ಕೂದಲೇನೋ ಕಪ್ಪಗಿದೆ
ಅಜ್ಜಿಯಾದೆನು
ಇನ್ನೂ ಇವೆ ಹಲ್ಲುಗಳು
ಅಜ್ಜಿಯಾದೆನು
ಊರಲಿಲ್ಲ ದಂಟೆ
ಅಜ್ಜಿಯಾದೆನು
ಬಾಗಲಿಲ್ಲ ಸೊಂಟ
ಆಹ... ನಾನು ಅಜ್ಜಿಯಾದೆನು
ಯಾಕಳುವೆ ನೀ ಕಂದ
ಮಲಗಿ ಏಳಲಾರೆ ಎಂದೇ
ಹಾಯಾಗಿ ಮಲಗು ನೀ ಕಂದ
ನಲಿನಲಿದು ಬರಲಾರೆ ಎಂದೇ
ಗತಿಯೀಗ ನಿನಗೆ ಅಳುವೊಂದೇ
ನಿನ್ನಳುವೆ ಸುಗಮ ಸಂಗೀತವೆಂದೇ
ಹಾಯಾಗಿ ಮಲಗು ನೀ ಕಂದ
ಆಹ... ನಾನು ಅಜ್ಜಿಯಾದೆನು
0 comments:
Post a Comment