Pages

Ads 468x60px

Monday 12 September 2022

ನೀರ್ ಮಾವು ಪಲ್ಯ

 

 ವರ್ಷ ನಮ್ಮಲ್ಲಿ ಮಾವಿನಹಣ್ಣು ಧಾರಾಳ ಮಕ್ಕಳೆಲ್ಲ ಮನೆಯಿಂದ ದೂರ ಇರುವಾಗ ತೋಟದಿಂದ ಮಾವಿನ ಹಣ್ಣು ತರುವ ಉಸಾಬರಿಗೆ ನಾವು ಹೋಗದೇ ವರ್ಷಗಳಾಯಿತು ಸುಯೋಗವೋ ಎಂಬಂತೆ ಮಗಳು ಅಳಿಯ  ಬಂದಿಳಿದರು ರಜಾಅಂತೇನಿಲ್ಲ ಅದೇನಿದ್ದರೂ work from home ಅಲ್ವೇ..

ಕಂಪ್ಯೂಟರ್ ಮುಂದೆ ಕೂತಿದ್ದರಾಯಿತೇ ತೋಟ ಗುಡ್ಡ ಸುತ್ತದಿದ್ದರೆ ಹೇಗೆ ಅಳಿಯ ಮಾವು ಹಲಸು ಗೇರು ಮರಗಳ ಒಡನಾಡಿ ಆದ ಅಂತೂ ಮನೆ ತುಂಬ ಫಲವಸ್ತುಗಳು ಬಂದು ಕೂಡಿದುವು ಅನ್ನಿ.


ದೇವಿ ದೇಗುಲದ ಕೆಳಗಿನ ತಟ್ಟಿನಲ್ಲಿ ಒಂದು ಮಾಮರ ದೇಗುಲ ದರ್ಶನಕ್ಕೆ ಬಂದ ಭಕ್ತರಿಗೆ ಕಣ್ಣು ಕುಕ್ಕುವಂತೆ ಹೂ ಬಿಟ್ಟಿತ್ತುಹಾಗೇನೇ ಮಿಡಿಯಾಗಿ ಕಾಯಾಗಿ ಹಣ್ಣೂ ಆಯ್ತು ಹಿಂದಿನ ವರ್ಷವೂ ಫಲ ಕೊಟ್ಟಿದ್ದರೂ ಹೇಳುವಷ್ಟಿರಲಿಲ್ಲ ಬಿದ್ದ ಹಣ್ಣುಗಳು ಹೆಕ್ಕಲಿಕ್ಕೆ ಸಿಗುವಷ್ಟೂ ಇಲ್ಲ ಅಲ್ಲೊಂದು ಇಲ್ಲೊಂದು ಅಷ್ಟೇ.    ಬಾರಿ ಬುಟ್ಟಿ ಬುಟ್ಟಿ ಹಣ್ಣುಗಳು...


  ಹಣ್ಣು ಸಾರು ಗೊಜ್ಜು ಸಾಸಮೆ ಮಾಡಿ ತಿಂದು ಮುಗಿಯುವಂತದ್ದಲ್ಲ ಅಕ್ಕಪಕ್ಕದ ಮನೆಗಳಿಗೆ ಕೊಡಲಿಕ್ಕೆ ಅಲ್ಲಿಯೂ ಮಾವಿನಹಣ್ಣುಗಳ ಭರಾಟೆ.   ಹೆಕ್ಕಿ ತಂದ ಮಾವಿನ ಹಣ್ಣುಗಳ ಸದ್ಬಳಕೆ ಹೇಗೆ ಮಾಂಬಳ ಮಾಡುವುದಕ್ಕೂ ಇಲ್ಲ ದಿನವೂ ಮಳೆ ಆಗಲೇ ಆರಂಭವಾಗಿತ್ತು.   ಉಪ್ಪಿನಲ್ಲಿ ಹಾಕಿಡೋಣ "  ನಮ್ಮ ಯಜಮಾನರೇ ಉಪಾಯ ಸೂಚಿಸಿದರು.


ಮಾವನೂ ಅಳಿಯನೂ ಸೇರಿ ಮಾವಿನಹಣ್ಣುಗಳನ್ನು ಉಪ್ಪಿನಲ್ಲಿ ಹಾಕಿಟ್ಟರು.


ಹೇಗೆ?

ಮಾವಿನಹಣ್ಣುಗಳನ್ನು ತೊಳೆದು ಒರೆಸಿ ಇಡುವುದುಒಡೆದದ್ದುಬಿದ್ದು ಪೆಟ್ಟಾದ ಹಣ್ಣುಗಳು ಬೇಡ.

ಭರಣಿ ಉತ್ತಮ ತಳದಲ್ಲಿ ಕಲ್ಲುಪ್ಪು ಮೊದಲು ನಂತರ ಮಾವಿನ ಹಣ್ಣುಗಳು ಪುನಃ ಉಪ್ಪು  ಥರ ತುಂಬಿಸುತ್ತ ಬರುವುದು ಒಟ್ಟಾರೆಯಾಗಿ ನಮ್ಮ ಮಾವಿನ ಹಣ್ಣುಗಳಿಗೆ ಎರಡು ಕಿಲೋ ಉಪ್ಪು ಬೇಕಾಯಿತು ಇದಕ್ಕೆಲ್ಲ ಪುಡಿ ಉಪ್ಪು ಅಂದರೆ ಟೇಬಲ್ಸಾಲ್ಟ್  ಬಳಸಲಿಕ್ಕಿಲ್ಲ ಕೊನೆಗೆ ಗಾಳಿ ಹೋಗದಂತೆ ಮುಚ್ಚಿ ಇರಿಸುವುದು ಇಷ್ಟು ಮಾಡಿದರಾಯ್ತು ಮಳೆಗಾಲದಲ್ಲಿ ಮಾವಿನಕಾಯಿ ಅಡುಗೆ ಮಾಡಿಕೊಳ್ಳಬಹುದು.


ಇಷ್ಟೆಲ್ಲ ಪ್ರವರ ಹೇಳಿದ ನಂತರ ಅಡುಗೆ ಮಾಡದಿದ್ದರೆ ಆದೀತೇ ಮಾಡೋಣ.  


ಗೊಜ್ಜು ಸಾರು ಅಂತೆಲ್ಲ ಬೇಡ ನಾವು ಪಲ್ಯ ಮಾಡುವವರಿದ್ದೇವೆ.


ಇಬ್ಬರಿಗೆ ನಾಲ್ಕು ಮಾವಿನಕಾಯಿ ಸಾಕು.


ದಾಸ್ತಾನು ಭರಣಿಯಿಂದ ಹೊರ ತೆಗೆದು ತೊಳೆಯಿರಿ ದೊಡ್ಡ ಗಾತ್ರದ ಮಾವಿನ ಮಿಡಿಯಂತೆ ಕಾಣಿಸುವ ನಮ್ಮ ತೋಟದ ಮಾವಿನಹಣ್ಣು ಸಿಹಿಯೊಂದಿಗೆ ಹುಳಿಯೂ ಇದ್ದಿತು.  

ತೊಟ್ಟು ತೆಗೆದು ಎರಡೂ ಬದಿ ಹೆರೆದು ಹೋಳುಗಳಂತೆ ಕತ್ತರಿಸಿ ಗೊರಟೂ ಇರಲಿ.


ಬಾಣಲೆಗೆ ಎಣ್ಣೆ ಎರೆಯುವುದಕ್ಕಿಲ್ಲ ನಾವಿಂದು ಎಣ್ಣೆರಹಿತ ಪಲ್ಯ ಮಾಡುವವರಿದ್ದೇವೆ.

ಮೊದಲಾಗಿ ಒಂದೆರಡು ಚಮಚ ಎಳ್ಳು ಹುರಿದು ತೆಗೆಯಿರಿ.

ನಂತರ ಉದ್ದಿನಬೇಳೆಸಾಸಿವೆಜೀರಿಗೆಒಂದೆರಡು ಒಣಮೆಣಸು ಹುರಿಯಿರಿ ಒಂದೆಸಳು ಕರಿಬೇವು ಹಾಕತಕ್ಕದ್ದು ನಂತರ ಪಲ್ಯಕ್ಕೆ ಬೇಕಾದಂತಹ ಕಾಯಿತುರಿಯನ್ನೂ ಹಾಕಿ ಬಾಡಿಸಿ.

ಮಿಕ್ಸಿಯಲ್ಲಿ ಎರಡು ಸುತ್ತು ತಿರುವಿ ತೆಗೆದಿಟ್ಟುಕೊಳ್ಳಿ.


ಇದೀಗ ಅದೇ ಬಾಣಲೆಗೆ ಮಾವಿನ ಗೊರಟು ಸಹಿತವಾಗಿ ಹೋಳುಗಳನ್ನು ಹಾಕಿ ಬೇಯಿಸಿಹೇಗೆ ಎಣ್ಣೆಯಿಲ್ಲಒಗ್ಗರಣೆಯಿಲ್ಲ ಅಂತೀರಾ... ಚಿಂತೆ ಬೇಡನೀರೆರೆದು ಬೇಯಿಸಿ ಉಪ್ಪಿನಲ್ಲಿ ಹಾಕಿದಂತಹ ಮಾವಿನಕಾಯಿಗಳಲ್ಲವೇಉಪ್ಪು ಬೇಕಾಗಿಲ್ಲ.

ಸಿಹಿಗೆ ಸೂಕ್ತವೆನಿಸುವಂತೆ ಬೆಲ್ಲ ಹಾಕಿದರೆ ರುಚಿಕರ.

ಬೇಗನೇ ಬೇಯುವ ಸಾಮಗ್ರಿ ಇದುಅರೆದ ಮಸಾಲೆಯನ್ನು ಹಾಕಿ ಕೈಯಾಡಿಸಿ ನೀರು ಆರುವ ತನಕ ಚಿಕ್ಕ ಉರಿಯಲ್ಲಿ ಇರಲಿ.   ಎಣ್ಣೆರಹಿತ ಮಾವಿನ ಪಲ್ಯ ಆಯಿತು ಅನ್ನಿ ಅನ್ನದೊಂದಿಗೆ ಕೂಡಿ ತಿನ್ನಲು ಸೊಗಸಾದ ವ್ಯಂಜನ ನಮ್ಮದಾಯಿತು.


 ಪಲ್ಯವನ್ನು ಮುಗಿಯುವ ತನಕ ಇಟ್ಟುಕೊಳ್ಳಬಹುದು.

ನೀರ್ ದೋಸೆಯೊಂದಿಗೆ ಕೂಡಿ ತಿನ್ನಲೂ ಹಿತ.

ಮಸಾಲೆ ಮಾಡಿಕೊಳ್ಳಲು ಸಾಧ್ಯವಿಲ್ಲದವರು ಪುಳಿಯೋಗರೆ ಮಸಾಲಾ ಪ್ಯಾಕ್ ತನ್ನಿ.

ಉಪ್ಪಿನಲ್ಲಿ ಹಾಕಿದ ಮಾವು ಎಲ್ಲುಂಟು ಅಂತೀರಾ ಆನ್ ಲೈನ್ ಮೂಲಕ ಸಿಗದ ವಸ್ತು ಯಾವುದಿದೆ ಅನ್ನಿ.






0 comments:

Post a Comment