Pages

Ads 468x60px

Sunday 20 September 2020

ಪೊಸಡಿಗುಂಪೆಯ ಹೂವು


 


ನನ್ನ ಕಾಲೇಜು ವ್ಯಾಸಂಗ ಮುಗಿದಿತ್ತು ಅಪ್ಪ ಮೆಡಿಕಲ್ ರೆಸ್ಟ್ ಎಂದು ವಕೀಲಿ ವೃತ್ತಿಯಿಂದ ನಿವೃತ್ತರಾಗಿ ಊರಿನ ತೋಟದಮನೆಯಲ್ಲಿ ವಾಸ್ತವ್ಯ ಹೂಡುವ ಉಮೇದಿನಲ್ಲಿದ್ದರು ತಂಗಿ ತಮ್ಮಂದಿರು ಇನ್ನೂ ಕಲಿಯುತ್ತಿದ್ದಾರೆ ಅವರಿಗೆಲ್ಲ ಒಂದೊಂದು ನೆಲೆಕಲ್ಪಿಸಿ ಅಪ್ಪನೊಂದಿಗೆ ನಾನೂ ಅಮ್ಮ ಹಾಗೂ ಕಿರಿಯ ತಮ್ಮ ಕುಂಬ್ಳೆಯ ಸಮೀಪದಲ್ಲಿರುವ ಕಿಳಿಂಗಾರು ಮನೆಗೆ ತೆರಳುವಂತಾಯಿತು.   ಬಿಡುವಿನ ಸಮಯದಲ್ಲಿ ಕಾಸರಗೋಡಿನಲ್ಲಿದ್ದಾಗ ನಾನೂ ಕಾರ್ ಡ್ಪೈವಿಂಗ್ ಫೋಟೋಗ್ರಾಫಿ ಇತ್ಯಾದಿ ಹವ್ಯಾಸಗಳಲ್ಲಿ ತೊಡಗಿಸಿ ಕೊಂಡಿದ್ದೆ ಹೊಸ ಸಿನೆಮಾ ಬಂದ ಕೂಡಲೇ ಥಿಯೇಟರಿಗೆ ಹೋಗಿ ನೋಡಿ ಬರುವುದೂ ನನ್ನ ಹವ್ಯಾಸಗಳಲ್ಲೊಂದಾಗಿತ್ತು.


ಹಳ್ಳಿಯ ಮನೆಗೆ ಬಂದ ನಂತರ ನನ್ನ ವಿವಿಧ ಹವ್ಯಾಸಗಳಿಗೆ ಬ್ರೇಕ್ ಬಿದ್ದಿತು.   ಓದುವ ಹವ್ಯಾಸದ ಮುಂದುವರಿಕೆಗಾಗಿ ಬೇಳದಲ್ಲಿ ಲೈಬ್ರರಿ ಇರುವುದನ್ನು ತಿಳಿದು ಲೈಬ್ರರಿಗೆ ಸೇರಿದ್ದೂ ಆಯ್ತು ಮೈಲು ದೂರದಲ್ಲಿದ್ದ ಲೈಬ್ರರಿಗೆ ನಾಲ್ಕು ದಿನಕ್ಕೊಮ್ಮೆ ನಡೆದು ಹೋಗಿ ಪುಸ್ತಕ ತರುವ ರೂಢಿ ನಡೆದು ಹೋಗುವ ಕಾಲುದಾರಿಯಂತೂ ನಿಸರ್ಗರಮ್ಯ ತಾಣ ಕಪ್ಪು ಪಾರೆ ಕಲ್ಲುಗಳೂ ಎತ್ತರಕ್ಕೆ ಬೆಳೆದು ನಿಂತ ಮುಳಿಹುಲ್ಲುಗಾವಲು ಅದರೆಡೆಯಿಂದ ಅಲ್ಲಲ್ಲಿ ಇಣುಕುತ್ತಿರುವ ವರ್ಣವಿನ್ಯಾಸದ ಹೂವುಗಳು..


ಪುಟ್ಟ ಪುಟ್ಟ ಹೂವುಗಳೇ..

ಬಿಳಿ ಹಳದಿ ನಸುನೀಲಿ 

ಬಣ್ಣ ಬೆರೆಸಿದವನ್ಯಾರೇ.." 

ಕವನ ಹೊಸೆಯಬಹುದಿತ್ತು.

ಒಂದು ಬಾರಿ  ಲಿಲಿಪುಟ್ ಹೂವುಗಳನ್ನು ದಂಟು ಸಹಿತ ಕಿತ್ತು ಅಮ್ಮನ ವೀಕ್ಷಣೆಗಾಗಿ ತಂದೆಹೂವುಗಳ ಗೊಂಚಲನ್ನು ಕಂಡ ಅಮ್ಮ ,  ಇದೇನಾ ನಿನ್ನ ಹೂವು ಅಕ್ಕತಂಗಿ ಹೂವು  ಅಂತಾರೆ.." 


.. ಹೌದ!??? "

ಇದು ನೋಡುಒಟ್ಟಿಗೇ ಹೂ ಅರಳಿದ್ರೂ ದಂಟು ಒಂದೇ ನಮೂನಿ ಇರೂದಿಲ್ಲ ಒಂದು ಉದ್ದ ಮತ್ತೊಂದು ಗಿಡ್ಡ..  ಹಾಗೆ ಅಕ್ಕತಂಗಿ ಆಗಿ ಬಿಟ್ಟಿವೆ.. “ ಎಂದು ಅಮ್ಮ ಹೂ ದಂಟುಗಳನ್ನು ಹೂದಾನಿಯಲ್ಲಿರಿಸಿ ಆನಂದ ಪಟ್ಟಳು.


 ಕಾಲದಲ್ಲೇ ನನ್ನ ಬಳಿ ಪುಟ್ಟದೊಂದು ಕೆಮರಾ ಇದ್ದಿತ್ತಾದರೂ ಕೇವಲ ಕಪ್ಪು ಬಿಳುಪಿನ ಛಾಯಾಗ್ರಹಣದಲ್ಲಿ  ಹೂವುಗಳ ಸೊಗಸನ್ನು ಸೆರೆ ಹಿಡಿಯಲಾಗದು ಅದೂ ಅಲ್ಲದೆ ಚಿತ್ರದ ನೆಗೇಟಿವ್ ಪ್ರಿಂಟು ಹಿಡಿದು ಕಾಸರಗೋಡಿನ ಪ್ರಕಾಶ್ ಸ್ಟುಡಿಯೋ ಕಡೆ ಹೋಗಿ ಬರಬೇಕಾಗಿತ್ತು.   ದುಬಾರಿ ಹವ್ಯಾಸ ಎಂದೇ ತಿಳಿಯಿರಿ.


~~~~~~~        ~~~~~~~        ~~~~~~~~~~


COVID-19 ಪೂರ್ವಾರ್ಧ ಮುಗಿಯಿತು

ಊರಿನ ದಾರಿಯ ಬಾಗಿಲು ತೆರೆಯಿತು


ಬೆಂಗಳೂರಿನಲ್ಲಿ ಗೃಹಬಂಧನವೋ ಎಂಬಂತೆ ಇದ್ದ ನನ್ನ ಮಕ್ಕಳ ಸೇನೆ  ಬಂದಿದೆಮಗ - ಸೊಸೆ ಮಗಳು - ಅಳಿಯ ವಾರಗಳ ರಜೆಯೊಂದಿಗೆ ಬಂದೇ ಬಿಟ್ಟಿದ್ದಾರೆ.


ಬಂದವರೇ ತಿರುಗಾಟದ ಸ್ಥಳಗಳನ್ನೆಲ್ಲ ವ್ಯವಸ್ಥಿತವಾಗಿ ಗುರುತಿಟ್ಟು ಬೆಳಗೂ ಸಂಜೆಯೂ ವಿಹಾರ ನಡೆಸುವುದೇ ಆಯಿತು.


ಎಲ್ಲಿಗೇಂತ ಹುಬ್ಬೇರಿಸದಿರಿ ನಮ್ಮೂರಿನ ಪ್ರೇಕ್ಷಣೀಯ ಸ್ಥಳ ಪೊಸಡಿಗುಂಪೆ ಸೂರ್ಯೋದಯ ಹಾಗೂ ಸೂರ್ಯಾಸ್ತ ವೀಕ್ಷಣೆ ಕಣ್ಣುಗಳಿಗೆ ಹಬ್ಬ ವಾಹನವನ್ನು ದೂರ ನಿಲ್ಲಿಸಿ ಕಾಲ್ನಡಿಗೆಯಲ್ಲಿ ಬೆಟ್ಟ ಹತ್ತುವ ಆನಂದ ಮೋಡ ಕವಿದ ವಾತಾವರಣ ಇದ್ದರೂ ಆಗಸದ ಚೆಲುವಿಗೆ ಸಾಟಿಯಿಲ್ಲ ಹಚ್ಚ ಹಸಿರಿನ ತಾಣ ಬೀಸುವ ಕುಳಿರ್ಗಾಳಿ ಮೊರೆಯುತ್ತಿರುವ ಸಮುದ್ರದ ಅಲೆಗಳ ಅಬ್ಬರದ ದನಿ.


ಇಂತಹ ನಿಸರ್ಗ ಸಿರಿಯೆಡೆಯಿಂದ ಮಗಳು ಕೆಲವು ಫೋಟೊ ಹಿಡಿದು ತಂದಳು.

ಅವಳ ವಯಸ್ಸಿನಲ್ಲಿ ಅಮ್ಮನಿಗಾಗಿ ನಾನು ಕಿತ್ತು ತಂದ ಅದೇ ಹೂವುಗಳು!

ಅರೆರೆ..    ಬ್ಲಾಗ್ ಬರಹಕ್ಕೆ ವಿಷಯ ಸಿಕ್ಕಿತು.    ಹೂವಿನ ಬಾಟನಿ ನೇಮ್ ಸಿಕ್ಕಿ ಬಿಟ್ರೆ.. "

ಅದಕ್ಕೇನಂತೆ ಈಗಲೇ ಹುಡುಕಿ ಕೊಡ್ತೇನೆ.. "  ಎಂದ ಮಗಳು ಕ್ಷಣ ಮಾತ್ರದಲ್ಲಿ ಹೂವಿನ ಗಿಡದ ಜಾತಕವನ್ನು ಕಳಿಸಿಕೊಟ್ಟಳು.


ನಂಗೂ ಸ್ವಲ್ಪ ಹೇಳ್ಕೊಡು.. "

ನೀನು ಯಾಕೆ ಕಷ್ಟ ಪಡ್ತೀಯಾ ಬೇಕಾಗಿರುವಾಗ ಕೇಳು..  ನಾನಿದೀನಲ್ಲ.. "  ಅನ್ನುವುದೇ ಜಾಣೆ ಪೆಣ್ಮಣಿ!


bicolor Persian violet ಎಂಬ  ಸಸ್ಯವು 

Exacum tetragonum ಎಂದು ಸಸ್ಯವಿಜ್ನಾನಿಗಳಿಂದ ಹೇಳಲ್ಪಟ್ಟಿದೆ ಹುಲ್ಲುಗಾವಲು ಇದ್ದಲ್ಲಿ ಸಾಮಾನ್ಯವಾಗಿ ಇದ್ದೇ ಇರುತ್ತದೆ ಮಳೆಗಾಲ ಮುಗಿಯುವ ಹಂತದಲ್ಲಿ ಮಾತ್ರ ಕಾಣಬಹುದಾಗಿದೆ.   ತಮಿಳುಮಲಯಾಳಂ ಇದನ್ನು ಚೇಟಿ ಎಂದು ಕರೆದಿವೆ.   ಎಲ್ಲಭಾರತೀಯ ಭಾಷೆಗಳಲ್ಲಿ ವಿವಿಧ ನಾಮ ಹೊಂದಿರುವ ಸಸ್ಯ flower of India ಅನ್ನಲಿಕ್ಕೂ ಅಡ್ಡಿಯಿಲ್ಲ.






0 comments:

Post a Comment