Pages

Ads 468x60px

Monday, 12 June 2023

ರಾಗಿ ಅವಲಕ್ಕಿ




 ಹೀಗೂ ಅವಲಕ್ಕಿ ಮಾಡ್ತಾರೇಂತ ತಿಳಿದೇ ಇರಲಿಲ್ಲ,  ಮನೆಗೆ ಮಂಡಕ್ಕಿಜೋಳಾಪುರಿ ಗೋಣಿಯಲ್ಲಿ ಹೊತ್ತು ತಂದು ಸೇರಿನಲ್ಲಿ ಅಳೆದು ಕೊಡುವ ತಿರುಗಾಟದ ಮಾರಾಟಗಾರನೇ  ರಾಗಿ ಅವಲಕ್ಕಿ ತಂದದ್ದು.   ಅವನೂ ರಸ್ತೆಯಿಂದ ಇಳಿದು ನಮ್ಮ ಮನೆ ತನಕ ಬರುತ್ತಾನಲ್ಲ ಎಂಬ ದಾಕ್ಷಿಣ್ಯಕ್ಕೆ ನಾವೂ ಕೊಳ್ಳುತ್ತಿದ್ದೆವು.   ಬಾರಿ ರಾಗಿ ಅವಲಕ್ಕಿ ತಂದ


“  ರಾಗಿ ಅವಲಕ್ಕಿ ಏನು ಮಾಡಲೀ…”

“ ನೀನು ಏನೂ ಮಾಡೂದು ಬ್ಯಾಡ ಹಾಗೇ ಹಾಲು ಎರೆದು ತಿಂತೇನೆ.. “

“ ಆಯಿತು ಹಾಗಾದರೆ… “  ಆದರೂ ಚಪಲ ಬಿಡಬೇಕಲ್ಲ ಏನೋ ಒಂದು ಸವಿರುಚಿ ಮಾಡದಿದ್ದರೆ ಹೇಗೆ?


ನಮ್ಮ ಕಡಂಬಿಲ ಸರಸ್ವತಿ ರಾಗಿ ಅವಲಕ್ಕಿ ಕಂಡಂತಿಲ್ಲ ಇದು ಉತ್ತರ ಕರ್ನಾಟಕದ ಸ್ಪೆಶಲ್ ಆಗಿರಲೇ ಬೇಕು.   ಶಾಂತಾದೇವಿ ಮಾಳವಾಡ ಬರೆದ ಪುಸ್ತಕದಲ್ಲಿ ಅವಲಕ್ಕಿ ಚೂಡಾ ಎಂಬ ತಿನಿಸು ಓದಿದ ಹಾಗಿದೆ ಶೇಂಗಾಪುಟಾಣಿ ಕರಿಬೇವುಕಾರಾಪುಡಿಒಣಕೊಬ್ಬರಿಎಣ್ಣೆ ಇತ್ಯಾದಿ ಅವಶ್ಯವಿದೆ.   


ಏನೇನೋ ಪರಿಕರಗಳನ್ನು ಹಾಕಬೇಕಿದೆ ಎಂದು ಸುಮ್ಮನಿದ್ದರಾದೀತೇ…  ಸಂಜೆ ಹಾಲು ತರಲು ಹೋಗುವಾಗ ನನ್ನ ಪಟ್ಟಿಯೂ ಹೋಯಿತು ನೆಲಕಡಲೆ ಬಂದಿತು.


ಬಂದಂತಹ ನೆಲಕಡಲೆಯನ್ನು ಹುರಿದು ಡಬ್ಬದಲ್ಲಿ ಇಟ್ಟೂ ಆಯ್ತು,   ಇನ್ನು ಹಾಳಾಗುವ ಭಯವಿಲ್ಲ.

ಹುರಿಗಡಲೆ ಪುಡಿ ಮಾಡಿಟ್ಟದ್ದು ಇತ್ತು ಅದನ್ನೇ ಒಂದು ಚಮಚ ಹಾಕೋಣ ಒಣಕೂಬ್ಬರಿಯ ಉಸಾಬರಿ ಬೇಡ.

ಎಳ್ಳು ಹುರಿದು ಜಜ್ಜಿ ಇಟ್ಟಿದ್ದೂ ಇದೆ ಅದೂ ಒಂದು ಚಮಚ ಇರಲಿ,

ಕಾರದ ಪುಡಿ ಹಾಕುವಲ್ಲಿ ಉಪ್ಪಿನಕಾಯಿ ಮಸಾಲೆ ಹಾಕೋಣ ಅರಸಿನ ಪುಡಿಯೂ ಇರಲಿ.

ಉಪ್ಪು ಸಕ್ಕರೆ ಇದೆ.


ಒಗ್ಗರಣೆಗಿಡೋಣ ನಮ್ಮದು ತೆಂಗಿನೆಣ್ಣೆ ಸಾಸಿವೆ ಸಿಡಿಯುತ್ತಲೇ ಕರಿಬೇವು ಹಾಕತಕ್ಕದ್ದು ಮೇಲೆ ಹೇಳಿದಂತಹ ಪರಿಕರಗಳನ್ನುಒಂದೊಂದಾಗಿ ಹಾಕೋಣ ಎಲ್ಲವೂ ರುಚಿಗೆ ಸೂಕ್ತ ಪ್ರಮಾಣದಲ್ಲಿರಲಿ ಅಷ್ಟಕ್ಕೂ ನಾನು ಬಳಸಿದ್ದು ಮೂರು ಕುಡ್ತೆ ರಾಗಿ ಅವಲಕ್ಕಿ.


ಸ್ಟವ್ ಆರಿಸಿ.,  ಅವಲಕ್ಕಿ ಬೆರೆಸಿ..  ವ್ಹಾ.. ವ್ಹಾ.. ಅನ್ನುತ್ತ ಬಿಸಿ ಚಹಾ ಅಥವಾ ಕಾಫಿಯೊಂದಿಗೆ ಸವಿಯಿರಿ ಬೇಯಿಸಿದ ನೇಂದ್ರ ಬಾಳೆಹಣ್ಣು ಇತ್ತು ಕಣ್ರೀ…. ಒಳ್ಳೆಯ  ಹೊಂದಾಣಿಕೆ ಆಯ್ತು ಅನ್ನಿ.


ಉಳಿದದ್ದು ಡಬ್ಬದೊಳಗೆ ಹೋಯಿತು ಒಂದು ಚಮಚವೂ…,  ಬೇಕಾದಾಗ ಬಾಯಾಡಿಸಲಿಕ್ಕಾಯಿತು.


ಹೌದೂ ರಾಗಿ ಅವಲಕ್ಕಿ ಎಲ್ಲಿಂದ ತರೋಣ?


ಆಸಕ್ತಿ ಇರುವವರು ಮಾಮೂಲಿ ಪೇಪರ್ ಅವಲಕ್ಕಿಯಿಂದಲೇ ಸೇರುಗಟ್ಟಳೆ ಮಾಡಿಟ್ಕೊಳ್ಳಿ,    ಮಳೆಗಾಲಕ್ಕೆ ಸೂಕ್ತ ಕರುಕುರು ತಿನಿಸು.



0 comments:

Post a Comment