Pages

Ads 468x60px

Monday 4 January 2021

ಪೈನಾಪಲ್ ಉಪ್ಪಿನಕಾಯಿ

 



ಒಂದು
 ಪುಟ್ಟ ಚಮಚ ಮೆಂತೆ, 

ಕಡ್ಲೆಕಾಳಿನಷ್ಟು ಇಂಗು,  

ಹಸಿ ಅರಸಿನದ ನಾಲ್ಕಾರು ಚೂರುಗಳು

ತುಸು ಎಣ್ಣೆ ಪಸೆಯಲ್ಲಿ ಹುರಿಯಲು ಇಡುವುದು

ಒಂದು ದೊಡ್ಡ ಚಮಚ ಸಾಸಿವೆಯನ್ನೂ ಹಾಕಿ 

ಪರಿಮಳ ಬರುತ್ತ ಇದ್ದಂತೆ ಒಂದು ಪುಟ್ಟ ಚಮಚ ಜೀರಿಗೆ ಬೀಳಲಿ.

ಕೊನೆಗೆ ನಾಲ್ಕೈದು ಕರಿಬೇವಿನೆಲೆ ಹಾಕಿ ಸ್ಟವ್ ಆರಿಸಿ.


 ಸಾಮಗ್ರಿಗಳನ್ನು ಮಿಕ್ಸಿಯ ಪುಟ್ಟ ಜಾರಿನಲ್ಲಿ ಹುಡಿ ಮಾಡಿಕೊಳ್ಳಲು ಕಷ್ಟವೇನಿಲ್ಲ.

ಜಾರ್ ಶುಭ್ರವಾಗಿಯೂ ಮಡಿ ಮಡಿಯಾಗಿ ಇರಬೇಕಾದ್ದು ಅವಶ್ಯ.


ಮೆಣಸು ಹಾಕುವುದಕ್ಕಿಲ್ವೇ...

ಎಲ್ಲಾದ್ರೂ ಉಂಟೇ..  ಸಾಸಿವೆ ಅಳೆದ ಚಮಚದಲ್ಲಿ ಒಂದೂವರೆ ಚಮಚ ಮೆಣಸಿನ ಹುಡಿ ಅಳೆಯಲ್ಪಡಲಿ.

ಅದನ್ನೂ ಉಳಿದ ಸಾಮಗ್ರಿಗಳೊಡನೆ ಮಿಕ್ಸಿಯಲ್ಲಿ ತಿರುಗಿಸುವುದು.

ಈಗ ಉಪ್ಪಿನಕಾಯಿ ಮಸಾಲೆ ಸಿದ್ಧ.


ಉಪ್ಪೂ?

ರುಚಿಗೆ ತಕ್ಕಂತೆ ಉಪ್ಪು ಎಂದು ಬರೆದರೆ ತಪ್ಪಾದೀತು,   ಮೆಣಸಿನ ಖಾರಕ್ಕೆ ಹಾಗೂ ಪೈನಾಪಲ್ ಹುಳಿಗೆ ಹೊಂದಿಕೆಯಾಗುವಂತೆ ಉಪ್ಪು ಹಾಕಬೇಕಾಗುತ್ತದೆ.

ಮೊದಲಾಗಿ ಒಂದೂವರೆ ಚಮಚ ಹುಡಿಯುಪ್ಪು ಮಸಾಲೆಗೆ ಬೆರೆಸುವುದು.


ಪೈನಾಪಲ್ ಹೋಳುಗಳನ್ನು ಚಿಕ್ಕದಾಗಿ ಕತ್ತರಿಸಿ.

ನಾನ್ ಸ್ಟಿಕ್ ಬಾಣಲೆಗೆ ಹಾಕಿಟ್ಟು ಒಲೆಯ ಮೇಲಿಟ್ಟು ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಬಿಸಿಯೇರಲು ಬಿಡಿ ಬೇಯಬೇಕಿಲ್ಲ.

ನಂತರ ಕೆಳಗಿಳಿಸಿ ಸಿದ್ಧಗೊಳಿಸಿದ ಉಪ್ಪಿನಕಾಯಿ ಮಸಾಲೆ ಬೆರೆಸಿ.

 

ಉಪ್ಪು ಇನ್ನೂ ಬೇಕೆನಿಸಿದರೆ ಈಗ ಸೇರಿಸುವುದು.

ರುಚಿಕರವಾದ ಪೈನಾಪಲ್ ಉಪ್ಪಿನಕಾಯಿ ತಿನ್ನಲು ಸಿದ್ಧವಾಗಿದೆ.


ಅಂದ ಹಾಗೆ  ಉಪ್ಪಿನಕಾಯಿ ಮಾಡಿದ್ಯಾಕೇ ಹಾಗೇನೇ ತಿನ್ನಬಹುದಿತ್ತಲ್ಲ?


ಅದೇ ವಿಷಯ ಮಕ್ಕಳ ಬಳಗ ಬೆಂಗಳೂರಿನಿಂದ ಬಂದಿದೆ ಹೊರ ಚಾವಡಿ ಆಫೀಸ್ ರೂಂ ಆಗಿ ಪರಿವರ್ತಿತವಾಗಿದೆ ಮನೆಯೇ ಕಾರ್ಯಾಲಯ ಅನ್ನಿ ತರಕಾರಿಗಳೂ ಹಣ್ಣುಗಳೂ ಬರುತ್ತಲಿವೆ.   ಹೀಗೆ ಬಂದ ಪೈನಾಪಲ್ ಯಾರಿಗೂ ರುಚಿಸದೆ ಹೋಯಿತು ಎಷ್ಟಾದರೂ ಅಂಗಡಿ ಸರಕು...


ಯಾರಿಗೂ ಬೇಡವಾದ ಹತ್ತೂ ಹನ್ನೆರಡು ಪೈನಾಪಲ್ ಹೋಳುಗಳು ಅಡುಗೆಯ ರಸಾಯನಶಾಸ್ತ್ರದಲ್ಲಿ  ರೂಪಕ್ಕಿಳಿದಿದೆ ಎಲ್ಲರಮನವನ್ನೂ ಗೆದ್ದಿದೆ.





0 comments:

Post a Comment