Pages

Ads 468x60px

Saturday 10 October 2020

ಮಾಂಬಳ ಗೊಜ್ಜು

 





ಮಧು ಊರಿಗೆ ಬಂದಿದ್ದಾಗ ಹೀಗೆ ಬಂದು ಹಾಗೆ ಹೋಗಲಿಲ್ಲ ಲಾಕ್ ಡೌನ್ ಅಂತ ಮನೆಗೆ ಬಾರದೇ ವರ್ಷವಾದಂತೆ ಆಗಿತ್ತೂ ಅನ್ನಿ.   ಇದ್ದಷ್ಟು ದಿನವೂ ನಮ್ಮ ಅಡುಗೆಮನೆ ಗಲಗಲ ಅಂತಿತ್ತು ಸಂಜೆಯಾಗುತ್ತಲೂ ಹೊರಗೆ ಸುತ್ತಾಟ ಒಂದು ಸಂಜೆ ಕಾರು ಮಂಜೇಶ್ವರದ ಕಡಲ ಕಿನಾರೆ ತನಕ ಹೋಯಿತು.   ನಾನು ಹೋಗಲಿಲ್ಲ ಕಡಲು ನನಗೆ ಹೊಸತಲ್ಲ ಬಾಲ್ಯದ ದಿನಗಳ ಆಟೋಟಗಳನ್ನು ಕಾಸರಗೋಡಿನ ಕಡಲ ಕಿನಾರೆಯಲ್ಲೇ ಕಳೆದವರು ನಾವಾಗಿರುವಾಗ  ಮಳೆಗಾಲದಲ್ಲಿ ಸಮುದ್ರ ವೈಭವ ಹೇಗಿದ್ದೀತು ಎಂದು ತಿಳಿಯದವರೂ ನಾವಲ್ಲ ಇರಲಿ.


ಮಧು ವಾಪಸ್ ಬರುವಾಗ ಹಲಸಿನ ಹಪ್ಪಳಗೆಣಸಿನ ಹಪ್ಪಳ ಮಾವಿನಹಣ್ಣಿನ ಮಾಂಬಳಅಪ್ಪೆಮಿಡಿ ಉಪ್ಪಿನಕಾಯಿ ಅಂಬಟೆ ಕಳಲೆ ಉಪ್ಪಿನಕಾಯಿಗಳೂ ಬಂದುವು.   ಇದೇನು ಅತ್ತೆ ಮನೆಯಿಂದ ಸಂಪಾದಿಸಿದ್ದೋ ಹೇಗೆ? " ಎಂದು ಹುಬ್ಬೇರಿಸುವಂತಾಯ್ತು.


ಏನೂ ಅಲ್ಲ ಮಂಜೇಶ್ವರದ ಅಂಗಡಿಯೊಂದರಲ್ಲಿ ಇಷ್ಟೂ ಸಿಕ್ಕಿತು.."

ಹೌದ ನಾನೇ ನಿಂಗೆ ಮಾಡಿ ಕೊಡ್ಬೇಕಾಗಿತ್ತು... ಅಂಬಟೆ ಮಿಡಿ ಕೊಯ್ದು ಕೊಡಲಿಕ್ಕೇ  ಬಾರಿ ಯಾರೂ ಇಲ್ಲದೆ ಹೋಯಿತು..  ಹಾಳಾದ್ದು ಲಾಕ್ ಡೌನ್ ಕಾಲ..."

ಈಗ ಕಾಲ ಬದಲಾಗಿದೆ ನಾನು ತಂದು ಕೊಟ್ರೆ ಏನಾಯ್ತೀಗ? "


ಮಾವಿನ ಹಣ್ಣಿನ ಮಾಂಬಳದ ರುಚಿ ನೋಡಿದ್ದಾಯ್ತು.   ಎಲ್ಲೋ ಕಸಿ ಮಾವಿನ ಹಣ್ಣಿಂದು..  ಹುಳಿಯ ಸಂತಾನವಿಲ್ಲಪರಿಮಳವೂ ಇಲ್ಲ.. "  ಗೊಣಗಿದರು ನಮ್ಮ ಮನೆ ಯಜಮಾನ್ರು.


"ಚಿಂತಿಲ್ಲ ತಂದಿದ್ದನ್ನು ಹಾಳು ಮಾಡುವುದಕ್ಕಿಲ್ಲ ನಾಳೆ ಮಾಂಬಳ ಗೊಜ್ಜು ಮಾಡಿದ್ರಾದೀತು. "


ಈಗ ಬೇಡಮ್ಮ ಹಾಗೇ ತಿಂದು ಹೌಸ್ ಫುಲ್ ಆಯ್ತು.. " ಅನ್ನುವುದೇ ಮಗಳು!


ಎಲ್ಲರೂ ಬೆಂಗಳೂರಿಗೆ ತೆರಳಿದ ನಂತರವೇ ನನ್ನ ಮಾಂಬಳ ಗೊಜ್ಜು ಬಂದಿದೆ.


ಅಗತ್ಯವಿದ್ದಷ್ಟು ಮಾಂಬಳ ಕತ್ತರಿಸಿ.

ನೀರಿನಲ್ಲಿ ನನೆಸಿ.

ನಮ್ಮವರು ಅಂದಂತೆ ಹುಳಿ ರುಚಿಗಾಗಿ ನನ್ನ ಬಳಿ ಇದ್ದಂತಹ ಮಾಂಬಳದ ಸ್ಟಾಕ್ ಹೊರ ಬಂತು ಅದೂ ವಿಪರೀತ ಹುಳಿ ಹಾಗೂ ಮಾವಿನ ಸೊನೆ ಪರಿಮಳ ಇರುವಂತಹ ನಮ್ಮದೇ ತೋಟದ ಮಾವಿನ ಹಣ್ಣುಗಳಿಂದ ತಯಾರಿಸಿದ್ದು.

ಮಾಂಬಳ ಮಾಡುವ ವಿಧಾನ  ಹಿಂದೆಯೇ ಬರೆದಿದ್ದೇನೆ ಆಸಕ್ತರು ಹುಡುಕಿ ಓದಿರಿ.


ಲಿಂಬೆ ಗಾತ್ರದಷ್ಟು ನನ್ನ ಹಳೆಯ ಮಾಂಬಳ ಸೇರಿಕೊಂಡಿತು.

ಹುಳಿ ರುಚಿಗಾಗಿ ಹುಣಸೆ ಹುಳಿಯೂ ಆದೀತು.

 

ರುಚಿಗೆ ತಕ್ಕಷ್ಟು ಉಪ್ಪು.

ಸಿಹಿಗೆ ಸಾಕಷ್ಟು ಬೆಲ್ಲ ಇರಬೇಕು.

ನೆನೆದ ಮಾಂಬಳವನ್ನು ಕೈಯಲ್ಲಿ ಗಿವುಚಿ ಉಪ್ಪು ಬೆಲ್ಲ ಹಾಗೂ ಅವಶ್ಯಕತೆಗೆ ತಕ್ಕಂತೆ ನೀರು ಎರೆದು ಕುದಿಸಿ.

ಒಂದು ಹಸಿ ಮೆಣಸು ಸಿಗಿದು ಹಾಕುವುದು.

ತುಪ್ಪದಲ್ಲಿ ಕರಿಬೇವಿನ ಒಗ್ಗರಣೆ ಕೊಡುವಲ್ಲಿಗೆ ಗೊಜ್ಜು ಆಯಿತು.


ಶುಂಠಿಯನ್ನೂ ಹಾಕಿರುತ್ತಿದ್ದರೆ ಮಾಂಬಳದ ಪುಳಿಂಜಿ ಎನ್ನಬಹುದಾಗಿತ್ತು.

ಪುಳಿಯೋಗರೆ ಪ್ರಿಯರು ಮಾಂಬಳವನ್ನೂ ಬಳಸಿಕೊಂಡು ಪುಳಿಯೋಗರೆ ತಯಾರಿಸಿ.

ಚೆನ್ನಾಗಿರುತ್ತದೆ ಅಂದ್ಬಿಟ್ಟು ಮಾಂಬಳವನ್ನು  ಹಾಗೇನೆ ಅತಿಯಾಗಿ ತಿನ್ನುವಂತಿಲ್ಲ ಅತೀ ಉಷ್ಣವಾಗಿ ಜಠರ ಸಂಬಂಧೀ ಬೇನೆ ಬಂದೀತು ನೀರು ಸಾಕಷ್ಟು ಕುಡಿದರಾಯಿತು.


ಊಟದೊಂದಿಗೆ ಉಪ್ಪಿನಕಾಯಿಯಂತೆ ನಂಜಿಕೊಳ್ಳಲು ಸೂಕ್ತ ಪದಾರ್ಥ ಇದು ಚಪಾತಿಗೂ ಆದೀತು ಮಾಂಬಳ ಇದ್ದರೆ ದಿನವೂ ಮಾವಿನ ಹಣ್ಣಿನ ಕಾಲದಂತೆ ಗೊಜ್ಜು ಸಾರುಸಾಸಮೆ ಸವಿಯುವ ಯೋಗ.





0 comments:

Post a Comment