Pages

Ads 468x60px

Saturday 22 January 2022

ಮನ ಗೆದ್ದ ಮನೆಗೆಲಸ



ಮನೆಕೆಲಸವೆಂದರೆ ಮೊದಲನೆಯದು ಅಡುಗೆ,

ನಂತರ ಒಪ್ಪಓರಣ,

ನಂತರದ್ದು ಪಾತ್ರೆ ತೊಳೆ

ಬಟ್ಟೆ ಒಗೆ ಒಣ ಹಾಕು

ಒಂದೇ ಎರಡೇ..  ಮುಗಿಯದ ಕೆಲಸ,

ಅದರೊಂದಿಗೆ ನಮ್ಮ ವಿವಿಧ ಹವ್ಯಾಸ,

ಟೀವಿ ನೋಡು

ಮೊಬೈಲ್ ಹಿಡಿ,

ಸುಡೊಕು ಆಡು.


ಸುಖವಾಗಿಯೇ ಇದ್ದರೂ ಕೊರೋನಾ ಪಿಡುಗಿನಿಂದಾಗಿ ಒಂದು ಥರವಾದ ಅಸ್ಪೃಶ್ಯತೆ ನಮ್ಮನ್ನು ಆವರಿಸಿದೆ.

ಯಾರನ್ನೂ ಮನೆಗೆ ಬನ್ನಿ ಅನ್ನುವುದಕ್ಕಿಲ್ಲ,

ನಾವು ಹೋಗುವುದಕ್ಕೂ ಇಲ್ಲ.

ಮನೆಕೆಲಸಕ್ಕೆ ಯಾರನ್ನೂ ಕರೆಯುವಂತಿಲ್ಲ.


ಹೀಗೇ ದಿನ ಕಳೆಯುತ್ತಿದ್ದಂತೆ ಒಂದು ದಿನ ನಮ್ಮ ಮನೆ ಯಜಮಾನರು ದಿನಾ ಪಾತ್ರೆ ತೊಳಿತೀಯಲ್ಲ ಎಷ್ಟು ಹೊತ್ತು ಬೇಕಾಗುತ್ತದೆ ಹೇಳು? "

ನಾನು ಯೋಚಿಸ ತೊಡಗಿದೆ.   "ಬೆಳಗ್ಗೆ ಒಂದಿಪ್ಪತ್ತು ನಿಮಿಷ ಮಧ್ಯಾಹ್ನ ಹತ್ತು ನಿಮಿಷ ರಾತ್ರಿ ಐದು ನಿಮಿಷ...   ಉಳಿದದ್ದು ಅಲ್ಲಲ್ಲಿ ಇರ್ತದೆ.   ಅದ್ಯಾಕೆ ಹೀಗೆ ಕೇಳ್ತೀರಾ? " 


ಏನಿಲ್ಲ ಒಂದು ಡಿಶ್ ವಾಶರ್ ತೆಗೆಯೋಣಾಂತ... "  ಅನ್ನುವುದೇ ನನ್ನ ಪತಿ!


ಅಡ್ಡಿಯಿಲ್ಲ ಆದ್ರೆ ಇಲ್ಲಿ ಯಾರ ಮನೇಲೂ ಇಲ್ವಲ್ಲ...   ಹೇಗೋ ಏನೋ.."

" ಚಿಂತೆ ನೀ ಮಾಡಬೇಡ ಹೇಳಿ ಕೊಡಲಿಕ್ಕೆ ನಾನಿದೀನಲ್ಲ ಬೇಕಿದ್ದರೆ ಯೂಟ್ಯೂಬು ನೋಡಿಕೋ.." ಎಂದರು ಇಂಜಿನಿಯರ್ ಮಹಾಶಯರು.


ಅಂದ ಹಾಗೆ ನಮ್ಮ ಹಿರಣ್ಯದ ಹಳ್ಳಿ ಮನೆಗೆ ಮೊದಲಾಗಿ ಟೀವಿ ಬಂದಿದ್ದೇ ಬಂದಿದ್ದು... ಅದನ್ನು ಒಂದು ಬ್ಲಾಗ್ ಬರಹದಲ್ಲಿ ವರ್ಣಿಸಿ ಬರೆದೂ ಇದ್ದೇನೆ.

ರೆಫ್ರಿಜರೇಟರ್ ಕೂಡಾ ಹಾಗೇನೇ ಇಲ್ಲೇ ಮೊದಲು.

ಮೈಕ್ರೊ ವೇವ್ ಇಂಡಕ್ಷನ್ ಕುಕಿಂಗ್ ವಾಶಿಂಗ್ ಮೆಶೀನ್ಯಾವುದುಂಟು ಯಾವುದಿಲ್ಲ ಕೇಳಿ.

ಇಂಟರ್ನೆಟ್ ಯುಗ ಆರಂಭ ಆಯ್ತೇ ಮಕ್ಕಳಿಗಾಗಿ ಡೆಸ್ಕ್ ಟಾಪ್ ಬಂದಿತ್ತು ನಂತರ ಕೇಳೋದೇ ಬೇಡಲ್ಯಾಪ್ ಟಾಪ್ ಪ್ಯಾಡ್ಐಫೋನ್...  ಎಲ್ಲರೂ ಕಂಪ್ಯೂಟರ್ ಪರಿಣತರು ನಾನೂ ಸೇರಿಹಹ...


ಬಚ್ಚಲುಮನೆಗೆ ಸೋಲಾರ್  ಬಂದು ವರ್ಷಗಳೇ ಆಯಿತು.

ಈಗ ಮನೆಗೆ ಸೋಲಾರ್ ವಿದ್ಯುತ್ ಬಂದಿದೆ ಮನೆ ತುಂಬ ಝಗಝಗ ಬೆಳಕು.


 ಒಂದು ಶುಭಮುಹೂರ್ತದಲ್ಲಿ ಡಿಶ್ ವಾಶಿಂಗ್ ಮೆಶೀನ್ ಆಗಮಿಸಿತು ಕ್ರಿಸ್ಮಸ್ ರಜಾ ಸಂಭ್ರಮದಲ್ಲಿ ಬೆಂಗಳೂರಿನಿಂದ ಮಕ್ಕಳೂ ಬಂದಿದ್ದ ಸಮಯ.

ಅತ್ತೆಯ ಕಷ್ಟ ತೊಲಗಿತು ಎಂದು ಸೊಸೆ ಸಂಭ್ರಮ ಪಟ್ಟಳು.

ಮೆಶಿನ್ ಒಳಗೆ ಪಾತ್ರೆ ಪರಡಿಗಳನ್ನು ಜೋಡಿಸಲು ಅಳಿಯನ ನೆರವು.


ಅಂತೂ ಪಾತ್ರೆ ತೊಳೆಯುವ ಉಪಕರಣ ನನ್ನ ಮನ ಗೆದ್ದಿತು.









0 comments:

Post a Comment