Pages

Ads 468x60px

Thursday 23 September 2021

ಜೋಳದ ಪಲ್ಯ


ತರಕಾರಿಗಳೊಂದಿಗೆ ಜೋಳವೂ ಬಂದಿದೆ.  

ಜೋಳ ಯಾಕೆ ತಂದಿದ್ದೂ? "

ಅಂಗಡಿಯಲ್ಲಿತ್ತುತಿಂದು ನೋಡುವ.."

ತಿನ್ನಲಿಕ್ಕೆ ಕೆಂಡದಲ್ಲಿ ಸುಡಬೇಕಲ್ಲವೇ..  ಹಸಿ ಹಸಿ ಕಾಳು ಹೇಗೆ ತಿನ್ನುವುದು? "

ಸುಡಲಿಕ್ಕೆ ಕೆಂಡದ ಒಲೆ ಎಲ್ಲಿದೆ ಜೋಳದ ಕಾಳುಗಳನ್ನು ಬಿಡಿಸಿ ಬೇಯಿಸಿ ನೋಡಿದ್ರಾದೀತು.

ಕಾಳುಗಳನ್ನು ಬಿಡಿಸುವುದು ಹೇಗೆ?

ಕತ್ತಿಯಲ್ಲಿ ಬುಡದಿಂದ ಕತ್ತರಿಸಿ ಸಿಪ್ಪೆಗಳನ್ನೆಲ್ಲ ಬಿಡಿಸಿದಾಗ ಕಸವೇನೋ ಆಯ್ತು ಪರವಾಗಿಲ್ಲ ಅಡಿಕೆ ಮರದ ಬುಡಕ್ಕೆ ಗೊಬ್ಬರ ಸಿಕ್ಕಿತು.

ನಂತರ ಒಂದೊಂದೇ ಕಾಳು ಬಿಡಿಸಿಒಂದು ಪದರ ಬಿಡಿಸಿದಾಗ ಕಾಳುಗಳ ಗುಟ್ಟು ತಿಳಿಯಿತು ಉದ್ದನೆಯ ಒಂದು ಸಾಲಿನ ಕಾಳುಗಳನ್ನು ಬಿಡಿಸಿದ ನಂತರ ಉಳಿದ ಕಾಳುಗಳು ಸುಲಲಿತವಾಗಿ ತಟ್ಟೆಗೆ ಬಿದ್ದುವು.


ಕುದಿಯುತ್ತಿರುವ ನೀರಿಗೆ ಅವಶ್ಯವಿದ್ದಂತೆ ಜೋಳದ ಕಾಳುಗಳನ್ನು ಹಾಕಿ ಐದು ನಿಮಿಷ ಕುದಿಸಲಾಯಿತು ನಂತರ ನೀರು ಬಸಿದು ತಟ್ಟೆಯಲ್ಲಿಟ್ಟಾಗ ಜೋಳದ ಕಾಳುಗಳು ಉದರದೊಳಗೆ...

ಸಂಜೆ ಅವಲಕ್ಕಿ ಉಸುಲಿಯ ಹಾಗೆ ಜೋಳದ ಉಸುಲಿ ಮಾಡೋಣ ಅಂತ.... "  

ಹೇಗಾದ್ರೂ ಸರಿತಿಂದು ಮುಗಿಯಿತಲ್ಲ.. “


ಅಂತೂ ಜೋಳ ತಿನ್ನುವ ಉಪಾಯ ಸರಳವಾಗಿ ತಿಳಿಯಿತು.

 ಅಳಿಯ ಬಂದಿದ್ದಾಗ ಜೋಳಗಳನ್ನೆಲ್ಲ ಬಿಡಿಸಿ ಡಬ್ಬದಲ್ಲಿ ತುಂಬಿಸಿ ಕೊಟ್ಟ.   ಅಂತೂ ದಿನವೂ ಜೋಳದ ತಿನಿಸು


ಜೋಳದ ಕಾಳುಗಳು ಡಬ್ಬ ತುಂಬ ಇರುವಾಗ ಅಡುಗೆಗೆ ಬಳಸೋಣ.

ತೊಂಡೆಕಾಯಿ ಇದೆ ತೊಂಡೆಕಾಯಿ ಪಲ್ಯಕ್ಕೆ ಜೋಳದ ಹೊಂದಾಣಿಕೆ ಹೇಗಿದ್ದೀತು ನೋಡಿಯೇ ಬಿಡೋಣ.


10ರಿಂದ 15 ತೊಂಡೆಕಾಯಿಗಳನ್ನು ತೊಳೆದು ಪಲ್ಯಕ್ಕೆ ಸೂಕ್ತವಾಗುವಂತೆ ಹೆಚ್ಚುವುದು ಅತಿ ಕಡಿಮೆ ನೀರಿನಲ್ಲಿ ಒಂದು ಸೀಟಿ ಹಾಕಿಸಿ ಕೊಡಲೇ ಒತ್ತಡ ಇಳಿಸಿಕುಕ್ಕರ್ ಮುಚ್ಚಳ ತೆರೆಯಿರಿಬೆಂದಿರುತ್ತದೆ.

ಒಂದು ಯಾ ಎರಡು ಹಿಡಿ ಜೋಳದ ಕಾಳುಗಳನ್ನು ಮುಳುಗುವಷ್ಟು ನೀರೆರೆದು 5 ನಿಮಿಷ ಕುದಿಸಿ ಬಸಿಯಿರಿ.

ತರಕಾರಿ ಬೇಯಿಸುವಾಗಲೇ ಉಪ್ಪು ಹಾಕುವುದು ಉತ್ತಮ ಸಾಕಾಗದಿದ್ದರೆ ಒಗ್ಗರಣೆಯ ಸಮಯದಲ್ಲಿ ಹಾಕಬಹುದು.


ಬಾಣಲೆಗೆ ಒಗ್ಗರಣೆ ಸಾಮಗ್ರಿಗಳನ್ನು ಸುರುವಿಸಾಸಿವೆ ಚಟಪಟ ಎಂದಾಗ ಕರಿಬೇವು ಉದುರಿಸಿಬೆಂದಂತಹ ತೊಂಡೆ ಹಾಗೂ ಜೋಳ ಹಾಕಿ,   ರುಚಿಯ ಉಪ್ಪುಚಿಟಿಕೆ ಅರಸಿಣ ಬೇಕಿದ್ದರೆ ಅತ್ಯಲ್ಪ ಮೆಣಸಿನಹುಡಿಕಾಯಿತುರಿ ಎಲ್ಲವನ್ನೂ ಬೆರೆಸಿ ಸ್ವಲ್ಪ ಹೊತ್ತು ಮಂದಾಗ್ನಿಯಲ್ಲಿ ಮುಚ್ಚಿಟ್ಟು ಸ್ಟವ್ ನಂದಿಸಿ ಪಲ್ಯದಲ್ಲಿ ನೀರಿನಂಶ ಇರಬಾರದು ಮಾಡಿದ ಪಲ್ಯ ಒಂದೇ ಹೊತ್ತಿನಲ್ಲಿ ಮುಗಿದೇ ಹೋಯ್ತು.


ನಾರುಯುಕ್ತವಾದ ಜೋಳ ಎಲ್ಲ ವಯೋಮಾನದವರಿಗೆ ಉತ್ತಮ ಆಹಾರ ಮುಂಜಾನೆಯಿಂದ ರಾತ್ರಿವರೆಗೆ ಅಕ್ಕಿಯಿಂದಲೇ ಮಾಡಿದ ಆಹಾರ ಪದಾರ್ಥ ತಿನ್ನುವವರು ಜೋಳವನ್ನೂ ತಿನ್ನಿ.


ಸಿರಿಧಾನ್ಯಗಳಲ್ಲಿ ಒಂದಾದ ಜೋಳ ಭಾರತದಲ್ಲಿ ಉತ್ತರ ಕರ್ನಾಟಕದ ಬೆಳೆ ಅಲ್ಲಿ ಜೋಳದ ರೊಟ್ಟಿ ದೈನಂದಿನ ಆಹಾರ.

ಜೋಳ ತಿಂದು ತೋಳನಾಗು " ನುಡಿಮುತ್ತು ಕೂಡಾ ಇದೆ ಅಂದರೆ ಬಲಶಾಲಿಯಾಗು ಎಂದರ್ಥ.


ದಿನದ ಚಪಾತಿ ಹಿಟ್ಟನ್ನು ಜೋಳದ ಹಿಟ್ಟನ್ನೂ ಸೇರಿಸಿ ಮಾಡುವ ರೂಢಿ ನನ್ನದು.  ವಿಧಾನವನ್ನು  ಮೊದಲೇ ಬರೆದಿರುತ್ತೇನೆ,   ಆಸಕ್ತರು ಹುಡುಕಿ ಓದಿರಿ. 




0 comments:

Post a Comment