Pages

Ads 468x60px

Wednesday 9 December 2020

ಮಂಜಾಲ್ ದೋಸೆ

 




ಅಂಗಳದ ಒಂದು ಮೂಲೆಯಲ್ಲಿ ಇದ್ದಂತಹ ತೆಂಗಿನಕಾಯಿ ರಾಶಿಯನ್ನು ತಪಾಸಿಸುತ್ತಿದ್ದಾಗ ಹಸೀ ತೆಂಗಿನಕಾಯಿ ಗೋಚರವಾಯಿತು.   ಎತ್ತಿ ನೋಡಿದಾಗ ತುಂಬ ಭಾರವಿದೆ ಅಂದರೆ ಇದು ಇನ್ನೂ ತೆಂಗಿನಕಾಯಿ ಆಗಿಲ್ಲ ಒಳಗಿನ ತಿರುಳು ದೋಸೆಗೆ ಲಾಯಕ್ಕು ಎಂದು ಸುಲಿದೇ ಒಳಗೆ ತಂದುಒಡೆದು ಒಳಗಿನ ನೀರು ಕುಡಿದು ತಿರುಳನ್ನು ತುರಿದು ಇಟ್ಟಾಯ್ತು.

ಎರಡು ಲೋಟ ಬೆಳ್ತಿಗೆ ಅಕ್ಕಿ ನೀರಿಗೆ ಬಿತ್ತು.

ಸಂಜೆ ಅರೆಯುವುದು.

ಅರೆಯುವ ಹೊತ್ತಿಗೆ ನನ್ನ ಅರಸಿಣ ಗೆಡ್ಡೆ ನೆನಪಾಯ್ತು.   ಅಡುಗೆ ಮನೆಯಲ್ಲೇ ಸ್ವಲ್ಪ ಹಸಿ ಗೆಡ್ಡೆಗಳನ್ನು ಕಾಣುವಂತೆ ಇಟ್ಟಿರುವಾಗ ಅರ್ಧ ಇಂಚು ಉದ್ದದ ಅರಸಿಣ ಗೆಡ್ಡೆ ಚೂರಿಯಲ್ಲಿ ಚೂರು ಚೂರಾಗಿ ಅರೆಯುವ ಸಾಧನದೊಳಗೆ ಬಿದ್ದಿತು ಹಳದೀ ಬಣ್ಣದ ದೋಸೆಹಿಟ್ಟು ದೊರೆಯಿತು.


ನಾಳೆ ದೋಸೆ ಎರೆಯಲಿಕ್ಕಾಗಿ ಮುಚ್ಚಿ ಇರಿಸಲ್ಪಟ್ಚಿತು.

ಮುಂಜಾನೆ  ದೋಸೆ ತೆಳ್ಳಗೆ ಪೇಪರ್ ದೋಸೆಯಂತೆ ಎರೆಯಲ್ಪಟ್ಟಿತು.


ಚಟ್ಣಿ ಆಗ್ಬೇಡವೇ ಮಾಂಙನ್ನಾರಿಯೂ ಇರುವಾಗ ಹಸಿಮೆಣಸುಕೊತ್ತಂಬರಿ ಸೊಪ್ಪುತೆಂಗಿನತುರಿಯೊಂದಿಗೆ ಒಂದು ಚಟ್ಣಿ ಎದ್ದುಬಂದಿತು.


ಮಾಂಙನ್ನಾರಿ ಚಟ್ಣಿಯೂ ಅರಸಿಣ ಗೆಡ್ಡೆಯೂ ಕೂಡಿದ ಸುವಾಸಿತ ದೋಸೆ ನಮ್ಮ ಮುಂಜಾನೆಯ ತಿನಿಸು.


ಉಳಿದ ಚಟ್ಣಿ ಹಾಗೂ ದೊಸೆ ಹಿಟ್ಟು ಬೆರೆತು ಫ್ರಿಜ್ ಪೆಟ್ಟಿಗೆ ಸೇರಿದುವುಸಂಜೆಗೊಂದು ಪರಿಮಳಿತ ಪಡ್ಡು ಬರಲಿದೆ.


ಪಡ್ಡು ಮಾಡಲಿಕ್ಕೆ ಬೇರೆ ಯಾವುದೇ ಮಸಾಲೆ ಬೇಕಾಗಲಿಲ್ಲ ಚಟ್ಣಿಯಲ್ಲೇ ಎಲ್ಲ ಇತ್ತಲ್ಲ..


ನಾವೂ ತಿಂದೆವು ನಾಯಿಯೂ ಕುಣಿಕುಣಿದು ತಿಂದಿತು.


“ ಅದ್ಯಾಕೆ ಮಂಜಾಲ್ ದೋಸೆ ಅಂದಿದ್ದೂ? "


ಅಂದ ಹಾಗೆ ಮಂಜಾಲ್ ಅಂದ್ರೆ ನಮ್ಮೂರಿನ ಆಡು ಭಾಷೆ ತುಳುವಿನಲ್ಲಿ ಅರಸಿಣ ಎಂದರ್ಥ ಹಳದಿ ಬಣ್ಣವೂ ತುಳುವಿನಲ್ಲಿ ಮಂಜಾಲ್ ಎಂದಾಗಿರುತ್ತದೆ.


ಅಷ್ಟೇನಾ ಸರಿ ಗೊತ್ತಾಯ್ತು ಬಿಡಿ.. "

ಅಲ್ವೇ ಮತ್ತೇ ದೋಸೆ ಬರಹಕ್ಕೊಂದು ಹೆಸರು ಇಡದಿದ್ದರೆ ಹೇಗೆ? "





0 comments:

Post a Comment