Pages

Ads 468x60px

Friday, 11 November 2022

ಮಗುವಿಗಾಗಿ ರಾಗಿ

 


ಅಮ್ಮ ಮಗೂಗೆ 6 ತಿಂಗಳಾದ ನಂತರ ಮಣ್ಣಿ ಕೊಡಬಹುದು ಅಂತ ಡಾಕ್ಟ್ರು ಹೇಳಿದ್ದಾರಲ್ಲ.."

ಅವರೇನೇ ಹೇಳಲಿ ಹಾಲು ಸಾಕಾಗದಿದ್ದರೆ ಮೂರು ತಿಂಗಳಿಗೇ ಗಟ್ಟಿ ಆಹಾರ ಕೊಡಬೇಕಾಗುತ್ತೆ. "


ನೀನು ರಾಗಿಹುಡಿ ಮಾಡಿ ಇಡು ಬೆಂಗಳೂರಿಗೆ ಹೋದ ಮೇಲೆ ಕೊಡ್ತೇನೆ.. " 


ಸಂಜೆ ಅಪ್ಪನ ಒಟ್ಟಿಗೆ ಹೋಗಿ ಜಗ್ಗಣ್ಣನ ಅಂಗಡಿಯಿಂದ ರಾಗಿ ತಾ..  ಅರ್ಧ ಕಿಲೊ ಸಾಕು ಮಗು ಹೇಗೆ ತಿನ್ನುತ್ತೇಂತ ನೋಡ್ಕೊಂಡು ಜಾಸ್ತಿ ಮಾಡೋಣ..."  

ಮಕ್ಕಳಿಗಾಗಿ  ರಾಗಿ ಗೀಗಿ ಅಂತ ಒದ್ದಾಡಿದ್ದೇ ಇಲ್ಲ  ಕಾಲದಲ್ಲಿ ನಮ್ಮ ಹಳ್ಳಿಯ ಅಂಗಡಿಯಲ್ಲಿ ರಾಗಿ ಸಿಗುತ್ತಲೂ ಇರಲಿಲ್ಲ.   ಬೇಕಿದ್ದರೆ ಮಂಗಳೂರು ನಗರದಲ್ಲಿ ಹುಡುಕಿ ತರಬೇಕಾದ ಕಾಲ ಅದಾಗಿತ್ತು ಅದನ್ನು ವ್ಯವಸ್ಥಿತವಾಗಿ ಹುಡಿ ಮಾಡಿ ಇಟ್ಟುಕೊಳ್ಳಲು ನನಗೆ ತಿಳಿದೂ ಇರಲಿಲ್ಲನಮ್ಮವರು ಬೇಬಿ ಫುಡ್ ತಂದ್ಕೊಡ್ತಾ ಇದ್ರು ಅದನ್ನು ಹಾಲಿಗೆ ಬೆರೆಸಿದರಾಯಿತು ಮಣ್ಣಿ ದಿಢೀರ್ ಸಿದ್ಧ ನನ್ನ ಅಮ್ಮನೂ ಅಷ್ಟೇ ಪುಟ್ಟ ಮಗುವಿಗೆ ರಾಗಿ ಸಿಗದೇ ಹಪಹಪಿಸಿದ್ದೇ ಬಂತಲ್ಲದೆ ಅವರೂ ನನ್ನ ತಂಗಿ ತಮ್ಮಂದಿರಿಗೆ ಬೇಬಿ ಫುಡ್ಅಮುಲ್ ಹಾಲಿನ ಹುಡಿ... ಬೆರೆಸಿ ಕೊಟ್ಟಿದ್ದಾರೆ.   ಹಳೆಯ ನೆನಪುಗಳನ್ನು ಕಟ್ಕೊಂಡು ಮಾಡಲಿಕ್ಕೇನೂ ಇಲ್ಲ ಈಗ ಮಗಳು ಹೇಳಿದಂತೆ ಮಾಡಿದರಾಯಿತು.


ಸಂಜೆ ಮಗುವನ್ನು ನನ್ನ ವಶ ಬಿಟ್ಟು ಮಗಳು ಅಪ್ಪನೊಂದಿಗೆ ಹೊರಟಳು ಅಲ್ಲಾಂದ್ರೂ ಸಂಜೆಯ ಬಿಡುವಿನ ವೇಳೆ ಮಗುವಿಗೇ ಮೀಸಲು.


ಮಗೂಗೇಂತ ಜಗ್ಗಣ್ಣ ಒಳ್ಳೆಯ ಕ್ವಾಲಿಟಿ ರಾಗಿ ಕೊಟ್ಟಿದಾನೆ ಆದ್ರೂ ನಾಲ್ಕು ಸಾರಿ ತೊಳೆದು ಒಣಗಿಸಬೇಕಂತೆ.. ನೋಡೂ ನಿಂಗೆ ರಾಗಿ ಮೊಳಕೆ ಬರಿಸಲಿಕ್ಕೆ ಗೊತ್ತಾ...   ಯೂ ಟ್ಯೂಬ್ ಲಿಂಕ್ ನೋಡು..."

.. ಮೊಳಕೆಯೂ ಬರಬೇಕಾ ಅದು ನಂಗೆ ಗೊತ್ತಿರಲಿಲ್ಲ.   ಚಿಂತೆಯಿಲ್ಲ ಪಚ್ಚೆಸ್ರು ಮೊಳಕೆ ಬರೋ ಥರಾನೇ ಮಾಡಿದ್ರಾಯ್ತು ಬಿಡು... "  ಅನ್ನುತ್ತ ಅವಳು ಕಳಿಸಿದ ಲಿಂಕ್ ನೋಡಿದ್ದಾಯ್ತು.   ಸಾಲದೂ ಅಂತ ಇನ್ನೂ ಹಲವು ಲಿಂಕ್ ಗಳನ್ನು ನೋಡಿದ್ದಾಯ್ತು ಒಮ್ಮೆ ಇಂಟರ್ನೆಟ್ ಗೆ ಎಡತಾಕಿದರೆ ಮುಗೀತುಅದು ಸಂಬಂಧಪಟ್ಟ ಹಲವನ್ನು ತೋರಿಸುತ್ತದೆ ಉತ್ತಮವಾದುದನ್ನು ಆಯ್ಕೆ ಮಾಡವುದು ನಮ್ಮ ಕೈಯಲ್ಲಿದೆ.





ಈಗ ನಾವು ರಾಗಿಯನ್ನು ತೊಳೆಯೋಣ ತೊಳೆದಷ್ಟೂ ಕಸ ಮುಗಿಯದು ಅಂತಿದ್ದರೆ ಕಲ್ಲು ಮಣ್ಣು ಇರಲೇಬೇಕು ನಾವು ಹಿಂದಿನಿಂದಲೇ ಗದ್ದೆ ಬೇಸಾಯ ಮಾಡುತ್ತಲಿದ್ದವರು ಅಕ್ಕಿಯಿಂದ ಕಲ್ಲು ಜಾಲಿಸುವುದನ್ನು ಕೆಲಸಗಿತ್ತಿಯರೇ ತಿಳಿಸಿಕೊಟ್ಟಿದ್ದರು ನಿತ್ಯವೂ ಅಡುಗೆಯ ಕುಚ್ಚುಲಕ್ಕಿಯನ್ನು ಕಲ್ಯಾಣಿ ತೊಳೆದು ಕಲ್ಲು ಜಾಲಿಸಿ ನನ್ನ ಎದುರು ಇರಿಸುತ್ತಿದ್ದುದನ್ನು ಮರೆಯಲುಂಟೇ...

ತೊಳೆದೂ ತೊಳೆದೂ ರಾಗಿಯನ್ನು ಜಾಲಿಸಿದಂತೆ ತಳದಲ್ಲಿ ಸಿಮೆಂಟಿನ  ಹುಡಿಯಂತಿದ್ದ ಮಣ್ಣಿನ  ಕಣಗಳು ತೋರಿ ಬಂದವು ಒಂದು ಚಮಚದಷ್ಟು ಇದ್ದಿತು.   ನೋಡು ಎಷ್ಟೇ ಗುಣಮಟ್ಟದ ರಾಗಿಯಾದ್ರೂ ಇಷ್ಟು ಕಸ ಸಿಕ್ಕಿತು.. ತೊಳೆದಷ್ಟೂ ಕಸ ಉಂಟು ಇನ್ನು ಮುಂಙೆ ಬಂದ್ಮೇಲೆ ಬೇಕಿದ್ರೆ ತೊಳೆದರೆ ಸಾಕು ಇದನ್ನು  12 ಗಂಟೆ ನೀರಿನಲ್ಲಿ ನೆನೆಸಿ ಇಡಬೇಕು ನಂತರ 12 ಗಂಟೆ ತೆಳ್ಳಗಿನ ಬಟ್ಟೆಯಲ್ಲಿ ಕಟ್ಟಿ ಮುಚ್ಚಿ ಇಟ್ಟರಾಯಿತು ಒಟ್ಟಿನಲ್ಲಿ ಒಂದು ದಿನ... "


24 ಗಂಟೆಯ  ಅವಧಿಯಲ್ಲಿ ರಾಗಿ ಮೊಳಕೆ ಕಟ್ಟಿ ಆಯ್ತು.

ಇನ್ನು ಪುನಃ ತೊಳೆಯಬೇಕಿಲ್ಲ ಬಿಸಿಲಿಗೆ ಇಡಬೇಕು ಬಿಸಿಲೇ ಇರಲಿಲ್ಲ ತೊಂದರೆಯಿಲ್ಲ ಗಾಳಿಗೆ ಪಸೆ ಆರಲಿ ಎಂದು ಅಂಗಳದಲ್ಲಿ ಒಂದು ಎತ್ತರದ ಮಣೆಯ ಮೇಲೆ ಗೆರಸೆಗೆ ಒಂದು ಶುಭ್ರವಾದ ಬಟ್ಟೆ ಹಾಸಿ ರಾಗಿಯನ್ನು ಹರಡಿ ಇಡಲಾಯಿತು ಆಗಾಗ್ಗೆ ಕೈಯಾಡಿಸುತ್ತ ಇದ್ದರಾಯಿತು ಸಂಜೆಯಾಗತ್ತಲೂ ರಾಗಿ ಒಳ ಬಂದಿತು ಫ್ಯಾನ್ ಗಾಳಿಯ ಕೆಳಗೆ ಇಡುವಲ್ಲಿಗೆ ಒಣಗಿಸುವ ಒಂದು ಹಂತ ಆಯಿತು.


ಮಾರನೇ ದಿನ ಮುಂಜಾನೆ ಲಲಿತಕ್ಕ ಬಂದಳು ಮಗು ಹಾಗೂ ಬಾಣಂತಿ ಸೇವೆಗೆಂದು ಎಂಡು ತಿಂಗಳು ಬಂದವಳು ಈಗ ಮಗುವನ್ನು ನೋಡಿ ಹೋಗಲೆಂದು ಬಂದಿದ್ದಾಳೆ.   ಅವಳಿಗೆ ನಾಲ್ಕು ಮೊಮ್ಮಕ್ಕಳಿದಾವೆ ಮಗುವಿನ ಆಹಾರ ವಿಧಾನ            ತಿಳಿಯದಿದ್ದೀತೇ...


ನನ್ನ ಮೊಳಕೆ ರಾಗಿಯನ್ನು ನೋಡಿದ ಲಲಿತ ಚೆನ್ನಾಗಿ ಮುಂಙೆ ಬಂದಿದೆ ಅಕ್ಕಪಸೆಯೂ ಆರಿದೆಇನ್ನು ಹುರಿದು ಹುಡಿಮಾಡಿದ್ರಾಯ್ತು..."


ಸರಿ ಮಿಕ್ಸಿಯ ಜಾರ್ ನಿನ್ನೆಯೇ ಒಣಗಿಸಿ ಇಟ್ಟಿದೆ ಹುರಿದು ಹುಡಿ ನಾನೇ ಮಾಡ್ತೇನೆ ಬಿಡು.. "


 ಇಂಡಕ್ಷನ್ ಸ್ಟವ್ ಮೇಲೆ ಬಾಣಲೆಯಿಟ್ಟು ಹುರಿದೂ ಆಯ್ತು ರಾಗಿಯ.ಸುವಾಸನೆ ಬರುವ ತನಕ ಹುರಿದರೆ ಸಾಕು ಬಿಸಿ ಆರಿದ ನಂತರ ಮಿಕ್ಸಿ ನುಣ್ಣಗೆ ಹುಡಿ ಮಾಡಿ ಕೊಟ್ಟಿತು.   ನಂತರ ಜಾಲರಿ ತಟ್ಟೆಯಲ್ಲಿ ಜರಡಿ ಹಿಡಿದಾಗ ರಾಗಿಯ ಹೊರ ಸಿಪ್ಪೆಯೂ ಬೇರ್ಪಟ್ಟಿತು ಇದೀಗ ಮಗುವಿನ ಉಪಯೋಗಕ್ಕಾಗಿ ರಾಗಿ ಹುಡಿ ಸಿದ್ಧವಾಗಿದೆ.





ರಾಗಿಯನ್ನು ಮೊಳಕೆ ಬರಿಸುವ ಅಗತ್ಯವೇನೂ ಇಲ್ಲ. " ಎಂದಳು ಲಲಿತಕ್ಕ.   ಗೋಧಿಯನ್ನೂ ಇದೇ ತರ ಹುಡಿ ಮಾಡಿ ಸೇರಿಸಿ ಕೊಡಬಹುದು ಎಂಬ ಸಲಹೆಯೂ ಬಂದಿತು.


ಅಮ್ಮ ಈಗ ಗೋಧಿ ಸೇರಿಸ್ಬೇಡ ಅದೆಲ್ಲ ಮತ್ತೆ ನೋಡುವಾ.. "


 ರಾಗಿ ಹುಡಿ ಬೆಂಗಳೂರಿಗೆ ಹೋಯಿತು ಮೊದಲ ಬಾರಿ

ಕೊಡುವಾಗ ಕೇವಲ ಅರ್ಧ ಚಮಚದಲ್ಲಿ ಮಣ್ಣಿ ಮಾಡತಕ್ಕದ್ದು ರುಚಿಗೆ ಬೆಲ್ಲ ಅಥವಾ ಕಲ್ಲುಸಕ್ಕರೆ ಹಾಕು ರುಚಿಯಾಗಿದೆಯೋಬೆಂದಿದೆಯೇ ಎಂದು ನೋಡಿಯೇ ಮಗುವಿಗೆ ತಿನ್ನಿಸತಕ್ಕದ್ದು.   ಮಾಡಿದ್ದು ಹೆಚ್ಚಾದರೆ ಇಟ್ಟು ಪುನಃ ತಿನ್ನಿಸಬಾರದು... ಹೀಗೆಲ್ಲ ಸಲಹೆಗಳನ್ನು ನೀಡಿ ನನ್ನ ಕರ್ತವ್ಯ ಮಾಡಿದ್ದಾಯ್ತು.   ಇನ್ನೇನೇ ಆಗಬೇಕಿದ್ದರೂ ಅವಳ ಅತ್ತೆ ನೋಡಿಕೊಳ್ತಾರೆ ಅಷ್ಟೇ.


ಒಂದು ಮಧ್ಯಾಹ್ನದ ಹೊತ್ತು ಪ್ರೇಮಕ್ಕ ಬಂದಳು.   ಊಟ ಆಗಿದ್ಯಾ..?

ಅಯ್ಯೊ ಊಟ ಮುಗಿಸ್ಕೊಂಡೇ ಬಂದಿದ್ದು ಮಾರಾಯ್ತಿ.. ಇವತ್ತು ದೀಪಾವಳಿ ತಂಬಿಲ ಅಲ್ವೇ ಹಾಗೇ ಮೈಸಂದಾಯಿ ಗುಡಿ ತನಕ ಹೋಗಿ ಬಂದದ್ದು...  ಅಲ್ಲಿ ನೋಡಿದ್ರೆ ಯಾರೂ ಇಲ್ಲ ಮೂರು ಗಂಟೆಗೆ ಪುನಃ ಬಸ್ ಹತ್ತಿ ಹೋಗ್ಬೇಕು ನಾನು..."

ಹೋ.. ಹೌದಾ ಹೊರಗಡೆ ತೆಂಗಿನಕಾಯಿ ಸುಲೀತಿದಾರೆ...ತಯಾರಿ ಆಗ್ತಾ ಉಂಟು.."

 ಸಮಯದಲ್ಲಿ  ರಾಗಿ ಹುಡಿ ಮಾಡಿದ ವಿಧಾನ ಹೇಳಲಾಗಿ ಅವಳೂ ಕೊನೆತನಕ ಕೇಳಿಸ್ಕೊಂಡು ನೀನು ರಾಗಿ ಹುಡಿ ಮಾಡಿದ ಕ್ರಮ ಸರಿಯಿಲ್ಲ... ನನ್ನಮ್ಮ ಮಾಡುತ್ತಿದ್ದದ್ದು ಹೀಗೆ..  ರಾಗಿಯನ್ನು ಅರೆದುಹಾಲು ತೆಗೆದುಬಟ್ಟೆಯಲ್ಲಿ ಶೋಧಿಸಿ,    ಕೇವಲ ಬೆಳ್ಳಗಿನ ಹಾಲನ್ನು ಉಳಿಸಿ ನೀರು ತೆಗೆದು ರಾಗಿಯ ಹಿಟ್ಟನ್ನು ಮಾತ್ರ ಬಿಸಿಲಿಗೆ ಒಣಗಿಸಿನಂತರ   ಬಿಸ್ಕತ್ ಥರ ಆಗುತ್ತೇ..  ಎಷ್ಟು ಸಮಯ ಇಟ್ರೂ ಹಾಳಾಗದು. "


"ಹೌದ ಈಗ ರಾಗಿ ಹುಡಿ ಬೆಂಗಳೂರಿಗೆ ಹೋಗಿ ಆಯ್ತು ಇನ್ನೊಮ್ಮೆ ನೀನು ಹೇಳಿದ ಥರ ಮಾಡೋಣಾಂತೆ.." ನನ್ನ ಸಮಜಾಯಿಷಿ.


ಅವಳಮ್ಮನ ಕಾಲದ ಕತೆ ಈಗ ನಡೆದೀತೇಆಗ ಏನೇ ಮಾಡಬೇಕಿದ್ದರೂ ರುಬ್ಬವ  ಕಲ್ಲು ಬೀಸೋ ಕಲ್ಲು ಕುಟ್ಟಾಣಿಯಲ್ಲಿ ಕುಟ್ಟೀ ಕುಟ್ಟೀ...  ಕುಣಿದಾಡುವ ಕಾಲ ಅನ್ನಿ.










0 comments:

Post a Comment