ಅರ್ಧ ದಾರೆಹುಳಿ
ಕೆಸುವಿನೆಲೆ ಐದಾರು
ಬೆಳ್ಳುಳ್ಳಿ ಏಳೆಂಟು
ಒಂದು ಹಸಿಮೆಣಸು
ಎಲ್ಲವನ್ನೂ ರುಚಿಗೆ ಉಪ್ಪು ಬೆರೆಸಿ ಬೇಯಿಸಿ.
ಕಾಯಿತುರಿಯೊಂದಿಗೆ ರುಬ್ಬಿ
ಚಟ್ಣಿ ಆಯಿತು.
ಪುಸ್ತಕ ಲೈಬ್ರರಿಯಿಂದ ಬಂದಿತ್ತು, ಆಂಗ್ಲ ಭಾಷೆಯ ಈ ಪುಸ್ತಕ ಕನ್ನಡಕ್ಕೆ ಅನುವಾದಿಸಲ್ಪಟ್ಟಿದೆ.
ಝೀರೋ ಆಯಿಲ್ ಕುಕಿಂಗ್ ಎಂಬಂತಹ ಈ ಪಾಕಶಾಸ್ತ್ರವನ್ನು ಬರೆದವರು ಖ್ಯಾತ ಹೃದಯ ರೋಗ ತಜ್ಞರಾಗಿದ್ದಾರೆ.
ಆರೋಗ್ಯಕ್ಕೆ ಕೈಪಿಡಿಯಂತಿರುವ ಈ ಪುಸ್ತಕವನ್ನು ನಾನು ಎರಡೆರಡು ಬಾರಿ ಓದಿದೆ. ' ವನಿತಾ ವಯೋಜನ ಪುಸ್ತಕ ವಿನಿಮಯಪದ್ಧತಿ ' ಎಂಬ ಕೇರಳ ಸರಕಾರದ ಯೋಜನೆಯಂತೆ ಕೋವಿಡ್ ಕಾರಣದಿಂದ ವಯಸ್ಕ ಮಹಿಳೆಯರಿಗೆ ಮನೆಗೇ ಪುಸ್ತಕ ಬರುತ್ತಲಿದೆ.
ಎಣ್ಣೆರಹಿತ ಅಡುಗೆ ಇದಕ್ಕೆ ಸ್ಪೂರ್ತಿ, ಹಾಗಾಗಿ ಚಟ್ಣಿಗೆ ಒಗ್ಗರಣೆಯನ್ನೂ ಹಾಕಿಲ್ಲ.
ಆಟಿಯ ಅಟಿಲ್
ಕೆಸುವಿನೆಲೆ ಚಟ್ಣಿ
ಬರಹ ಬಂದಿದೆ
ಬಿಡುವು ಸಿಕ್ಕಾಗ
ದಾರೆಹುಳಿ ರಸಧಾರೆ
ಒಸರಲಿದೆ...
0 comments:
Post a Comment