Pages

Ads 468x60px

Monday, 13 December 2021

ಕರಿ ಕೆಸು - ಗಸಿ



ವಿಪರೀತ ಮಳೆಯಾದುದರಿಂದಲೋ ಏನೋ ನನ್ನ ಕರಿಕೆಸು ಅಗಲವಾಗಿ ಹರಡಿ ಬೆಳೆದಿದೆ.   ಪತ್ರೊಡೆ ಮಾಡಿ ತಿನ್ನಬೇಕಾದ್ರೂ ಮನೆಯೊಳಗೆ ಸಾಕಷ್ಟು ಜನರಿರಬೇಕು.  ಕೆಸುವಿನ ಒಂದು ಎಲೆ ದಂಟು ಸಹಿತವಾಗಿ ಚೂರಿಯಲ್ಲಿ ಕತ್ತರಿಸಲ್ಪಟ್ಟು ಅಡುಗೆಮನೆಗೆಬಂದಿತು.  


ಎಲೆ ಚಿಕ್ಕದಾಗಿ ಕತ್ತರಿಸಲ್ಪಟ್ಟಿತು.

ದಂಟು ನಾರು ಬಿಡಿಸಲ್ಪಟ್ಟು ಹೋಳುಗಳಾಗಿ ತಪಲೆ ತುಂಬಿತು.

ಅರ್ಧ ಪಾವು ಅಲಸಂದೆಕಾಳು ಬಿಸಿ ನೀರಿನಲ್ಲಿ ನೆನೆದು ಹಿಗ್ಗುತ್ತಲಿದೆ.

ಮೊದಲಿಗೆ ಅಲಸಂದೆಕಾಳು ಬೇಯಲಿ,  ಕುಕ್ಕರಿನಲ್ಲಿ 3 ಸೀಟಿ ಸಾಕು.

ನಂತರ ಅದೇ ಕುಕ್ಕರಿನಲ್ಲಿ ಕೆಸುವಿನೆಲೆ ದಂಟಿನ ಹೋಳುಗಳು ಬೇಯಲಿ.  ಉಪ್ಪು,  ಚಿಟಿಕೆ ಅರಸಿಣ ಹಾಗೂ ಹುಣಸೆ ರಸ ಬೇಯುವಾಗಲೇ ಹಾಕಿರಿ.

ಖಾರದ ಬಾಬ್ತು ಎರಡು ಹಸಿಮೆಣಸು ಬೇಕಿದ್ದರೆ,  ಸಿಗಿದು ಹಾಕಿರಿ.

ಒಂದು ಸೀಟಿ ಹಾಕಿದಾಗ ಬೆಂದಿತೆಂದು ತಿಳಿಯಿರಿ.


ಈ ಹೊತ್ತಿನಲ್ಲಿ ಒಂದು ದೊಡ್ಡ ನೀರುಳ್ಳಿ ಚಿಕ್ಕದಾಗಿ ಹೆಚ್ಚಲ್ಪಟ್ಟಿತು.   ಒಂದು ಬೆಳ್ಳುಳ್ಳಿ ಗೆಡ್ಡೆಯೂ ಬಿಡಿಸಲ್ಪಟ್ಟಿತು.

ಒಂದು ತುಂಡು ಶುಂಠಿ ಚೂರುಗಳಾಯಿತು.

ತೋಟದಿಂದ ಕರಿಬೇವು ಬಂದಿದೆ.

ಇನ್ನೇನಾಗಬೇಕು?

ಬಾಣಲೆಯಲ್ಲಿ ಒಗ್ಗರಣೆಗಿಟ್ಟು, ಸಾಸಿವೆಯೊಂದಿಗೆ ಬೆಳ್ಳುಳ್ಳಿ ಕೆಂಪಗಾಗಲಿ,

ತದನಂತರ ಶುಂಠಿ, ನೀರುಳ್ಳಿ ಹಾಕಿರಿ, ನೀರುಳ್ಳಿ ಬಾಡಲಿ.

ಕುಕ್ಕರ್ ಸಾಮಗ್ರಿಗಳನ್ನು ಬಾಣಲೆಗೆ ಸುರಿಯಿರಿ.

ರುಚಿಗೆ ಏನೇನು ಕಡಿಮೆಯಾಗಿದೆಯೆಂದು ನೋಡಿ,  ಅಗತ್ಯವಿದ್ದರೆ ಉಪ್ಪು ಹಾಕುವುದು.  ಸಿಹಿ ಇಷ್ಟಪಡುವವರಿಗೆ ಬೆಲ್ಲವನ್ನೂಹಾಕಿದರಾಯಿತು.  ಅಲಸಂದೆಕಾಳು, ಸೊಪ್ಪು, ದಂಟಿನ ಹೋಳುಗಳು ತುಂಬಿದ ಈ ಪದಾರ್ಥ ದಪ್ಪ ಗಸಿಯಂತೆ ಎದ್ದು ಬಂದಿತು.




0 comments:

Post a Comment