ದಿನವೂ ಒಂದೇ ರಾಗ
ನನ್ನಜ್ಜಿ ಹೇಳಿದ ಅದೇ ಕತೆ
ಕಾಗಕ್ಕ ಗುಬ್ಬಕ್ಕ ಪುರಾಣ
ಆಲಿಸುತ್ತ ಹಾಯಾಗಿದ್ದ ಮಗು
ತೆರಳಿತು ತನ್ನ ಅರಮನೆಗೆ
ಟ್ವಿಂಕಲ್ ಟ್ವಿಂಕಲ್ ರಾಗ
ಕಣ್ಣರಳಿಸಿ ಅಜ್ಜಿಯತ್ತ ಹುಸಿನಗು
ಭಾಗ್ಯದಾ ಲಕ್ಷ್ಮೀ ಬಾರಮ್ಮಾ
ಜೋಕಾಲಿ ತೂಗುತ್ತ ನಿದ್ರೆಗೆ ಜಾರೆ
ಯಾವುದೂ ಇನ್ನಿಲ್ಲ
ಕಾಲ ನಿಲ್ಲುವುದಿಲ್ಲ
ನನ್ನ ಪಾಡಿಗೆ ನಾನಿರಲು
" ಅಮ್ಮ, ಮಗೂಗೆ ಅಷ್ಟಮಿ ಚಾಮಿ ವೇಷ... "
ಮೊಬೈಲಲ್ಲಿ ತೇಲಿ ಬಂದ ಚಿತ್ರಗಳು
ಇದಪ್ಪ ದೇವ್ರು
ಒಂದೇ ಉಸಿರಿಗೆ
ಮೊಬೈಲ್ ಪರದೆಯ ಮೇಲೆ
ಪ್ರತಿಷ್ಠಾಪಿತ ಕಂದ
ಅಹಹ.. ಅಕ್ಕಾ, ಇದೇನಚ್ಚರಿ
ಮೊಬೈಲ್ ಹಿಡಿವಾಗ
ಕಂದನನ್ನು ಹಿಡಿದೆತ್ತಿದ ಆನಂದ
ನಲಿನಲಿದು ಬಂದಿತಲ್ಲ
0 comments:
Post a Comment