Pages

Ads 468x60px

Monday 10 January 2022

ಸಿಹಿಯರಳು

 ಕ್ರಿಸ್ಮಸ್ ರಜಾ ದಿನಗಳೂ,  ಹೊಸ ವರ್ಷಾಚರಣೆಯೂ ಕಳೆದು  ನಮ್ಮ ಮಕ್ಕಳ ಪಟಾಲಂ ಬೆಂಗಳೂರಿಗೆ ಹಿಂತಿರುಗಿಯೂ ಆಯ್ತು.   ಎಲ್ಲರೂ ಸೇರಿದ ಸಂಭ್ರಮದಲ್ಲಿ ನಾವಿರಬೇಕಾದರೆ ನನ್ನ ಮೊಬೈಲ್ ಆ್ಯಪ್ ಗಳು ಮೂಲೆ ಸೇರದಿದ್ದೀತೇ..





ಇದರೆಡೆಯಲ್ಲಿ ಹಿರಿಯರ ಶ್ರಾದ್ಧವೂ ಒಂದು ದಿನ ಬಂದಿತ್ತು ಶ್ರಾದ್ಧದ ಊಟಕ್ಕೆ ತರಹೇವಾರಿ ಭಕ್ಷ್ಯಗಳು ಪಾಯಸಗಳುಚಿತ್ರಾನ್ನಮೆಣಸ್ಕಾಯಿ ಮೊದಲ್ಗೊಂಡು ಪಲ್ಯಗಳುಹಪ್ಪಳಗಳುಮೇಲೋಗರಗಳೂ ಸೇರಿದ ಔತಣ ಕೂಟ ಅಡುಗೆ ಎಷ್ಟೇ ತಿಳಿದಿದ್ದರೂ ಐವತ್ತು ಜನ ಸೇರಿದ ಸಮಾರಂಭದಲ್ಲಿ ನಮ್ಮ ಮಹಿಳೆಯರು ಸೆರಗು ಕಟ್ಟಿ ಅಡುಗೆ ಮಾಡುವುದಕ್ಕಿಲ್ಲ ಏನಿದ್ದರೂ ಎಲ್ಲವನ್ನೂ ಸುಧರಿಸುವ ಮೇಲ್ತನಿಖೆ ಮಾತ್ರ.  


ಶ್ರಾದ್ಧದ ಅಡುಗೆ ಸಾಮಾನು ಪಟ್ಟಿ ಮಾಡುವಾಗ ಎಲ್ಲವನ್ನೂ ತುಸು ಜಾಸ್ತಿಯೇ ಬರೆದಿದ್ದೆ.   ಅದರಲ್ಲಿ ಅರಳಿನ ಹುಡಿ ತುಂಬ ಉಳಿದಿದೆ ಅರಳು ಸುಕ್ಕಿನುಂಡೆ ಶ್ರಾದ್ಧದ ಕಜ್ಜಾಯಗಳಲ್ಲಿ ಒಂದು.   ಹತ್ತಿಯಂತೆ ಹಗುರಾದ ಅರಳು ನನ್ನ ಕಿಲೋ ಲೆಕ್ಕಾಚಾರದಲ್ಲಿ ವಿಪರೀತ ಆಗಿ ಬಿಟ್ಟಿದೆ.   ನೂರು ಗ್ರಾಂ ತಂದರೂ ಸಾಕಾಗುತಿತ್ತು.


 ಸಂಜೆ ನಾವಿಬ್ಬರೇ ಇರುವಾಗ ಚಹಾ ಕುಡಿಯುವ ಹೊತ್ತಿಗೆ ತಿಂಡಿಗಳು ಮುಗಿದಿವೆ ಹೋಳಿಗೆಯೂ ಖಾಲಿ...

ಅರಳಿನಿಂದ ಏನಾದರೂ ಮಾಡೋಣ.


ತೆಂಗಿನಕಾಯಿ ತುರಿಯಿರಿ,

ಬೆಲ್ಲ ಪುಡಿ ಮಾಡ್ಕೊಳ್ಳಿ,

ಒಂದು ಚಮಚ ಎಳ್ಳು ಹುರಿದುಗುದ್ದಿರಿ.


ಬಾಣಲೆಗೆ ತೆಂಗಿನತುರಿ ಹಾಗೂ ಬೆಲ್ಲ ಹಾಕಿ ಬಿಸಿ ಮಾಡ್ಕೊಳ್ಳಿ ತೆಂಗಿನ ತುರಿಯ ತೇವಾಂಶದಲ್ಲಿ ಬೆಲ್ಲ ಸೇರಿದರೆ ಸಾಕು.

ಹುಡಿ ಮಾಡಿದ ಎಳ್ಳು ಸೇರಲಿ.

ಚಿಟಿಕೆ ಉಪ್ಪು ಬೀಳಲಿ.

ಮೂರು ತೊಟ್ಟು ತುಪ್ಪ ಇರಲಿ.

ತೆಂಗಿನ ತುರಿ ಒಂದು ಹಿಡಿ ಆಗುವಷ್ಟು ಹಾಕಿದ್ದು ಕಣ್ರೀ.,  ಬೆಲ್ಲವೂ ಅಷ್ಟೇ.

ನಾಲ್ಕು ಹಿಡಿ ಅರಳಿನ ಹುಡಿ ಬೆರೆಸಿದಾಗ ನನ್ನ ದಿಢೀರ್ ಅರಳು ಕಲಸು ಸಿದ್ಧವಾಗಿದೆ

ಚಹಾದ ಜೊತೆ ತಿಂದೆವು ಪಾಸ್ ಮಾರ್ಕು ಸಿಕ್ಕಿತು.


ಚಿತ್ರದಲ್ಲಿರುವ ಅರಳುಂಡೆ ನಮ್ಮ ಅಡುಗೆ ಗಣಪಣ್ಣನ ನಳಪಾಕದಲ್ಲಿ ತಯಾರಾದದ್ದು.  

ಮೇಲೆ ತಿಳಿಸಿದ ಸಾಮಗ್ರಿಗಳನ್ನು ಬೆಲ್ಲದ ಪಾಕ ಎರೆದು ಉಂಡೆ ಕಟ್ಟಿದರಾಯ್ತು ಅಷ್ಟೇ..  ಬಿಸಿ ಇರುವಾಗಲೇ ಉಂಡೆ ಕಟ್ಟುವ ಚಾಕಚಕ್ಯತೆ ಇದ್ದರಾಯಿತು.






0 comments:

Post a Comment