ಈ ಬಾರಿ ಕಾಟು ಮಾವಿನ ಅಬ್ಬರ ಇಲ್ಲ. ಆದರೂ ಹಿರಣ್ಯ ದೇಗುಲದ ವಾರ್ಷಿಕ ಉತ್ಸವ ಹಾಗೂ ರಜಾ ದಿನಗಳ ಸಂಭ್ರಮಾಚರಣೆಗಾಗಿ ಮಗಳು ಬಂದಿದ್ದಾಳೆ, ಮಾವಿನ ಹಣ್ಣೂಗಳೂ “ನಾವಿದ್ದೇವೆ “ ಅಂದಿವೆ.
ಕೆಲವೇ ಮಾವಿನಹಣ್ಣುಗಳಿಂದ ಹತ್ತೂ ಮಂದಿ ಸವಿಯಬಹುದಾದ ರಸರುಚಿ ತಯಾರಿಸುವುದು ಹೇಗೆ?
ಮಾವಿನಹಣ್ಣುಗಳನ್ನು ತೊಳೆದು, ತೊಟ್ಟು ಕತ್ತರಿಸಿ ಸಿಪ್ಪೆ ಬೇರ್ಪಡಿಸಿ, ಗೊರಟುಗಳನ್ನು ತಪಲೆಯಲ್ಲಿ ತುಂಬಿಸಿ.
ಹಣ್ಣುಗಳ ಸಿಪ್ಪೆ ಕೈಯಲ್ಲಿ ಗಿವುಚಿದರೆ ಸಾಲದು, ಮಿಕ್ಸಿಯಲ್ಲಿ ರೊಂಯ್ ಎಂದು ತಿರುಗಿಸಿ ರಸ ತೆಗೆಯಿರಿ. ಸಿಪ್ಪೆಯನ್ನು ಜಾಲರಿಯಲ್ಲಿ ಶೋಧಿಸಿದರೆ ಉತ್ತಮ. ಈ ಹಂತದಲ್ಲಿ ಸ್ವಲ್ಪ ನೀರು ಬಳಸಬಹುದಾಗಿದೆ. ರುಚಿಗೆ ಉಪ್ಪು, ಬೆಲ್ಲ ತುಸು ಜಾಸ್ತಿ ಹಾಕಿದರೆ ಒಳ್ಳೆಯದು.
ಹಸಿಮೆಣಸು, ಶುಂಠಿ ಮಿತ ಪ್ರಮಾಣದಲ್ಲಿ ಬಳಸಿರಿ.
ಎಲ್ಲವನ್ನೂ ಕೂಡಿಸಿ, ಕುದಿಸಿ, ಹಣ್ಣಿನರಸ ದಪ್ಪ ದ್ರಾವಣ ಆದ ನಂತರ ಕೆಳಗಿಳಿಸಿ. ನಿಮಗಿಷ್ಟವಾದಂತೆ ಒಗ್ಗರಣೆ ಕೊಡುವಲ್ಲಿಗೆ ಮಾವಿನ ಹಣ್ಣಿನ ಪುಳಿಂಜಿ ಸಿದ್ಧ.
ಕಾಟು ಮಾವಿನ ಹಣ್ಣುಗಳ ಕಾಲ ಮುಗಿಯುವ ತನಕ ಈ ಪುಳಿಂಜಿ ತಯಾರಿಸಿ, ತಂಪು ಪೆಟ್ಟಿಗೆಯಲ್ಲಿಟ್ಟು ದಿನವೂ ಸವಿಯಿರಿ.
0 comments:
Post a Comment