Pages

Ads 468x60px

Thursday 23 September 2021

ಜೋಳದ ಪಲ್ಯ


ತರಕಾರಿಗಳೊಂದಿಗೆ ಜೋಳವೂ ಬಂದಿದೆ.  

ಜೋಳ ಯಾಕೆ ತಂದಿದ್ದೂ? "

ಅಂಗಡಿಯಲ್ಲಿತ್ತುತಿಂದು ನೋಡುವ.."

ತಿನ್ನಲಿಕ್ಕೆ ಕೆಂಡದಲ್ಲಿ ಸುಡಬೇಕಲ್ಲವೇ..  ಹಸಿ ಹಸಿ ಕಾಳು ಹೇಗೆ ತಿನ್ನುವುದು? "

ಸುಡಲಿಕ್ಕೆ ಕೆಂಡದ ಒಲೆ ಎಲ್ಲಿದೆ ಜೋಳದ ಕಾಳುಗಳನ್ನು ಬಿಡಿಸಿ ಬೇಯಿಸಿ ನೋಡಿದ್ರಾದೀತು.

ಕಾಳುಗಳನ್ನು ಬಿಡಿಸುವುದು ಹೇಗೆ?

ಕತ್ತಿಯಲ್ಲಿ ಬುಡದಿಂದ ಕತ್ತರಿಸಿ ಸಿಪ್ಪೆಗಳನ್ನೆಲ್ಲ ಬಿಡಿಸಿದಾಗ ಕಸವೇನೋ ಆಯ್ತು ಪರವಾಗಿಲ್ಲ ಅಡಿಕೆ ಮರದ ಬುಡಕ್ಕೆ ಗೊಬ್ಬರ ಸಿಕ್ಕಿತು.

ನಂತರ ಒಂದೊಂದೇ ಕಾಳು ಬಿಡಿಸಿಒಂದು ಪದರ ಬಿಡಿಸಿದಾಗ ಕಾಳುಗಳ ಗುಟ್ಟು ತಿಳಿಯಿತು ಉದ್ದನೆಯ ಒಂದು ಸಾಲಿನ ಕಾಳುಗಳನ್ನು ಬಿಡಿಸಿದ ನಂತರ ಉಳಿದ ಕಾಳುಗಳು ಸುಲಲಿತವಾಗಿ ತಟ್ಟೆಗೆ ಬಿದ್ದುವು.


ಕುದಿಯುತ್ತಿರುವ ನೀರಿಗೆ ಅವಶ್ಯವಿದ್ದಂತೆ ಜೋಳದ ಕಾಳುಗಳನ್ನು ಹಾಕಿ ಐದು ನಿಮಿಷ ಕುದಿಸಲಾಯಿತು ನಂತರ ನೀರು ಬಸಿದು ತಟ್ಟೆಯಲ್ಲಿಟ್ಟಾಗ ಜೋಳದ ಕಾಳುಗಳು ಉದರದೊಳಗೆ...

ಸಂಜೆ ಅವಲಕ್ಕಿ ಉಸುಲಿಯ ಹಾಗೆ ಜೋಳದ ಉಸುಲಿ ಮಾಡೋಣ ಅಂತ.... "  

ಹೇಗಾದ್ರೂ ಸರಿತಿಂದು ಮುಗಿಯಿತಲ್ಲ.. “


ಅಂತೂ ಜೋಳ ತಿನ್ನುವ ಉಪಾಯ ಸರಳವಾಗಿ ತಿಳಿಯಿತು.

 ಅಳಿಯ ಬಂದಿದ್ದಾಗ ಜೋಳಗಳನ್ನೆಲ್ಲ ಬಿಡಿಸಿ ಡಬ್ಬದಲ್ಲಿ ತುಂಬಿಸಿ ಕೊಟ್ಟ.   ಅಂತೂ ದಿನವೂ ಜೋಳದ ತಿನಿಸು


ಜೋಳದ ಕಾಳುಗಳು ಡಬ್ಬ ತುಂಬ ಇರುವಾಗ ಅಡುಗೆಗೆ ಬಳಸೋಣ.

ತೊಂಡೆಕಾಯಿ ಇದೆ ತೊಂಡೆಕಾಯಿ ಪಲ್ಯಕ್ಕೆ ಜೋಳದ ಹೊಂದಾಣಿಕೆ ಹೇಗಿದ್ದೀತು ನೋಡಿಯೇ ಬಿಡೋಣ.


10ರಿಂದ 15 ತೊಂಡೆಕಾಯಿಗಳನ್ನು ತೊಳೆದು ಪಲ್ಯಕ್ಕೆ ಸೂಕ್ತವಾಗುವಂತೆ ಹೆಚ್ಚುವುದು ಅತಿ ಕಡಿಮೆ ನೀರಿನಲ್ಲಿ ಒಂದು ಸೀಟಿ ಹಾಕಿಸಿ ಕೊಡಲೇ ಒತ್ತಡ ಇಳಿಸಿಕುಕ್ಕರ್ ಮುಚ್ಚಳ ತೆರೆಯಿರಿಬೆಂದಿರುತ್ತದೆ.

ಒಂದು ಯಾ ಎರಡು ಹಿಡಿ ಜೋಳದ ಕಾಳುಗಳನ್ನು ಮುಳುಗುವಷ್ಟು ನೀರೆರೆದು 5 ನಿಮಿಷ ಕುದಿಸಿ ಬಸಿಯಿರಿ.

ತರಕಾರಿ ಬೇಯಿಸುವಾಗಲೇ ಉಪ್ಪು ಹಾಕುವುದು ಉತ್ತಮ ಸಾಕಾಗದಿದ್ದರೆ ಒಗ್ಗರಣೆಯ ಸಮಯದಲ್ಲಿ ಹಾಕಬಹುದು.


ಬಾಣಲೆಗೆ ಒಗ್ಗರಣೆ ಸಾಮಗ್ರಿಗಳನ್ನು ಸುರುವಿಸಾಸಿವೆ ಚಟಪಟ ಎಂದಾಗ ಕರಿಬೇವು ಉದುರಿಸಿಬೆಂದಂತಹ ತೊಂಡೆ ಹಾಗೂ ಜೋಳ ಹಾಕಿ,   ರುಚಿಯ ಉಪ್ಪುಚಿಟಿಕೆ ಅರಸಿಣ ಬೇಕಿದ್ದರೆ ಅತ್ಯಲ್ಪ ಮೆಣಸಿನಹುಡಿಕಾಯಿತುರಿ ಎಲ್ಲವನ್ನೂ ಬೆರೆಸಿ ಸ್ವಲ್ಪ ಹೊತ್ತು ಮಂದಾಗ್ನಿಯಲ್ಲಿ ಮುಚ್ಚಿಟ್ಟು ಸ್ಟವ್ ನಂದಿಸಿ ಪಲ್ಯದಲ್ಲಿ ನೀರಿನಂಶ ಇರಬಾರದು ಮಾಡಿದ ಪಲ್ಯ ಒಂದೇ ಹೊತ್ತಿನಲ್ಲಿ ಮುಗಿದೇ ಹೋಯ್ತು.


ನಾರುಯುಕ್ತವಾದ ಜೋಳ ಎಲ್ಲ ವಯೋಮಾನದವರಿಗೆ ಉತ್ತಮ ಆಹಾರ ಮುಂಜಾನೆಯಿಂದ ರಾತ್ರಿವರೆಗೆ ಅಕ್ಕಿಯಿಂದಲೇ ಮಾಡಿದ ಆಹಾರ ಪದಾರ್ಥ ತಿನ್ನುವವರು ಜೋಳವನ್ನೂ ತಿನ್ನಿ.


ಸಿರಿಧಾನ್ಯಗಳಲ್ಲಿ ಒಂದಾದ ಜೋಳ ಭಾರತದಲ್ಲಿ ಉತ್ತರ ಕರ್ನಾಟಕದ ಬೆಳೆ ಅಲ್ಲಿ ಜೋಳದ ರೊಟ್ಟಿ ದೈನಂದಿನ ಆಹಾರ.

ಜೋಳ ತಿಂದು ತೋಳನಾಗು " ನುಡಿಮುತ್ತು ಕೂಡಾ ಇದೆ ಅಂದರೆ ಬಲಶಾಲಿಯಾಗು ಎಂದರ್ಥ.


ದಿನದ ಚಪಾತಿ ಹಿಟ್ಟನ್ನು ಜೋಳದ ಹಿಟ್ಟನ್ನೂ ಸೇರಿಸಿ ಮಾಡುವ ರೂಢಿ ನನ್ನದು.  ವಿಧಾನವನ್ನು  ಮೊದಲೇ ಬರೆದಿರುತ್ತೇನೆ,   ಆಸಕ್ತರು ಹುಡುಕಿ ಓದಿರಿ. 




Thursday 16 September 2021

ಪಂಚರಂಗಿ ದೋಸೆ

 


ನನ್ನ ಅಡುಗೆ ಮನೆಗೆ ಬೆಂಗಳೂರಿನಿಂದಲೂ  ಏನೇನೋ ಪ್ಯಾಕೇಟುಗಳು ಬರುತ್ತಿರುತ್ತವೆ ಅವುಗಳಲ್ಲಿ ಪಂಚರಂಗಿ ಧಾನ್ಯಗಳೂ ಇತ್ತು.   ಏನಪ್ಪಾ ಅಂದ್ಪೆ ಐದು ಬಗೆಯ ಧಾನ್ಯಗಳ ಬೆರಕೆ ಅಷ್ಟೇ ಕಡ್ಲೆಬೇಳೆ ತೊಗರಿಬೇಳೆ ಹೆಸ್ರು ಹುರುಳಿ  ಇತ್ಯಾದಿ..


ಅರ್ಧ ಗಂಟೆ ನೆನೆಸಿಟ್ಟು ನಂತರ ಬೇಯಿಸುಮೂರು ನಾಲ್ಕು ವಿಸಿಲ್ ಹಾಕಲಿ... " ಮಗ ಹೇಳಿದಂತೆ ದಾಲ್ ಆಯ್ತು ರುಚಿಗೆಉಪ್ಪುಇಂಗು ಕರಿಬೇವಿನ ಒಗ್ಗರಣೆಪರಿಮಳಕ್ಕೆ ಕೊತ್ತಂಬರಿ ಸೊಪ್ಪು ಖಾರಕ್ಕೆ ಶುಂಠಿ ಹಸಿಮೆಣಸು..


ಅರ್ಧ ಕಡಿ ನಿಂಬೆ ಹುಳಿ ಹಿಂಡಿ ರಸ ಎರೆದದ್ದು.   ಆರೋಗ್ಯಸೂತ್ರದ ಅನ್ವಯ ನಿಂಬೆಯ ಸಿಪ್ಪೆಯೂ ತೊವ್ವೆಯಲ್ಲಿ ತೇಲಿತು.   ಎಡವಟ್ಟಾಯ್ತು

ನನ್ನ ದಾಲ್ ಕಹಿ ರುಚಿ ಕೊಟ್ಟಿತು ಒಂದೊಂದ್ಸಾರಿ ಹೀಗೂ ಆಗುತ್ತೆ ಪರವಾಗಿಲ್ಲ ಬಿಡಿ.


ಪಂಚರಂಗಿ ಧಾನ್ಯಗಳನ್ನು ಹಾಕಿ ದೋಸೆ ಎರೆಯುವ ಹುಮ್ಮಸ್ಸು ಬಂದಿತು.

ಒಂದು ಲೋಟದಲ್ಲಿ ಅರ್ಧದಷ್ಟು ಉದ್ದಿನಬೇಳೆ ತುಂಬಿಸಿನಂತರ ಪಂಚರಂಗಿ ಬೇಳೆ ಮೆಂತೆಪಚ್ಚೆಸ್ರು ತುಂಬಿ ಲೋಟ  ಭರ್ತಿಮಾಡುವುದು ಒಂದು ಬಾರಿ ತೊಳೆದು ನೀರೆರೆದು ಇಡುವುದು ನಾಲ್ಕು ಗಂಟೆ ಆದರೂ ನೀರಿನಲ್ಲಿ ನೆನೆಯಲಿ.

ಬೆಳ್ತಿಗೆ ಅಕ್ಕಿ ಒಂದೂವರೆ ಲೋಟ ಇರಲಿ,  ನೀರೆರೆದು ಇಡುವುದು ಅರೆಯುವ ಮುನ್ನ ನಾಲ್ಕಾರು ಬಾರಿ ತೊಳೆಯಿರಿ.


ಸಮಯವಾದೊಡನೆ ಬೇಳೆಗಳನ್ನು ನುಣ್ಣಗೆ ಅರೆಯಿರಿ.

ನಂತರ ಅಕ್ಕಿಯನ್ನೂ ನುಣ್ಣಗೆ ಅರೆದು ರುಚಿಗೆ ಉಪ್ಪು ಹಾಕಿ  ಕೂಡಿಸಿಬೆರೆಸಿ ಮುಚ್ಚಿ ಇಡುವುದು ಹುದುಗು ಬರಲಿ.

ಅರ್ಧ ಲೋಟ ಬಾಂಬೇ ಸಜ್ಜಿಗೆಯನ್ನು ಪ್ರತ್ಯೇಕವಾಗಿ ನೀರೆರೆದು ಇರಿಸತಕ್ಕದ್ದು.  

ಮಾರನೇ ದಿನ ಕಾವಲಿ ಬಿಸಿಯಾದ ನಂತರ ತುಪ್ಪ ಯಾ ಅಡುಗೆಯ ಎಣ್ಣೆ ಸವರಿದಿರಾ,

ದೋಸೆ ಹಿಟ್ಟು ಉಬ್ಬಿ ಮೇಲೇರಿದೆ ಸೌಟಿನಲ್ಲಿ ಚೆನ್ನಾಗಿ ತಿರುಗಿಸಿ ನೀರಿನಲ್ಲಿ ನೆನೆದ ಬಾಂಬೇ ಸಜ್ಜಿಗೆಯನ್ನೂ ಸೇರಿಸಿ ಕಲಕಿಕೊಳ್ಳಿ.

ಇನ್ನೇಕೆ ತಡದೋಸೆ ಎರೆಯಿರಿ.

ತೆಳ್ಳಗಾಗಿ ಹಚ್ಚಿದ ದೋಸೆ ಗರಿಗರಿಯಾಗಿಯೂಮೃದುವಾಗಿಯೂ ಎದ್ದುಬಂದಿತು.   

ಇಂತಹ ದೋಸೆಗೆ ಗಟ್ಟಿಯಾಗಿ ಕೆಂಪು ಚಟ್ನಿ ಅರೆದು ಹಚ್ಚಿ ಒಳಗೆ ಬಟಾಟೆಯ ಹೂರಣ ಇರಿಸಿದಾಗ ಮಸಾಲೆದೋಸೆ ಆಯ್ತು ಅನ್ನಿ.






Sunday 5 September 2021

ಕಡಲೆ ಉಸುಲಿ


 


ಏನಾಗಿತ್ತೂ ಅಂದರೆ ರೇಷನ್ ಶಾಪ್ ಉಚಿತ ಕಿಟ್ ಸವಲತ್ತುಗಳಲ್ಲಿ ಕಡಲೆಕಾಳು ಹಾಗೇ ಉಳಿದಿದೆ.   ಮೊದಲಾಗಿದ್ದರೆ ಇಂತಹ ಉಳಿಕೆ ಸಾಮಗ್ರಿಗಳು ಕೆಲಸಗಿತ್ತಿಯರ ಪಾಲು.   ಕೊರೋನಾ ಕಾರಣ ಹಾಗೂ ನಮ್ಮ ಕೇರಳ ರಾಜ್ಯದ ಸರ್ವಸಮಾನತೆಯ ಧರ್ಮದಿಂದಾಗಿ ಕಾರ್ಮಿಕರೇ ಇಲ್ಲವಾಗಿದ್ದಾರೆ ಹೋಗಲಿ ನಮಗೇಕೆ ಬೇಡದ ರಗಳೆ ಈಗ ಕಡಲೆಕಾಳು ಅಡುಗೆಮನೆಯಲ್ಲಿ ಯಾವ ರೂಪಾಂತರ ಹೊಂದಿತೆಂದು ನೋಡೋಣ.


ಇಂತಹ ಕಾಳುಗಳ ಅಡುಗೆಯೆಂದರೆ ದಿನ ಮುಂಚಿತವಾಗಿ ನೀರೆರೆದು ಇಡಬೇಕಾಗಿತ್ತು ನೆನಪಾಗದೇ ಹೋಯಿತು ಈಗ ನನ್ನ ಆಸಕ್ತಿಯ ತಾಣ ಫೇಸ್ ಬುಕ್ ಇತ್ಯಾದಿ ಮಾತ್ರವಲ್ಲದೆ ಕ್ಲಬ್ ಹೌಸ್ ಕೂಡಾ ಸೇರಿದೆ ಕ್ಲಬ್ ಚಟುವಟಿಕೆಗಳ ಕುರಿತು ಇನ್ನೊಮ್ಮೆ ಬರೆಯಲಿದ್ದೇನೆ.


ಕಡಲೆಕಾಳು ನೆನೆಯಬೇಕಾಗಿತ್ತು ಈಗ ರೈಸ್ ಕುಕ್ಕರಲ್ಲಿ ನೀರು ಬಿಸಿ ಬಿಸಿಯಾಗಿ ಇರುವುದರಿಂದ  ಒಂದು ಲೋಟ ಕಡಲೆಕಾಳನ್ನು ತೊಳೆದು ಹಾಕಿ ಮುಚ್ಚಿ ಇಡಲಾಯಿತು ಬೇಯದಂತೆ ಪ್ಲಗ್ ತೆಗೆಯಲಾಯಿತು ಇಂಡಕ್ಷನ್ ಸ್ಟವ್ ಹಾಳಾಗಿದೆ ಕಣ್ರೀ ಅಗತ್ಯಕ್ಕಿರಲಿ ಎಂದು ನೀರು ಕುದಿಸಲು  ರೈಸ್ ಕುಕ್ಕರ್,   ಇಲ್ಲಾಂದ್ರೆ ಗ್ಯಾಸ್ ನಾಲ್ಕೇ ದಿನದಲ್ಲಿ ಮುಗಿದೀತು.


ಅಡುಗೆ ಆಯ್ತು ಊಟವೂ ಮುಗಿಯಿತು ಒಂದರೆ ತಾಸು ಮಲಗಿ ಎದ್ದೂ ಆಯ್ತು.   ಸಂಜೆಗೇನು ತಿಂಡಿ ಎಂದು ಚಿಂತಿಸುತ್ತಲೇ ಒಳಬಂದಾಗ ರೈಸ್ ಕುಕ್ಕರ್ ಒಳಗಿದ್ದ ಕಡಲೆಕಾಳು ಕೈ ಬೀಸಿ ಕರೆಯಿತು.


ಮುಚ್ಚಳ ತೆರೆದಾಗ ಬಿಸಿ ನೀರಿನಲ್ಲಿ ಮಿಂದ ಕಾಳುಗಳು ಹಿಗ್ಗಿ ಉಬ್ಬಿವೆ ಪರವಾಯಿಲ್ಲ ನೀರು ಸಹಿತವಾಗಿ ಕಡಲೆಕಾಳು ಕುಕ್ಕರ್ ಸೇರಿ ಗ್ಯಾಸ್ ಒಲೆಯೇರಿ ಮೂರು ಸೀಟಿ ಹಾಕಿಸ್ಕೊಂಡಿತು ಆರಲಿ.    ಅಂದ ಹಾಗೆ ರುಚಿಗೆ ಬೇಕಾದ ಉಪ್ಪು ಹಾಕಿಯೇ ಬೇಯಿಸುವುದು.


ಒಂದು ದೊಡ್ಡ ನೀರುಳ್ಳಿ ಹೆಚ್ಚಿ ಇಡುವುದು.

ಪಲ್ಯಕ್ಕಾಗಿ ಕಾಯಿ ತುರಿಯುವಾಗ ಸ್ವಲ್ಪ ತೆಂಗಿನ ತುರಿ ತೆಗೆದಿರಿಸಿದ್ದು ಒಳ್ಳೆಯದೇ ಆಯಿತು.


ಕುಕ್ಕರ್ ತಣಿದಿದೆ ಕಾಳು ಬೆಂದಿದೆ.

ಒಂದೊಂದೇ ಕಾಳು ಬಾಯಿಗೆಸೆದು ತಿನ್ನಲು ಮಕ್ಕಳು ಮನೆಯಲ್ಲಿಲ್ಲ ನಮ್ಮ ತಿನಿಸು ಹೇಗಿರಬೇಕು?


ಮಿಕ್ಸಿಯ ಪುಟ್ಟ ಜಾರ್ ಒಳಗೆ ಮೂರು ಸೌಟು ಕಡಲೆಕಾಳು ತುಂಬಿ ಒಂದೇ ಬಾರಿ ಟೊರ್ರ್ ಅನ್ನಿಸಿ,

ಅಂತೆಯೇ ನೀರುಳ್ಳಿ ಚೂರುಗಳೂ ಮಿಕ್ಸಿಯಲ್ಲಿ ಇನ್ನಷ್ಟು ಚಿಕ್ಕ ಚೂರುಗಳಾಗಿ,

ಬಾಣಲೆಯಲ್ಲಿ ಒಗ್ಗರಣೆಗಿಟ್ಟು,

ಸಾಸಿವೆ ಸಿಡಿಸಿ,

ಕರಿಬೇವು ಬೀಳಿಸಿ,

ನೀರುಳ್ಳಿಕಾಯಿತುರಿ ಬೀಳಿಸಿ ಸೌಟಾಡಿಸಿ,

ಚಿಟಿಕೆ ಅರಸಿಣ,

ರುಚಿಗೆ ಸಕ್ಕರೆ ಬೆರೆಸಿ,

ಕಡಲೆಕಾಳಿನ ಮುದ್ದೆಯನ್ನು ಸೇರಿಸಿ.

ಇಲ್ಲಿಗೆ ನಮ್ಮಈ ಸಂಜೆಯ ತಿನಿಸು ಆಗಿಯೇ ಹೋಯ್ತು.

ತಟ್ಟೆಗೆ ಹಾಕಿಕೊಂಡು ಚಹಾಪಾನದೊಂದಿಗೆ ಉಸುಲಿ ತಿಂದು ಮುಗಿಯಿತು.


ಇಂತಹ ಕಾಳುಗಳ ಸೇವನೆ ಆರೋಗ್ಯ ದೃಷ್ಟಿಯಿಂದಲೂ ಉತ್ತಮ.   ವೈದ್ಯರು ಕೊಡುವ ಮಲ್ಟಿ ವಿಟಮಿನ್ ಟಾನಿಕ್ ಇದರ ಮುಂದೆ ಏನೂ ಅಲ್ಲ ಪ್ರೊಟೀನ್ ಸಮೃದ್ಧಿಯಿಂದ ಕೂಡಿರುವ ಕಾಳುಗಳನ್ನು ದಿನವೂ ಸೇವಿಸುತ್ತಲಿರಬೇಕು ರೋಗರುಜಿನಗಳು ಕಣ್ಮುಂದೆ ಹಾಯದಂತೆ ಬದುಕಲು ಕಲಿಯೋಣ.


ಇದೇ ಮಾದರಿಯಲ್ಲಿ ಹಾಗೇನೇ ತಿನ್ನಲು ಕಷ್ಟವೆನಿಸುವ ಇನ್ನಿತರ ಕಾಳುಗಳ ಉಸುಲಿ ಮಾಡಬಹುದಾಗಿದೆ.

ನಿಮ್ಮ ರುಚಿಯ ಆಯ್ಕೆಗನುಸಾರ ಮಸಾಲೆ ಪುಡಿಗಳನ್ನು ಹಾಕಿರಿ.


ಬೇಯಿಸಿದ ಎಲ್ಲ ಕಡಲೆಕಾಳುಗಳು ಉಸುಲಿಯಾಗಿ ಮಾರ್ಪಟ್ಟಿಲ್ಲ ಉಳಿದ ಕಾಳುಗಳು ರಾತ್ರಿಯ ಫಳಾರಕ್ಕೆ ಪರೋಟಾ ಆಗಿವೆ.   ನನ್ನ ರಾತ್ರಿಯ ರೊಟ್ಟಿ ಹೇಗಾಯ್ತು?


ಚಪಾತಿ ಹಿಟ್ಟು ಎಂದಿನಂತೆ ಮಾಡಿ ಇಡುವುದು.

ಕಡಲೆಕಾಳುಗಳು ಮಿಕ್ಸಿಯಲ್ಲಿ ಹುಡಿ ಆಗಲಿ.

ಮಧು ಬೆಂಗಳೂರಿನಿಂದ ತಂದಿದ್ದ ಆರ್ಗಾನಿಕ್ ಬೆಲ್ಲದ ಹುಡಿ ಇದ್ದಿತು ಎರಡು ಚಮಚ ಬೆಲ್ಲದ ಹುಡಿಯನ್ನು ಬೆರೆಸಿನನಗೆ ಬೇಕಿದ್ದ ಎರಡು ಉಂಡೆಅಂದರೆ ಹೂರಣ ಮಾಡಿಕೊಳ್ಳಲಾಯಿತು  ಹೂರಣ ತುಂಬಿ ಲಟ್ಟಿಸಿ ಬೆಣ್ಣೆ ಹಾಕಿ ರೊಟ್ಟಿ ಬೇಯಿಸಲಾಯಿತು.


ತಾಜಾ ತುಪ್ಪ ಮೇಲಿನಿಂದ ಎರೆದು ತಿಂದಾಯ್ತು.

ಅರೆ ಇನ್ನೂ ಸ್ವಲ್ಪ ಬೆಲ್ಲ ಹಾಕಿರುತ್ತಿದ್ದರೆ ಹೋಳಿಗೆ ಯಾ ಒಬ್ಬಟ್ಟು ಅನ್ನಬಹುದಾಗಿತ್ತು ಕಣ್ರೀ...