊಳೆದು, ತೊಟ್ಟು ಕತ್ತರಿಸಿ ಸಿಪ್ಪೆ ಬೇರ್ಪಡಿಸಿ, ಗೊರಟುಗಳನ್ನು ತಪಲೆಯಲ್ಲಿ ತುಂಬಿಸಿ.

ಹಣ್ಣುಗಳ ಸಿಪ್ಪೆ ಕೈಯಲ್ಲಿ ಗಿವುಚಿದರೆ ಸಾಲದು, ಮಿಕ್ಸಿಯಲ್ಲಿ ರೊಂಯ್ ಎಂದು ತಿರುಗಿಸಿ ರಸ ತೆಗೆಯಿರಿ.  ಸಿಪ್ಪೆಯನ್ನು ಜಾಲರಿಯಲ್ಲಿ ಶೋಧಿಸಿದರೆ ಉತ್ತಮ.  ಈ ಹಂತದಲ್ಲಿ ಸ್ವಲ್ಪ ನೀರು ಬಳಸಬಹುದಾಗಿದೆ.   ರುಚಿಗೆ ಉಪ್ಪು,  ಬೆಲ್ಲ ತುಸು ಜಾಸ್ತಿ ಹಾಕಿದರೆ ಒಳ್ಳೆಯದು.

ಹಸಿಮೆಣಸು,  ಶುಂಠಿ ಮಿತ ಪ್ರಮಾಣದಲ್ಲಿ ಬಳಸಿರಿ.

ಎಲ್ಲವನ್ನೂ ಕೂಡಿಸಿ, ಕುದಿಸಿ,  ಹಣ್ಣಿನರಸ ದಪ್ಪ ದ್ರಾವಣ ಆದ ನಂತರ ಕೆಳಗಿಳಿಸಿ.   ನಿಮಗಿಷ್ಟವಾದಂತೆ ಒಗ್ಗರಣೆ ಕೊಡುವಲ್ಲಿಗೆ ಮಾವಿನ ಹಣ್ಣಿನ ಪುಳಿಂಜಿ ಸಿದ್ಧ.


ಕಾಟು ಮಾವಿನ ಹಣ್ಣುಗಳ ಕಾಲ ಮುಗಿಯುವ ತನಕ ಈ ಪುಳಿಂಜಿ ತಯಾರಿಸಿ,  ತಂಪು ಪೆಟ್ಟಿಗೆಯಲ್ಲಿಟ್ಟು ದಿನವೂ ಸವಿಯಿರಿ.




Tuesday 19 March 2024

ಹನಿ ಇಬ್ಬನಿ

 


ಗುಡ್ಡದ ಅಂಚು ಇಳಿಜಾರು

ಕಲ್ಲು ಮುಳ್ಳು ಕಣ್ಣೆದುರು

ಬದುಕಿನ ದಾರಿ ಬಲು ಕಠಿಣ

ತಿಳಿ  ನನ್ನಕ್ಕ, ನೀ ಬಲು  ಜಾಣೆ ।



Saturday 24 February 2024

ಮಾಡರ್ನ್ ಮೇಲಾರ

ಕಾಲಿಪ್ಲವರ್ ಇನ್ನಿತರ ತರಕಾರಿಗಳೊಂದಿಗೆ ಬಂದಿದೆ,  ಬೋಂಡಾ ಬಜ್ಜಿ ಪೋಡಿ ಮಾಡುವಂತಹ ಕಾಲಿಪ್ಲವರ್ ದಿನ ನಿತ್ಯದ ಉಪಯೋಗಕ್ಕಾಗಿ ತರುವುದು ಕಮ್ಮಿ ಎಂದೇ ಹೇಳಬೇಕು.  ಸೊಪ್ಪು ದಂಟು ಬಿಡಿಸಿ ಕೇವಲ ಹೂವನ್ನು ಮಾತ್ರ ಉಪ್ಪು ಬೆರೆಸಿದ ನೀರಿನಲ್ಲಿ ಹಾಕಿಟ್ಟು,  ಅರ್ಧ ಗಂಟೆ ಬಿಟ್ಟು, ಅಡುಗೆಗೆ ಬಳಕೆ ಮಾಡಬೇಕಾಗಿದೆ,  ಇದೆಲ್ಲ ನನಗೆ ಹಿಡಿಸದು.  ಆದರೂ ಮುತುವರ್ಜಿಯಿಂದ ಹುಳುಹುಪ್ಪಟೆಗಳೇನಾದರೂ ಇವೆಯೋ ಎಂದೂ ನೋಡಬೇಕಾಗುತ್ತದೆ.  ಅಂತೂ ಕತ್ತರಿಸಿ ಇಟ್ಟು ಆಯ್ತು.  ಇನ್ನೀಗ ಬಾಣಲೆ ಇಡುವ ಸಮಯ ಬಂತೇ, ಛೆ, ಛೇ.. ಮಧ್ಯಾಹ್ನದ ಊಟಕ್ಕೊಂದು ವ್ಯಂಜನ ಆಗಬೇಕಿದೆ.
ಎಣ್ಣೆಯಲ್ಲಿ ಕರಿದ ತಿಂಡಿತಿನಿಸು ನಾವಿಬ್ಬರೇ ಇರುವಾಗ ಮಾಡಲಿಕ್ಕಿಲ್ಲ,  ಅದೆಲ್ಲ ಮಕ್ಕಳು ಬೆಂಗಳೂರಿನಿಂದ ಬಂದಿರುವಾಗ ಮಾತ್ರ ಮಾಡುವಂತಹುದು. ಕೇವಲ ಕಾಲಿಪ್ಲವರ್ ಸಾಕೇ,  ಸ್ವಲ್ಪ ಬೀನ್ಸ್, ಕ್ಯಾರೆಟ್ ಇರಲಿ.
ಹಸಿರು ಬಟಾಣಿಯೂ ಇರಲಿ. ಬೇಯಲಿಕ್ಕಾಗಿ ಬಟಾಣಿಗೆ ಕುದಿ ನೀರು ಎರೆದು ಮುಚ್ಚಿ ಇರಿಸಲಾಯಿತು.

ಇದೀಗ ಕಾಯಿ ತುರಿಯುವ ಸಮಯ,  ಅರ್ಧ ಕಡಿ ಕಾಯಿತುರಿ ಇರಲಿ.
ಕಾಯಿಯೊಂದಿಗೆ   ಒಂದು ಹಸಿಮೆಣಸು ಕೂಡಿ ನುಣ್ಣಗೆ ಅರೆಯಲಾಯಿತು.
ಬಟಾಣಿಯನ್ನು ಮೊದಲು ಕುಕ್ಕರಿನಲ್ಲಿ ಬೇಯಿಸಿ,  ತದನಂತರ ಕಾಲಿಪ್ಲವರ್ ಹಾಗೂ ಬೀನ್ಸ್ ಬೇಯಿಸತಕ್ಕದ್ದು.  ರುಚಿಯ ಉಪ್ಪು ಬೇಯುವಾಗಲೇ ಹಾಕಬೇಕು.
 ಕಾಯಿ ಅರಪ್ಪನ್ನು ಬೆಂದ ನಂತರ ಹಾಕಿ, ಅರ್ಧ ಲೋಟ ದಪ್ಪ ಮಜ್ಜಿಗೆ ಅಥವಾ ಮೊಸರು ಎರೆದು ಕುದಿಸಿ.
ಸಿಹಿ ಬೇಕಿದ್ದರೆ ಸ್ವಲ್ಪ ಬೆಲ್ಲ ಹಾಕಬಹುದು.
ದಪ್ಪ ಸಾಂದ್ರತೆಯ ಈ ರಸಂ ನಮ್ಮ ಮನ ಗೆದ್ದಿತು.  
ಒಗ್ಗರಣೆ ಇಲ್ಲದಿದ್ದರೂ ನಡೆದೀತು, ಒಂದೆಸಳು ಕರಿಬೇವು ಇರಲಿ.

ಈ ನಳಪಾಕಕ್ಕೆ ಕೇರಳೀಯರ ವೆಜಿಟಬಲ್ ಸ್ಟ್ಯೂ ಸ್ಪೂರ್ತಿ ನೀಡಿದೆ.
ನಾಲ್ಕೈದು ಬಾರಿ ಈ ಅಡುಗೆ ವಿನ್ಯಾಸವನ್ನು ಮಾಡಿ ನೋಡಿದ್ದೇನೆ. ಬಟಾಣಿ ಕಾಳು ಹಾಕದೆಯೂ ಮಾಡಬಹುದು,  ಕೇವಲ ಕಾಲಿಪ್ಲವರ್ ಮಾತ್ರ ಹಾಕಿಯೂ ಚೆನ್ನಾಗಿರುತ್ತದೆ.  ಬೇಗನೆ ಬೇಯುವ ಹೂ ಇದಾಗಿರುವುದರಿಂದ ಅಡುಗೆಯೂ ಜಟ್ ಪಟ್ ಆಗಿ ಬಿಡುತ್ತದೆ.

Monday 12 February 2024

ಬಾರೋ ಬೆಳ್ಳಿ ಬಟ್ಟಲೇ


ಚಂದಮಾಮ ಬಾರೋ,

ಕೆಳಗಿಳಿದು ಬಾ ಬಾರೋ,

ನಮ್ಮ ಚಾಮಿ ದೇವರೇ,

ಸುತ್ತಮುತ್ತ ಫಳ ಫಳ,

ಆಗಸದಿ ಹೊಳೆ ಹೊಳೆ,

ಸೂರ್ಯನೇಕೆ ಕಾಣಲೊಲ್ಲ,

ಇದೂ ಒಂದು ಬೆಳಕಿನಾಟ,

ತಿಳಿಯೇ ಅಕ್ಕಾ, ನೀ ಪುಟ್ಟೂ|
ಜಿಗಿ ಜಿಗಿಯುತ ಬಂದಿಹೆನು,

ಪ್ಲಾಸ್ಟಿಕ್ ಕುರ್ಚಿ ಬೇಡವು ಎನಗೆ,

ಅಜ್ಜನ ಮಡಿಲೇ ಸಾಕೆನಗೆ,
ಇದುವೇ ನನ್ನಯ ಆರಾಮ ಕುರ್ಚಿ,

ಅಜ್ಜನ ಕತೆಯಲಿ ನನ್ನಯ ಒಲವು,

ಅಜ್ಜನ ಪದದಲಿ ನನ್ನಯ ನಲಿವು |