ಬೆಂಗಳೂರಿನ ನಮ್ಮ ಪುಟ್ಟಕ್ಕ ರಜೆಯ ದಿನಗಳಲ್ಲಿ ಅಜ್ಜೀ ಮನೆಗೆ ಬಂದಿಳಿದಳು,
“ ಪಾಪೂಗೆ ಎಂತಹ ರಜೆ ಅಂದಿರಾ? “
“ ಈಗ ಪ್ರಿ ನರ್ಸರಿ ಶಾಲೆಗೆ ಹೋಗ್ತಿದಾಳೆ ಕಣ್ರೀ..”
ಬಂದವಳೇ ಅತ್ತ ಇತ್ತ ತಿರುಗಾಡಿ ಬಂದಳು. “ ಅಜ್ಜೀ.. ಅಂಗಳದಲ್ಲಿ ನವಿಲುಗರಿ ಸಿಕ್ಕಿತು. “ ಎಂದಳು.
“ ಹೌದಾ, ಇಟ್ಟುಕೋ.. ಬೆಳಗಾದ್ರೆ ನವಿಲು ಬರುತ್ತೆ ನೋಡು. ಅಂಗಳಕ್ಕೂ ಬರುತ್ತೆ, ಆದ್ರೆ ತುಂಟಿ ಇದಾಳಲ್ಲ, “ ಬೌ ಬೌ “ ಅಂದು ಹಾರಿ ಹೋಗುವ ಹಾಗೆ ಮಾಡುತ್ತೆ..”
ಸಂಜೆಯಾಗುತ್ತಲೂ ನಾನೂ ಪುಟ್ಟಕ್ಕನೂ ನಾಗಬನದ ವರೇಗೆ ಹೋದೆವು, ಜಂಬುನೇರಳೆ ಗಿಡದ ಸಮೀಪ ತುಂಬಾ ನವಿಲು ಗರಿಗಳು! “ ಎಷ್ಟೊಂದು ನವಿಲುಗರಿಗಳು! “ ನವಿಲು ಗರಿ ಯಾಕೆ ಹೀಗೆ ಚಲ್ಲಾಪಿಲ್ಲಿಯಾಗಿ ಬಿದ್ದಿದೆ ಎಂದು ತಿಳಿಯದಾಯಿತು. ನವಿಲಿನ ಪ್ರಾಣಕ್ಕೇನಾದರೂ ಅಪಾಯವಾಯಿತೇ…
“ಗರಿ ಇಲ್ಲದಿದ್ರೆ ನವಿಲಿಗೆ ಏನಾಗುತ್ತೆ ಅಜ್ಜೀ? “
“ ಏನೂ ಆಗೂದಿಲ್ಲ, ಹೊಸಾ ಗರಿ ಬರುತ್ತೆ ಅಷ್ಟೇ..”
ಮನೆಗೆ ಬಂದಾಗ ಪುಟ್ಟಿಯ ಅಜ್ಜನಿಗೂ ವಿಚಾರ ತಿಳಿಯಿತು.
“ಎಲ್ಲಿದೆ ನವಿಲು ಗರಿ.. “ ಅನ್ನುತ್ತ ನವಿಲುಗರಿಗಳನ್ನೆಲ್ಲ ಸಂಗ್ರಹಿಸಿ ತಂದರು. “ ದಿನವೆಷ್ಟಾಯ್ತೋ ಈ ಗರಿಗಳಿಗೆ? ತುಂಬ ಮಣ್ಣು ಮೆತ್ತಿ ಕೊಂಡಿದೆ, ಚೆನ್ನಾಗಿ ತೊಳೆಯಬೇಕು.”
“ ಗರಿಗಳನ್ನು ಇಟ್ಕೊಂಡು ಏನ್ಮಾಡೂದು?”
“ನಿನಗ್ಗೊತ್ತಿಲ್ಲ ಸುಮ್ನಿರು, ನವಿಲುಗರಿ ಐಶ್ವರ್ಯದ ಸಂಕೇತ ಗೊತ್ತಾ..”
ಅಹ! ಜಯ್ ಶ್ರೀಕೃಷ್ಣಾ…
0 comments:
Post a Comment