Pages

Ads 468x60px

Friday, 19 May 2023

ಕಾಯಿಹಾಲು ಮೇಲಾರ

 


ಬೇಸಿಗೆಯ  ದಿನಗಳಲ್ಲಿ ಅಡುಗೆಮನೆಯಲ್ಲಿ ಅದೂ ಇದೂ ಅಂತ ಗುರುಟುತ್ತಾ ಇರಲು ನನ್ನಿಂದಾಗದು ಬೇಗನೆ ಅನ್ನ ಹಾಗೂತೆಳ್ಳಗಿನ ಸಾರು ಮಾಡಿಟ್ಟರೂ ನಡೀತದೆ.    ವರ್ಷ ನಮ್ಮಲ್ಲಿ ಕಾಟುಮಾವಿನ ಹಣ್ಣಿನ ಕಾರ್ಬಾರ್ ಇಲ್ಲ ತಂಪಿನ ಅಡುಗೆ ಮಾವಿನಹಣ್ಣು ಇಲ್ಲದೆ ಮಾಡುವುದಾದರೂ ಹೇಗೆ?   ಮಾಡಬಹುದು ತಂಬುಳಿ ಅದನ್ನು ನಾನೊಬ್ಬಳೇ ಉಣ್ಣಬೇಕಾದೀತು.


ಮಜ್ಜಿಗೆ ಹುಳಿ ಮಾಡೋಣಾಂದ್ರೂ ಮಜ್ಜಿಗೆ ಕುಡಿದೇ ಮುಗಿದಿದೆ ಇನ್ನು ಮಜ್ಜಿಗೆಯಿಂದ ಹುಳಿ ಮಾಡುವುದಾದರೂ ಹೇಗೆ?   ಮಜ್ಜಿಗೆಹುಳಿಯೂ ರುಚಿಕಟ್ಟಾಗಿ ಇರಬೇಡವೇ ಅದಕ್ಕೆ ತಾಜಾ ಸಿಹಿ ಮಜ್ಜಿಗೆಯೇ ಆಗಬೇಕು ತೆಂಗಿನಕಾಯಿ ಕೂಡಾ ಹಂಗೇನೆ ಆಗ ತಾನೇ ಸುಲಿದ ಹಸಿ ತೆಂಗಿನಕಾಯಿ ಇರಬೇಕು ವಾರದ ಹಿಂದೆ ಫ್ರಿಜ್ ಒಳಗಿಟ್ಟ ಕಾಯಿ ಆಗದು ತೆಂಗಿನಕಾಯಿ ನುಣ್ಣಗಾದಷ್ಟೂ ಸಾಲದು.

ನೆನಪಾಯ್ತು ,  ಅಪ್ಪ ಹೇಳಿದಂತಹ ಕತೆ


ನಮ್ಮ ಸೀಮೆಯಲ್ಲಿ ಹಿಂದೆ ರಾಜರ ಕಾಲ ಅರಸುಗಳಿಗೆ ದಿನವೂ ಮಜ್ಜಿಗೆ ಹುಳಿ ಊಟಕ್ಕೆ ಇರಲೇಬೇಕು.   ಅಡುಗೆಗೆ ಬಾಣಸಿಗನೂ ಇರುತ್ತಾನೆ ಅನ್ನಿ ದಿನವೂ ಊಟ ಮಾಡುವಾಗ ರಾಜರು “ ಮೇಲಾರದ ತೆಂಗಿನಕಾಯಿ ನುಣ್ಣಗಾಗಲಿಲ್ಲ..” ಅನ್ನುತ್ತಿದ್ದರಂತೆ ಕಾಯಿ ಅರಪ್ಪನ್ನು ತಂದು ತೋರಿಸಲಿಕ್ಕೆ ಆರ್ಡರ್ ಆಯಿತು ಬಾಣಸಿಗ ಅರೆಯುವ ಕಲ್ಲಿನಲ್ಲಿ ಅರೆದ ಅರಪ್ಪನ್ನು ತಂದು ತೋರಿಸುವುದೂ ರಾಜರು, “ ಇನ್ನೂ ಸ್ವಲ್ಪ… ಬೆಣ್ಣೆಯಂತೆ ಆಗಲಿ. “  ಎಂದೆನ್ನುವುದೂ ನಡೆಯಿತು.    ಬಾಣಸಿಗನಿಗೂ ತಾಳ್ಮೆ ಎಂಬುದಿದೆಯಲ್ಲ.   ಒಂದು ದಿನ ಬೆಣ್ಣೆ ಮುದ್ದೆಯನ್ನೇ ತಂದು ಎದುರಿಗಿಟ್ಟನಂತೆ


ಇದು ನಡೆದ ಕತೆಯೋ ಒಂದೂ ನನಗೆ ತಿಳಿಯದು ಒಟ್ಟಿನಲ್ಲಿ ಮೇಲೋಗರಕ್ಕೆ ತೆಂಗಿನಕಾಯಿ ಬೆಣ್ಣೆಯಂತೆ ನುಣ್ಣಗಾಗಬೇಕು ಇದು ತಾತ್ಪರ್ಯ ಅಷ್ಟೇ.


ಅದಕ್ಕಾಗಿ ಏನು ಮಾಡೋಣಾ?


ತಾಜಾ ತರಕಾರಿ ಯಾವುದೂ ಆದೀತು ಬೀನ್ಸ್ ಸೌತೇಕಾಯಿತೊಂಡೆಕಾಯಿಯೂ ಅಡ್ಡಿಯಿಲ್ಲ.

ಯಾವುದಾದರೂ ಕಾಳು ತೊಗರಿಬೇಳೆ ಹೊರತುಪಡಿಸಿ ಅಲಸಂದೆ ಕಾಳು ಕಾಬೂಲಿ ಚನಾಚೆನ್ನಾಗಿರುತ್ತದೆ.


ಒಂದು ತೆಂಗಿನ ಕಡಿ ತುರಿದು ಅರೆದು ಹಾಲು ತೆಗೆದಿರಿಸಿಟ್ಟು ಆಯ್ತು ಇಲ್ಲಿ ಬೆಣ್ಣೆಯಂತೆ ನುಣ್ಣಗಾಗುವ ಸಮಸ್ಯೆ ಇಲ್ಲ ನಮ್ಮ ಮಿಕ್ಸಿಗೆ ಬೆಣ್ಣೆಯಂತೆ ಅರೆಯುವ ಸಾಮರ್ಥ್ಯ ಇದ್ದರಲ್ಲವೇ..,  ಮಜ್ಜಿಗೆ ಹೇಗೂ ಇಲ್ಲ.


ತರಕಾರಿಕಾಳುಗಳನ್ನು ಬೇಯಿಸಿ ಎರಡು ಹಸಿಮೆಣಸು ಸಿಗಿದು ಹಾಕತಕ್ಕದ್ದುರುಚಿಗೆ ಉಪ್ಪು.

ನಂತರ ಕಾಯಿಹಾಲು ಎರೆಯಿರಿ ಒಂದು ಕುದಿ ಬರಲಿಒಂದೆಸಳು ಕರಿಬೇವು ಹಾಕಲೇಬೇಕು ಬೇಕಿದ್ದರೆ ಒಂದು ಚಮಚ ತೆಂಗಿನೆಣ್ಣೆಎರೆಯಿರಿ.

ಬಿಸಿಬಿಸಿಯಾಗಿ ಅನ್ನದೊಂದಿಗೆ ಉಣ್ಣಿರಿ ಕಾಯಿಹಾಲಿನ ರುಚಿಯೂಹಸಿಮೆಣಸಿನ ಪರಿಮಳವೂ ಸೇರಿ ಊಟ ಸ್ವಾದಭರಿತವಾಗಿರುತ್ತದೆ ಬೇಸಿಗೆಗೆ ಹೇಳಿ ಮಾಡಿಸಿದಂತಹ ಅಡುಗೆ ಅನ್ನಿ.






0 comments:

Post a Comment