ಬರೆಯಲಿಕ್ಕೂ ಆ್ಯಪ್ಸ್, ಬರೆದಿದ್ದನ್ನು ಸಂಗ್ರಹಿಸಲು ನೋಟ್ ಪ್ಯಾಡ್ ಆ್ಯಪ್ಸ್. ಬರೆಯಲು ಶಬ್ದಗಳ ಕೊರತೆಯೇ, ಅದಕ್ಕೂ ಆ್ಯಪ್ಸ್ ಬಂದಿವೆ. ಫೊಟೋ ತೆಗೆಯಲು ಆ್ಯಪ್ಸ್, ಫೊಟೋ ಚೆನ್ನಾಗಿ ಬಂದಿಲ್ವೇ, ಇನ್ನಷ್ಟು ಕುಸುರಿ ಕೆಲಸಗಳಿಗೆ ಹಲವಾರು ಆ್ಯಪ್ಸ್. ಈಗ ನಾಲ್ಕಾರು ವರ್ಷಗಳಿಂದ ಇಂತಹ ಆ್ಯಪ್ಸ್ ಒಡನಾಟ, ಇದೂ ಒಂಥರಾ ಮಕ್ಕಳಾಟ. ಆ್ಯಪ್ಸ್ ಗಳ ಮೂಲಕವೇ ಬ್ಲಾಗ್ ಬರಹಗಳಲ್ಲಿ ಸೃಜನಶೀಲತೆ ಬಂದಿತು. ಅದು ಕನ್ನಡ ಭಾಷಾಶಾಸ್ತ್ರವೂ ಆಗಿರಬಹುದು, ಡಿಕ್ಷನರಿ ಬೇಕೇ, ಆ್ಯಪ್ ಇದೆ. ತಂತ್ರಜ್ಞಾನಗಳು ಮುಂದುವರಿದ ಹಾಗೆಲ್ಲ ನಾವೂ ದಾಪುಗಾಲಲ್ಲಿ ಮುಂದಕ್ಕೆ ಓಡುತ್ತಿದ್ದರೇನೇ ಅಂತರ್ಜಾಲ ಪ್ರಪಂಚದಲ್ಲಿ ನಮ್ಮದೇ ಛಾಪು ಮೂಡಿಸಲು ಸಾಧ್ಯ. ಇಂತಹ ಲಕ್ಷಾಂತರ ಆ್ಯಪ್ಸ್, ಆ್ಯಪ್ ಸ್ಟೋರ್ ನಲ್ಲಿ ಉಚಿತವಾಗಿ ಲಭ್ಯ.
Subscribe to:
Post Comments (Atom)
0 comments:
Post a Comment