Pages

Ads 468x60px

Saturday, 11 July 2015

ಕ್ಯಾಬೇಜ್ ಬೋಂಡಾ






" ಕ್ಯಾಬೇಜ್ ದಿನ ಎರಡಾದ್ರೂ ಮುಗೀಲಿಲ್ಲ,  ಪಲ್ಯ ಆಯ್ತು, ಗಸಿ ಆಯ್ತು,  ಇವತ್ತು ಮುಗಿಸ್ಲೇ ಬೇಕು "

" ಬೋಂಡಾ ಮಾಡು, ಸಂಜೆಯ ಟೀ ಜೊತೆ ಚೆನ್ನಾಗಿರುತ್ತೆ "

" ಹೌದೂ,  ಮಳೆ ಬೇರೆ ಬರ್ತಿದೇ... ಎಣ್ಣೆಯಲ್ಲಿ ಕರಿದದ್ದೇ ಸೊಗಸು...  ನೀನು ಹೇಗೇ ಮಾಡಿದ್ದೂ ...?"

"ಕ್ಯಾಬೇಜು ತುಂಬ ಚಿಕ್ಕದಾಗಿ ಕತ್ತರಿಸು.. ನಿಂಗೆ ಪುರುಸೂತ್ತಿಲ್ಲಾಂದ್ರೆ ಮಗಳ ಹತ್ತಿರ ಹೇಳು " ಎಂದಳು ನನ್ತಂಗಿ ಕುಂಬ್ಳೆಯಿಂದ.

" ಹೂಂ ಆಯ್ತು,  ಅವಳು ಮಾಡಿದ್ಳು.."

" ಕಡ್ಲೇಹುಡಿ,  ಅಕ್ಕೀಹುಡಿ, ಮೆಣಸಿನಹುಡಿ,  ಉಪ್ಪು   ಎಲ್ಲಾ ಹಾಕಿ ಕಲಸಿ ಎಣ್ಣೆಗೆ ಬಿಡು "

" ಆಯ್ತು,  ಮಾಡೋದೇ,  ಅ ಮೇಲೆ ಫೋಟೋ ಕಳಿಸ್ತೇನೆ..."  ಅಂದು ಫೋನ್ ಕೆಳಗಿಟ್ಟಾಯ್ತು.

ಏನೇ ಮಾಡುವುದಿದ್ರೂ ಒಂದು ಅಳತೆ ಬೇಡ್ವೇ...

3 ಕಪ್ ಕ್ಯಾಬೇಜ್ ತುರಿ,  ಮಿಕ್ಸಿಯಲ್ಲಿ ತಿರುಗಿಸಿದ್ರೂ ಆದೀತು.
ಒಂದು ಕಪ್ ಕಡ್ಲೇ ಹಿಟ್ಟು.
ಅರ್ಧ ಕಪ್ ಅಕ್ಕೀ ಹಿಟ್ಟು.
ಮೆಣಸಿನಹುಡಿ - ಒಂದು ಚಮಚಾ.
ಮಸಾಲಾಹುಡಿ - 2 ಚಮಚಾ.
ರುಚಿಗೆ ಉಪ್ಪು.
ಬೇಕಿದ್ದರೆ ಒಂದು ನೀರುಳ್ಳಿ, ಹಸಿಮೆಣಸು ಹಾಕಬಹುದು.

ಎಲ್ಲವನ್ನೂ ಒಂದು ತಪಲೆಗೆ ಸುರುವಿ ಕಲಸಿಕೊಳ್ಳಿ,  ನೀರು ಹಾಕೋದೇನೂ ಬೇಡ,  ಉಂಡೆ ಕಟ್ಟುವ ಹದಕ್ಕೆ ಬಂದರಾಯಿತು.

ಬಾಣಲೆಯಲ್ಲಿ ಎಣ್ಣೆ ಕಾಯಲಿ,  ಲಿಂಬೇ ಗಾತ್ರದ ಹಿಟ್ಟನ್ನು ಅಂಗೈಯಲ್ಲಿ ಚಪ್ಪಟೆಯಾಗಿಸಿ ಎಣ್ಣೆಗಿಳಿಸಿ.  ಎಣ್ಣೆಯಲ್ಲಿ ಹಿಡಿಸುವಷ್ಟು ಒಂದೇ ಬಾರಿ ಹಾಕಬಹುದು.   ಗರಿಗರಿಯಾಗಿ ಹೊಂಬಣ್ಣ ಬಂದಾಗ ತೂತಿನ ಸಟ್ಟುಗದಲ್ಲಿ ತೆಗೆದು ಜಿಡ್ಡು ಬಸಿಯಲು ಜಾಲರಿ ತಟ್ಟೆಯಲ್ಲಿ ಇರಿಸಿ,  ಆರಿದ ನಂತರ ಬಿಸಿ ಬಿಸಿ ಚಹಾದೊಂದಿಗೆ ಸವಿಯಿರಿ.

ಇದೇ ಥರ ನೀರುಳ್ಳಿ ಬೋಂಡಾ ಅಥವಾ ಪಕೋಡಾ ಮಾಡಬಹುದು.




0 comments:

Post a Comment