Pages

Ads 468x60px

Monday 24 July 2023

ಮಸಾಲಾ ಮ್ಯಾಂಗೋ

 












ಮಳೆಗಾಲವೆಂದರೆ ಭರಪೂರ ಮಾವಿನ ಹಣ್ಣಿನ ಕಾಲ 

ಎಲ್ಲೆಲ್ಲಿಂದಲೋ ಆಗಮಿಸುವ  ಹಣ್ಣುಗಳ ಸ್ವಾದಕ್ಕೆ ಎಣೆಯಿಲ್ಲ.  ನೋಡಲಿಕ್ಕೆ ಹೋದರೆ ಹಿರಣ್ಯದ ತೋಟದ ರಾಜ್ಯದಲ್ಲಿ ಕಸಿ ಮಾವಿನ ಮರಗಳು ಸಾಕಷ್ಟಿವೆ.  ಅದನ್ನೆಲ್ಲ ನಾವು ತಿಂದು ಮುಗಿಸಲಿಕ್ಕುಂಟೇ,   ಹೇಳಿಕೇಳಿ ಇದು ಕೇರಳ ರಾಜ್ಯ,   ಕಾರ್ಮಿಕರ ಮಜೂರಿ ಅಂದರೆ ಅವರು ಕೇಳಿದಷ್ಟು ಕೊಡಲೇ ಬೇಕು.  “ ಹೋಗಯ್ಯ ಬಾರಯ್ಯ” ಅನ್ನುವ ಹಾಗೂ ಇಲ್ಲ.  ಮನೆಯ ಮಕ್ಕಳಿಗೆ ಅಷ್ಟಿಷ್ಟು ಕೊಟ್ಟು ಕಳಿಸುವಲ್ಲಿಗೆ  “ಸಾಕಪ್ಪ,   ಮಾವಿನಹಣ್ಣಿನ ವ್ಯವಹಾರ “ ಎಂದೆನ್ನಿಸುವಲ್ಲಿಗೆ ಮಾವಿನ ಹಣ್ಣುಗಳು ಕಳಿತುಕೊಳೆತು,  ಉದುರಿ ಬಿದ್ದೇ ಹೋದವು.


ಈಗ ಮಾವಿನಹಣ್ಣುಗಳನ್ನು ಕೊಂಡು ತರುವುದು.   ಮಾವಿನ ಹಣ್ಣುಗಳ ಸಿಪ್ಪೆ ಹೆರೆದು ಹೋಳು ಮಾಡಿ ತಿಂದರೇನೇ ರುಚಿ ಊಟಕ್ಕೆ ಉಪ್ಪಿನಕಾಯಿ ಇಲ್ಲದೇ ಹೋದ್ರೂ ಆದೀತು ತಟ್ಟೆ ತುಂಬ ಮಾವಿನ ಹಣ್ಣಿನ ಹೋಳುಗಳು ಇದ್ರೆ ಸಾಕು.


ಹೀಗೆ ಮಳೆ ಸುರಿಯುತ್ತಿರುವಾಗ ಹಸಿ ಹಸಿ ಹಣ್ಣು ತಿಂದರೆ ಶೀತಕೆಮ್ಮು ಜಾಸ್ತಿ ಆದೀತು. “

ಮತ್ತೇನು ಮಾಡು ಅಂತೀರಾ? “

“ ಬೇಯಿಸಿ ತಿಂದರಾದೀತು. “

“ ಸರಿ ಉಪ್ಪಿನಕಾಯಿ ಹೊರಡಿ ಬೆರೆಸಿ ತಿನ್ನೋಣ. “

“ ನಿನ್ನ ಉಪ್ಪಿನಕಾಯಿ ಏನೂ ಬೇಡ ಸಕ್ಕರೆ ಹಾಕಿ ಬೇಯಿಸಿ ಇಟ್ಟರೆ ಫ್ರೀಜರ್ ನಲ್ಲಿ ಒಂದು ವರ್ಷ ಇಡಲಿಕ್ಕಾಗುತ್ತಂತೆ. “

“ ನೀವೇ ಮಾಡ್ಕೊಳ್ಳಿ. “

ಎರಡು ದಿನ ಸಕ್ಕರೆಯ ಮಾವಿನ ಹಣ್ಣು ತಿಂದಿದ್ದಾಯಿತು.

ಸಕ್ಕರೆಯ ಬದಲು ಪೆಪ್ಪರ್ಜೀರಾಉಪ್ಪು ಹಾಕಿದ್ರೆ ಹೇಗೆ ಎಲ್ಲ ಹುಡಿಗಳೂ ಅಡುಗೆಮನೆಯೊಳಗೆ ಇವೆ.”

ಅನುಮೋದನೆ ದೊರೆಯಿತು.


ತಟ್ಟೆ ತುಂಬ ಮಾವಿನ ಹೋಳು ಇರಲಿ.

ನಾನ್ ಸ್ಟಿಕ್ ತಪಲೆ ಉತ್ತಮತಳ ಹತ್ತುವ ರಗಳೆಯಿಲ್ಲ.

ಇಂಡಕ್ಷನ್ ಸ್ಟವ್ ಆದೀತು ನಿಮಿಷದ ಲೆಕ್ಕದಲ್ಲಿ ಸ್ಟವ್ ಆರಿಸಬಹುದು.


ಒಂದು ಚಮಚ ತಾಜಾ ತುಪ್ಪ ಹಾಗೂ ಮಾವಿನ ಹೋಳು ಬಿಸಿಯಾಗುತ್ತ ಇದ್ದಂತೆ ರುಚಿಗೆ ತಕ್ಕಷ್ಟು ಕಾಳುಮೆಣಸಿನ ಹುಡಿ ಜೀರಿಗೆಹುಡಿ ಚಿಟಿಕೆ ಅರಸಿಣ ಉಪ್ಪು ಇರಲೀ ಅಂತ ತುಸು ಸಕ್ಕರೆ ಹಾಕಿರಿ ಸೌಟು ಆಡಿಸಿ ಹೋಳುಗಳು  ಮೆತ್ತಗೆ ಆದ ಕೂಡಲೇ ಸ್ಟವ್ ಆರಿಸಿ ಮಾವಿನ ಹೋಳು ಚಮಚದಲ್ಲಿ ತೆಗೆದು ಬಾಯಿಗೆ ಹಾಕಿಕೊಳ್ಳಲು ಬರುವಂತಿದ್ದರಾಯಿತು.   ಬಿಸಿಯಾಗಿಯೂ ತಿನ್ನಿ ಆರಿದ ನಂತರವೂ ತಿನ್ನಿ.   ಉಳಿದದ್ದನ್ನು ಫ್ರೀಜರ್ ಒಳಗಿರಿಸಿ ನಾಳೆ ತಿನ್ನಿ.  






0 comments:

Post a Comment