Pages

Ads 468x60px

Monday, 4 September 2023

ಹುರಿಯಕ್ಕಿ ತಿನಿಸು

 




ಅಡಿಕೆ ಸುಲಿಯಬೇಕಾಗಿದೆ ಒಬ್ಬ ಕೆಲಸಗಾರನ ಆಗಮನ ಆಯಿತು ಸಂಜೆಯಾಗುವಾಗ ಅಂದಾಜು ಮೂವತ್ತು ಕಿಲೋ ಅಡಿಕೆಸುಲಿದ “ ನಾಳೆ ಬರುವಾಗ ಇನ್ನೂ ಸಿಕ್ಕಿದವರನ್ನು ಕರೆದು ಕೊಂಡು ಬಾ. “ ಎಂದರು ಮನೆ ಯಜಮಾನ್ರು ಮೂರನೇ ದಿನಕ್ಕಾಗುವಾಗ ಮೂರು ಜನ ಆಯ್ತು ಈವಾಗ ಸುಲಿದ ಅಡಿಕೆ ಗೋಣಿ ತುಂಬಿ ತುಳುಕಿತು.


ಇವತ್ತು ಸಂಜೆ ಹುರಿಯಕ್ಕಿ ಮಾಡಿ ತೋರಿಸ್ತಾನಂತೆ ನಿನಗೆ.. “ ಎಂದರು ನಮ್ಮವರು ವಾರದ ಹಿಂದೆ ಸಂಜೆ ಹಾಲು ತರುವಾಗನನಗಾಗಿ ಮಂಡಕ್ಕಿಪುರಿ ಬಂದಿತ್ತು “ ಎಷ್ಟು ಚೆನ್ನಾಗಿ ಮಾಡಿ ಮಾರಾಟ ಮಾಡ್ತಾರೆ ನೋಡು ಇಷ್ಟು ಮಂಡಕ್ಕಿಗೆ ಮೂವತ್ತು ರೂಪಾಯಿ ಈಗಲೇ ತಿನ್ನುಮತ್ತೆ ಮೆತ್ತಗಾದೀತು. “ 


ಇವತ್ತು ಅಡಿಕೆ ಸುಲಿಯಲು ಬಂದವನು ಅದೇ ಮಂಡಕ್ಕಿ ಸೇಲ್ ಮಾಡಿತ್ತಿದ್ದವನೇ ಆಗಿರಬೇಕು.   ಬೆಳಗ್ಗೆ ಬಂದವನೇ ನನ್ನ ಬಳಿ ಹುರಿಯಕ್ಕಿ ಇದೆಯಾ ಎಂದೂ ವಿಚಾರಿಸ್ಕೊಂಡಿದ್ದ ಇದೆ ನೋಡು ಎರಡು ಮುಷ್ಠಿ..  ಟೊಮೇಟೋ ನೀರುಳ್ಳಿ ಹಸಿಮೆಣಸು ಇದೆ,  ಕೊತ್ತಂಬರಿ ಸೊಪ್ಪು ಪುಲಾವ್ ಮಾಡಿ ಮುಗಿದಿದೆ.  ಜಾಸ್ತಿ ಖಾರ ಏನೂ ಬೇಡ. “


ಸಂಜೆ ಚಹಾ ಮಾಡಬೇಕಾದರೇ  ಮಂಡಕ್ಕಿ ಪುರಿಗೆ ಬೇಕಾದ ಸಾಹಿತ್ಯಗಳೊಂದಿಗೆ ಒಳಗೆ ಬಂದ.


ಅಕ್ಕಒಂದು ಪೀಸಕತ್ತಿ ಕೊಡಿ.. “

“”ಅಲ್ಲೇ ಉಂಟು ನೋಡು ಟೇಬಲ್ ಮೇಲೆ.. “

“ ಇದು ನನ್ನ ಹುರಿಯಕ್ಕಿ. “ ತಂದಿಟ್ಟೆ.

“ ಅದು ಬೇಡನಾನು ತಂದಿದೇನೆ ಫ್ರೆಶ್. “

ಕೊತ್ತಂಬರಿ ಸೊಪ್ಪುಕ್ಯಾರೆಟ್ಹಸಿಮೆಣಸು ಇತ್ಯಾದಿ ಅವನೊಂದಿಗೆ ಬಂದಿತ್ತು.

“ ಒಂದು ನೀರುಳ್ಳಿ ಕೊಡಿ. “  ನೀರುಳ್ಳಿ ಕೊಚ್ಚಲ್ಪಟ್ಟಿತು.

“ ಟೊಮೇಟೋ ಇಲ್ವ? “

ಇಲ್ಲದೇ ಉಂಟೇ ಫ್ರಿಜ್ಜಿನಿಂದ ಹೊರ ಬಂದಿತು

“ ಶುಂಠಿ ಬೆಳ್ಳುಳ್ಳಿ ? “

ಅದೆಲ್ಲ ಬೇಡ. “ ಎಂದ ನಾರಾಯಣ.

ಕೊಚ್ಚುವ ಕಾರ್ಯ ಮುಗಿಯಿತು.





ನಮ್ಮ ಊರ ಭಾಷೆ ತುಳು ನಮ್ಮ ತುಳು ಸಂವಹನ ಇಲ್ಲಿಗೆ ಕನ್ನಡದಲ್ಲಿ ಬಂದಿದೆ.

“ ಅಕ್ಕಒಂದು ದೊಡ್ಡ ತೋಪು (ತಪಲೆ ) ಬೇಕಲ್ಲ.. “

“ ಅಲ್ಲೇ ಮೇಲೆ ಉಂಟು ನೋಡು. “

ಕೆಳಗಿಳಿಸಿತೊಳೆದು ತಂದ.


ಹೆಚ್ಚಿಟ್ಟ ಸಾಮಗ್ರಿಗಳೆಲ್ಲ ತಪಲೆ ಸೇರಿದುವು.

“ ಉಪ್ಪು ಎಣ್ಣೆ… “

“ ಒಳ್ಳೆ ಎಣ್ಣೆಯನ್ನೇ ಕೊಡು.. “ ವೀಕ್ಷಕರಾಗಿ ನಿಂತಿದ್ದ ನಮ್ಮವರು ಅನ್ನೋದೇ.

“ ಒಳ್ಳೆಯ ತೆಂಗಿನೆಣ್ಣೆ ಮಧು ಪುತ್ತೂರಿನಿಂದ ತಂದದ್ದೇ ಇದೆ ಇನ್ನೂ ಪ್ಯಾಕ್ ಬಿಡಿಸಿಲ್ಲ. “

ನಾರಾಯಣ ಚಾಕುವಿನಲ್ಲಿ ಪ್ಯಾಕ್ ಬಿಡಿಸಿ ಜಾಡಿಗೆ ತುಂಬಿಸಿ ಕೊಟ್ಟ ಅಂದಾಜು ಮೂರು ಚಮಚ ಎಣ್ಣೆ ತಪಲೆಗೆ ಎರೆದ.

ಮೆಣಸಿನ ಹುಡಿಯೂ ಖಾರದ ಬಾಬ್ತು ಬಿದ್ದಿತು.

ಅವನೇ ತಂದಿದ್ದ ಹುರಿಯಕ್ಕಿ ಸುರಿದ ಒಂದು ಸೇರು ಆದೀತು

“ ಇಷ್ಟೂ ಹುರಿಯಕ್ಕಿ ಯಾರು ತಿನ್ನೂದು? “

“ ಅಡಿಕೆ ಸುಲೀತಿದಾರಲ್ಲಎಲ್ಲರೂ ಸೇರಿ ತಿಂತಾರೆ… ಹಹ. “ 


ಅಕ್ಕಒಂದು ಸೌಟು ಕೊಡಿ. “

ಸೌಟು ಗಿರಗಿರ ತಿರುಗಿದ್ದೇ ತಿರುಗಿದ್ದು ನಮ್ಮ ಮಂಡಕ್ಕಿ ಪುರಿ ತಯಾರಾಯ್ತು.  

ಹಸಿ ಸಾಮಗ್ರಿಗಳಿಂದ ತಯಾರಾದ  ತಿನಸುಮೆತ್ತಗಾಗುವ ಮೊದಲೇ ತಿನ್ನಿರಿ ತುಂಬ ಮಾಡಿಟ್ಟು ದಾಸ್ತಾನು ಇಡುವುದಕ್ಕಿಲ್ಲ ಮನೆ ತುಂಬ ಜನ ಇರಬೇಕು ಸಂಜೆಯ ಹೊತ್ತು ಬಾಯಾಡಿಸಲಿಕ್ಕೆ ಸೊಗಸಾದ ತಿನಿಸು.


ಇದು ನಮ್ಮೂರ ಸ್ಪೆಶಲ್ ಹುರಿಯಕ್ಕಿ ತಿನಿಸು ಜಾತ್ರೆಸಂತೆ ಬಂದಾಗ ಮಾತ್ರ  ತಿನಿಸು ನಮಗೆ ಸಿಗುತ್ತಿದ್ದ ಕಾಲವೊಂದಿತ್ತು ಅದರೊಂದಿಗೆ ಕಬ್ಬಿನ ಹಾಲು  ಇರಲೇಬೇಕುಖಾರ ಖಾರ ಹುರಿಯಕ್ಕಿ ತಿಂದು ದೊಡ್ಡ ಲೋಟ ತುಂಬ ಕಬ್ಬಿನಹಾಲು ಕುಡಿದಾಗ ಸಿಗುವ ಸುಖಸ್ವರ್ಗಸಮಾನ.


ಖಾರ ಜಾಸ್ತಿ ಹಾಕುವುದಿದ್ದರೆ ಮಾವಿನಕಾಯಿ ತುರಿನಿಂಬೆಹಣ್ಣಿನ ರಸ ಸೇರಿಸುವುದು.   ಹುರಿದ ನೆಲಕಡಲೆ ಬೀಜಗಳನ್ನೂ ಅಲ್ಪಪ್ರಮಾಣದಲ್ಲಿ ಹಾಕಿದಲ್ಲಿ ರುಚಿ ಜಾಸ್ತಿ.






0 comments:

Post a Comment