Pages

Ads 468x60px

Friday 23 October 2020

ಇಡ್ಲಿ ಉಸ್ಲಿ


 

ಮುಂಜಾನೆ ಇಡ್ಲಿ ತಿಂದಾಯ್ತು ನಾನೇ ಮಾಡಿದ್ದು ಕಣ್ರೀ ಹಿಟ್ಟು ತಂದಿದ್ದಲ್ಲ ಲಕ್ಷಣವಾಗಿ ನಿನ್ನೆ ಸಂಜೆ ಒಂದು ಲೋಟ ಉದ್ದು ನೀರೆರೆದು ತೊಳೆದು ಪುನಃ ನೀರೆರೆದು ಇಟ್ಟು ಎರಡು ಲೋಟ ನುಚ್ಚಕ್ಕಿಯನ್ನು ಕುದಿಯುವ ನೀರೆರೆದು ಇಟ್ಟು ಇಡ್ಲಿ ಮೃದುವಾಗಿ ಬರಲು  ಉಪಾಯ ನನ್ನದು ಇಡ್ಲಿಗೆ ನುಚ್ಚಕ್ಕಿ ಚೆನ್ನಾಗಿರುತ್ತದೆಂಬುದು ಸ್ವಾನುಭವ ಹಾಗೂ ಪ್ರಥಮ ದರ್ಜೆಯ ಉದ್ದಿನಬೇಳೆಯನ್ನೇ ಬಳಸಬೇಕು.               


ಉದ್ದು ನುಣ್ಣಗೆ ಮಿಕ್ಸಿಯಲ್ಲಿ ಅರೆಯಲ್ಪಟ್ಟಿತು ಅರೆಯುವಾಗ ನೆನೆಸಿದ ನೀರಿನಲ್ಲೇ ಅರೆಯಿರಿ.

ಉದ್ದು ನುಣ್ಣಗಾಗಲು ಅಂದಾಜು ಒಂದು ನಿಮಿಷ ಸಾಕು.

ಕುದಿ ನೀರಿನಲ್ಲಿ ನೆನೆದ ನುಚ್ಚಕ್ಕಿ ಈಗ ತಣಿದಿದೆ ನೀರು ಚೆಲ್ಲಿ ತೊಳೆದು ಉದ್ದಿನ ಹಿಟ್ಟಿನೊಂದಿಗೆ ಬೆರೆಸಿಮಿಕ್ಸಿಯನ್ನು ಇನ್ನೊಮ್ಮೆ ತಿರುಗಿಸಿ ಅಂದಾಜು ಅರ್ಧ ನಿಮಿಷ ಯಾ ಮೂವತ್ತು ಸೆಕುಂಡ್ ಸಮಯ ಸಾಕು.

ಉದ್ದು ಅಕ್ಕಿ ಸಮರಸದಲ್ಲಿ ಕೂಡಿದಂತೆಯೂ ಆಯಿತು ನುಚ್ಚಕ್ಕಿ ತರಿತರಿ ಹುಡಿಯಾದಂತೆಯೂ ಆಯಿತು.

 ಮಿಶ್ರಣವನ್ನು ತಪಲೆಯಲ್ಲಿ ಹಾಕಿಟ್ಟು ರುಚಿಗೆ ಉಪ್ಪು ಬೆರೆಸಿ ಅವಶ್ಯವಿದ್ದರೆ ಸ್ವಲ್ಪವೇ ನೀರು ಕೂಡಿಸಿ,  ಹುದುಗು ಬರಲು ಬೆಚ್ಚಗಿನ ಜಾಗದಲ್ಲಿ ಮುಚ್ಚಿ ಇಡುವುದು.


ಮಾರನೇ ದಿನ  ಹಿಟ್ಟನಿಂದ ಇಡ್ಲಿ ತಯಾರಿಸಿದಾಗ ಹದಿನೈದು ಇಡ್ಲಿಗಳಾಯಿತು ನೀರು ಕುದಿದ ನಂತರ ಹತ್ತೂ ನಿಮಿಷಗಳಲ್ಲಿ ಅಕ್ಕಿ ಇಡ್ಲಿಯೂ ಆಗಿ ಹೋಯಿತು.


ಮನೆಯಲ್ಲಿ ಎಲ್ಲರೂ ಇರುತ್ತಿದ್ದರೆ ಮೂವತ್ತು ಇಡ್ಲಿ ಆದರೂ ಸಾಲದುಇರಲಿ ಈಗ ಉಳಿದ ಇಡ್ಲಿಗಳು ಸಂಜೆಯ ವೇಳೆ ಸೊಗಸಾದ ಉಪ್ ಮಾ ಆಗಲಿದೆ.

ಅಂದ ಹಾಗೆ ಇಡ್ಲಿಯನ್ನು ಪುಡಿ ಮಾಡಿ ಒಗ್ಗರಿಸಿ ತಿನ್ನುವ  ತಿಂಡಿಗೆ ಅದೆಷ್ಟು ಹೆಸರುಗಳು!

 ಉಪ್ ಮಾಯಾ ಉಪ್ಮಾ ಉಪ್ಪಿಟ್ಟುಉಪ್ಕರಿಉಸ್ಲಿ ಯಾ ಉಸುಳಿ...   - ಕಾರ ನಾಲಿಗೆಯಲ್ಲಿ ಹೊರಳದವರಿಗೆ ಉಸುಲಿ.   ಎಲ್ಲವೂ -ಕಾರದಿಂದಲೇ ಆರಂಭ ಅದರಲ್ಲು ಉಪ್ ಗೆ ಆದ್ಯತೆ ಅಂತೂ ಬೇರೇನೂ ಮಸಾಲೆ ಇಲ್ಲದಿದ್ದರೂ ಆದೀತು ಉಪ್ಪು ಇದ್ದರೆ ಸಾಕು.


ನಾವು ಉಸ್ಲಿ ಮಾಡೋಣ.

ಉಳಿದ ಐದಾರು ಇಡ್ಲಿಗಳನ್ನು ಕೈಯಲ್ಲಿ ಹುಡಿ ಮಾಡುವುದು.

ಎರಡು ಚಮಚ ಕಾಯಿತುರಿ ಮಧ್ಯಾಹ್ನದ ಅಡುಗೆಯ ಹೊತ್ತಿನಲ್ಲಿ ತೆಗೆದಿರಿಸಬೇಕು.

ಒಂದು ಹದ ಗಾತ್ರದ ನೀರುಳ್ಳಿ ಹೆಚ್ಚಿ ಇಡುವುದು ಹಸಿಮೆಣಸೂ ಇರಲಿ,

ಒಂದೆಸಳು ಕರಿಬೇವು ಕಡ್ಡಾಯ ಹಿತ್ತಲ ಕಡೆ ಹೋದಾಗ ಕೊಯ್ದು ತಂದಿಟ್ಟಿರಬೇಕು.

ಅರ್ಧ ಚಮಚ ಉಪ್ಪು ತುಸು ನೀರೆರೆದು ಕರಗಿಸಿ ಇಡುವುದು.

ಬೇಕಿದ್ದರೆ ಒಂದೆರಡು ಚಮಚ ಸಕ್ಕರೆ.

ಶೋಭೆಗೆ ಚಿಟಿಕೆ ಅರಸಿಣ


ಇದೀಗ ಸೂಕ್ತ ಬಾಣಲೆಯನ್ನು ಒಲೆಗೇರಿಸುವ ಸಮಯ.

ದಪ್ಪ ತಳದ ಬಾಣಲೆಯೇ ಆಗಬೇಕು ನಮ್ಮ ಉಸ್ಲಿ ಸ್ವಲ್ಪವೂ ಕರಟಬಾರದು ತಳ ಹಿಡಿದ ಉಸ್ಲಿಯನ್ನು 

ತಿನ್ನುವಂತಿಲ್ಲ.

ಒಗ್ಗರಣೆ ಸಾಹಿತ್ಯಗಳನ್ನು ತುಂಬಿ ಸ್ಟವ್ ಹೊತ್ತಿಸಿ 

ಪರಿಶುದ್ಧವಾದ ತಂಗಿನೆಣ್ಣೆ ನಮ್ಮ ಆಯ್ಕೆ.  ನಾಲ್ಕು ಚಮಚ ಎರೆಯಿರಿ.

ಸಾಸಿವೆ ಸಿಡಿದಾಗಅನುಕ್ರಮವಾಗಿ ಕರಿಬೇವುಹಸಿಮೆಣಸುನೀರುಳ್ಳಿಗಳನ್ನು ತಳ್ಳಿ  ಬಾಡಿದಾಗ ಉಪ್ಪು ನೀರು ಎರೆದುಸಕ್ಕರೆಯನ್ನೂ ಹಾಕಿಚಿಟಿಕೆ ಅರಸಿಣ ಉದುರಿಸಿಹುಡಿ ಮಾಡಿದಂತಹ ಇಡ್ಲಿಗಳನ್ನು ಹಾಕುತ್ತಕಾಯಿತುರಿ ಉದುರಿಸಿಸೌಟಿನಿಂದ ಮೇಲು ಕೆಳಗು ಆಡ್ಡಾಡಿಸಿಉರಿ ನಂದಿಸಿ ಚಹಾ ಆಗುವ ತನಕ ಮುಚ್ಚಿಟ್ಟು ಬಿಸಿ ಬಿಸಿಯಾಗಿ ಉಪ್ ಮಾ ತಿನ್ನಿರಿ ಉಫ್.. ಇಷ್ಟೇನಾ ಅನ್ನದಿರಿ.


ಸಂಜೆಯ ಹೊತ್ತು ತಿಂಡಿ ತಿನ್ನುವ ರೂಢಿ ಇಲ್ಲವೆಂದಾದಲ್ಲಿ ನಾಳೆ ಮುಂಜಾನೆಗೆ ಉಸ್ಲಿ ತಯಾರಿಸಿ ಇಡ್ಲಿಗಳನ್ನು ನಾಳೆಯ ಬಳಕೆಗಾಗಿ ಫ್ರಿಜ್ ಒಳಗೆ ಇಡದಿರಿ ಗಟ್ಟಿ ಕಲ್ಲಿನಂತಾದೀತು ಉಸ್ಲಿಗಾಗಿ ಹುಡಿ ಮಾಡಿಕೊಳ್ಳಲು ಸಾಧ್ಯವಾಗದು.




Saturday 10 October 2020

ಮಾಂಬಳ ಗೊಜ್ಜು

 





ಮಧು ಊರಿಗೆ ಬಂದಿದ್ದಾಗ ಹೀಗೆ ಬಂದು ಹಾಗೆ ಹೋಗಲಿಲ್ಲ ಲಾಕ್ ಡೌನ್ ಅಂತ ಮನೆಗೆ ಬಾರದೇ ವರ್ಷವಾದಂತೆ ಆಗಿತ್ತೂ ಅನ್ನಿ.   ಇದ್ದಷ್ಟು ದಿನವೂ ನಮ್ಮ ಅಡುಗೆಮನೆ ಗಲಗಲ ಅಂತಿತ್ತು ಸಂಜೆಯಾಗುತ್ತಲೂ ಹೊರಗೆ ಸುತ್ತಾಟ ಒಂದು ಸಂಜೆ ಕಾರು ಮಂಜೇಶ್ವರದ ಕಡಲ ಕಿನಾರೆ ತನಕ ಹೋಯಿತು.   ನಾನು ಹೋಗಲಿಲ್ಲ ಕಡಲು ನನಗೆ ಹೊಸತಲ್ಲ ಬಾಲ್ಯದ ದಿನಗಳ ಆಟೋಟಗಳನ್ನು ಕಾಸರಗೋಡಿನ ಕಡಲ ಕಿನಾರೆಯಲ್ಲೇ ಕಳೆದವರು ನಾವಾಗಿರುವಾಗ  ಮಳೆಗಾಲದಲ್ಲಿ ಸಮುದ್ರ ವೈಭವ ಹೇಗಿದ್ದೀತು ಎಂದು ತಿಳಿಯದವರೂ ನಾವಲ್ಲ ಇರಲಿ.


ಮಧು ವಾಪಸ್ ಬರುವಾಗ ಹಲಸಿನ ಹಪ್ಪಳಗೆಣಸಿನ ಹಪ್ಪಳ ಮಾವಿನಹಣ್ಣಿನ ಮಾಂಬಳಅಪ್ಪೆಮಿಡಿ ಉಪ್ಪಿನಕಾಯಿ ಅಂಬಟೆ ಕಳಲೆ ಉಪ್ಪಿನಕಾಯಿಗಳೂ ಬಂದುವು.   ಇದೇನು ಅತ್ತೆ ಮನೆಯಿಂದ ಸಂಪಾದಿಸಿದ್ದೋ ಹೇಗೆ? " ಎಂದು ಹುಬ್ಬೇರಿಸುವಂತಾಯ್ತು.


ಏನೂ ಅಲ್ಲ ಮಂಜೇಶ್ವರದ ಅಂಗಡಿಯೊಂದರಲ್ಲಿ ಇಷ್ಟೂ ಸಿಕ್ಕಿತು.."

ಹೌದ ನಾನೇ ನಿಂಗೆ ಮಾಡಿ ಕೊಡ್ಬೇಕಾಗಿತ್ತು... ಅಂಬಟೆ ಮಿಡಿ ಕೊಯ್ದು ಕೊಡಲಿಕ್ಕೇ  ಬಾರಿ ಯಾರೂ ಇಲ್ಲದೆ ಹೋಯಿತು..  ಹಾಳಾದ್ದು ಲಾಕ್ ಡೌನ್ ಕಾಲ..."

ಈಗ ಕಾಲ ಬದಲಾಗಿದೆ ನಾನು ತಂದು ಕೊಟ್ರೆ ಏನಾಯ್ತೀಗ? "


ಮಾವಿನ ಹಣ್ಣಿನ ಮಾಂಬಳದ ರುಚಿ ನೋಡಿದ್ದಾಯ್ತು.   ಎಲ್ಲೋ ಕಸಿ ಮಾವಿನ ಹಣ್ಣಿಂದು..  ಹುಳಿಯ ಸಂತಾನವಿಲ್ಲಪರಿಮಳವೂ ಇಲ್ಲ.. "  ಗೊಣಗಿದರು ನಮ್ಮ ಮನೆ ಯಜಮಾನ್ರು.


"ಚಿಂತಿಲ್ಲ ತಂದಿದ್ದನ್ನು ಹಾಳು ಮಾಡುವುದಕ್ಕಿಲ್ಲ ನಾಳೆ ಮಾಂಬಳ ಗೊಜ್ಜು ಮಾಡಿದ್ರಾದೀತು. "


ಈಗ ಬೇಡಮ್ಮ ಹಾಗೇ ತಿಂದು ಹೌಸ್ ಫುಲ್ ಆಯ್ತು.. " ಅನ್ನುವುದೇ ಮಗಳು!


ಎಲ್ಲರೂ ಬೆಂಗಳೂರಿಗೆ ತೆರಳಿದ ನಂತರವೇ ನನ್ನ ಮಾಂಬಳ ಗೊಜ್ಜು ಬಂದಿದೆ.


ಅಗತ್ಯವಿದ್ದಷ್ಟು ಮಾಂಬಳ ಕತ್ತರಿಸಿ.

ನೀರಿನಲ್ಲಿ ನನೆಸಿ.

ನಮ್ಮವರು ಅಂದಂತೆ ಹುಳಿ ರುಚಿಗಾಗಿ ನನ್ನ ಬಳಿ ಇದ್ದಂತಹ ಮಾಂಬಳದ ಸ್ಟಾಕ್ ಹೊರ ಬಂತು ಅದೂ ವಿಪರೀತ ಹುಳಿ ಹಾಗೂ ಮಾವಿನ ಸೊನೆ ಪರಿಮಳ ಇರುವಂತಹ ನಮ್ಮದೇ ತೋಟದ ಮಾವಿನ ಹಣ್ಣುಗಳಿಂದ ತಯಾರಿಸಿದ್ದು.

ಮಾಂಬಳ ಮಾಡುವ ವಿಧಾನ  ಹಿಂದೆಯೇ ಬರೆದಿದ್ದೇನೆ ಆಸಕ್ತರು ಹುಡುಕಿ ಓದಿರಿ.


ಲಿಂಬೆ ಗಾತ್ರದಷ್ಟು ನನ್ನ ಹಳೆಯ ಮಾಂಬಳ ಸೇರಿಕೊಂಡಿತು.

ಹುಳಿ ರುಚಿಗಾಗಿ ಹುಣಸೆ ಹುಳಿಯೂ ಆದೀತು.

 

ರುಚಿಗೆ ತಕ್ಕಷ್ಟು ಉಪ್ಪು.

ಸಿಹಿಗೆ ಸಾಕಷ್ಟು ಬೆಲ್ಲ ಇರಬೇಕು.

ನೆನೆದ ಮಾಂಬಳವನ್ನು ಕೈಯಲ್ಲಿ ಗಿವುಚಿ ಉಪ್ಪು ಬೆಲ್ಲ ಹಾಗೂ ಅವಶ್ಯಕತೆಗೆ ತಕ್ಕಂತೆ ನೀರು ಎರೆದು ಕುದಿಸಿ.

ಒಂದು ಹಸಿ ಮೆಣಸು ಸಿಗಿದು ಹಾಕುವುದು.

ತುಪ್ಪದಲ್ಲಿ ಕರಿಬೇವಿನ ಒಗ್ಗರಣೆ ಕೊಡುವಲ್ಲಿಗೆ ಗೊಜ್ಜು ಆಯಿತು.


ಶುಂಠಿಯನ್ನೂ ಹಾಕಿರುತ್ತಿದ್ದರೆ ಮಾಂಬಳದ ಪುಳಿಂಜಿ ಎನ್ನಬಹುದಾಗಿತ್ತು.

ಪುಳಿಯೋಗರೆ ಪ್ರಿಯರು ಮಾಂಬಳವನ್ನೂ ಬಳಸಿಕೊಂಡು ಪುಳಿಯೋಗರೆ ತಯಾರಿಸಿ.

ಚೆನ್ನಾಗಿರುತ್ತದೆ ಅಂದ್ಬಿಟ್ಟು ಮಾಂಬಳವನ್ನು  ಹಾಗೇನೆ ಅತಿಯಾಗಿ ತಿನ್ನುವಂತಿಲ್ಲ ಅತೀ ಉಷ್ಣವಾಗಿ ಜಠರ ಸಂಬಂಧೀ ಬೇನೆ ಬಂದೀತು ನೀರು ಸಾಕಷ್ಟು ಕುಡಿದರಾಯಿತು.


ಊಟದೊಂದಿಗೆ ಉಪ್ಪಿನಕಾಯಿಯಂತೆ ನಂಜಿಕೊಳ್ಳಲು ಸೂಕ್ತ ಪದಾರ್ಥ ಇದು ಚಪಾತಿಗೂ ಆದೀತು ಮಾಂಬಳ ಇದ್ದರೆ ದಿನವೂ ಮಾವಿನ ಹಣ್ಣಿನ ಕಾಲದಂತೆ ಗೊಜ್ಜು ಸಾರುಸಾಸಮೆ ಸವಿಯುವ ಯೋಗ.





Tuesday 6 October 2020

ಮೊಸರಿನ ಇಡ್ಲಿ

 


ಸೊಸೆ ಬೆಂಗಳೂರಿನಿಂದ ಬರುವಾಗ  ರವಾ ಇಡ್ಲಿ ಮಿಕ್ಸ್ ತಂದಿದ್ದಳು ಅತ್ತೇ ಮಾಡುವ ವಿಧಾನ ಪ್ಯಾಕೆಟಿನಲ್ಲಿ ಬರೆದಿದೆ ಅರ್ಜೆಂಟ್ ಬೇಕಾದಾಗ ಮಾಡಿ.."


ಹೌದಲ್ಲವೇ.. " ಎಂದು ತೆಗೆದಿರಿಸಿದ್ದು  ಮೂರು ಬಾರಿ ಇಡ್ಲಿ ಮಾಡಿದ್ದಾಗಿದೆ ಮನೆಯಲ್ಲಿ ಮೊಸರು ಧಾರಾಳ ಇದ್ದರೆ ಮಾತ್ರಮಾಡಬಹುದಾದ ಇಡ್ಲಿ ಮಿಕ್ಸ್ ಈಗ ಪ್ಯಾಕೆಟ್ ಮೊಸರೂ ಸಿಗುತ್ತೆ.


 ಬೆಂಗಳೂರಿಗೆ ತೆರಳಿದ ನಂತರ  ಇಡ್ಲಿ ಮಾಡಲು ಅನುಮತಿ ನೀಡಿದ್ದ ಮಧು.

ನಾವು ಯಾವಾಗಲೂ ಇದೇ ಇಡ್ಲಿ ತಿನ್ನೂದು ಮನೆಗೆ ಬಂದಿರುವಾಗ ನಮ್ಮ ಊರಿನ ಕ್ರಮದ ತಿಂಡಿ ಮಾಡು.."


ಬೆಂಗಳೂರಿನಿಂದ  ಮಧು ಹೀಗಂದ ಅಮ್ಮ ನಾವು ಊರಿನಲ್ಲಿ ಇದ್ದಾಗ ನೀನು ಇಡ್ಲಿ ಮಾಡಿದ್ದೀಯಲ್ಲಅದು ಹೇಗೆ ಮಾಡಿದ್ದೂಂತ ಬರೆದು ಕಳಿಸ್ತೀಯಾ? "

ನನ್ನ ಬ್ಲಾಗ್ ನಲ್ಲಿ ಇದೆ ನೋಡಿಕೋ.."

"ನಂಗೆ ಫ್ರೆಶ್ ಆಗಿ ಬರೆದು ಕಳಿಸು..  ನಾವೆಲ್ಲ ಮನೆಯಲ್ಲಿದ್ದಾಗ ಮಾಡಿದ ಹಾಗೇ ಆಗ್ಬೇಕು ಆಯ್ತಾ.."

ಆಯ್ತೂ.. "





ಲೋಟ ಮೀಡಿಯಂ ಸಜ್ಜಿಗೆ.  

ನಾನ್ ಸ್ಟಿಕ್ ತವಾಕ್ಕೆ ಹಾಕಿ 3ರಿಂದ 4 ನಿಮಿಷ ಹುರಿಯುವುದು.

ಇಂಡಕ್ಷನ್ ಸ್ಟವ್ ನನ್ನ ಆಯ್ಕೆ.

ಕರಟಬಾರದು ಉಷ್ಣತೆಯ ಹೊಂದಾಣಿಕೆಯಲ್ಲಿ ಹುರಿಯಿರಿ.

ತಣಿಯಲಿ.


ಲೋಟ ಉದ್ದು ತೊಳೆದು ಅರ್ಧ ಗಂಟೆ ನೀರೆರೆದು ಇಡುವುದು.


ಅರೆಯಿರಿ ಉದ್ದಿನ ಬೇಳೆಯನ್ನು ನೆನೆಸಿಟ್ಟ ನೀರನ್ಮೇ ಹಾಕಿ ಅರೆಯಿರಿ.

ಹುರಿದಿಟ್ಟ ಸಜ್ಜಿಗೆಯನ್ನು ತಪಲೆಗೆ ಹಾಕಿ ಅರ್ಧ ಲೋಟ  ನೀರು ಎರೆದು ಸೌಟಿಲ್ಲಿ ತಿರುಗಿಸಿ ಇಡುವುದು.

ಉದ್ದು ನುಣ್ಣಗಾದ ಮೇಲೆ ಸಜ್ಜಿಗೆಯ ಜೊತೆ  ಬೆರೆಸಿರಿ.

ರುಚಿಗೆ ಉಪ್ಪು ಹಾಕಿರಿ.

ಮಾರನೇ ದಿನ ಮುಂಜಾನೆ ಇಡ್ಲಿ ತಯಾರಿಸಿ.

ಬೇಯಲು ಸಮಯ ನೀರು ಕುದಿದ ನಂತರ ಹತ್ತರಿಂದ ಹನ್ನೆರಡು ನಿಮಿಷಗಳು.

ತೆಂಗಿನಕಾಯಿ ಚಟ್ಣಿಯೊಂದಿಗೆ ತಿನ್ನುವುದು.