Pages

Ads 468x60px

Wednesday 3 February 2021

ನೀರುಳ್ಳಿ ಬಜೆ

 


ದೊಡ್ಡ ಗಾತ್ರದ ನೀರುಳ್ಳಿಗಳು ಬಂದಿವೆ ಜಗ್ಗಣ್ಣನ ಜಿನಸಿನಂಗಡಿಯಿಂದ ಇನ್ನಿತರ ಸಾಮಗ್ರಿಗಳೊಂದಿಗೆ ಕಡ್ಲೆ ಹಿಟ್ಟೂ ಬಂದಿದೆ ನಿನ್ನೆ ತಾನೇ ಗೆಣಸಿನ ಚಿಪ್ಸ್ ಮಾಡಿದ ಬಾಣಲೆಯ ಎಣ್ಣೆ ಹಾಗೇ ಇದೆ ಇವತ್ತು ನೀರುಳ್ಳಿ ಬಜೆ ಮಾಡಿದರಾದೀತು.


ಅತ್ತೇನಮ್ಮ ಬೆಂಗಳೂರು ಕಡೆ ನೀರುಳ್ಳಿ ಬಜ್ಜಿ ಅನ್ನುವುದು. "  ತಿದ್ದಿದಳು ಮೈತ್ರಿ.

ಹೇಗೋ ಒಂದು...   ಪಕೋಡಾಬಜೆ ಎಲ್ಲ ಒಂದೇಯ.. "


ಒಂದು ದೊಡ್ಡ ಗಾತ್ರದ ನೀರುಳ್ಳಿ ಸಿಪ್ಪೆ ಬಿಡಿಸಿ ತೆಳ್ಳಗೆ ಕತ್ತರಿಸುವುದು.

ಕಡಲೆ ಗಾತ್ರದ ಇಂಗು ಒಂದು ಚಮಚ ನೀರಿನಲ್ಲಿ ಕರಗಿಸಿ.

ರುಚಿಗೆ ತಕ್ಕಷ್ಟು ಉಪ್ಪು.

ಖಾರದ ಹದಕ್ಕೆ ಅನುಸಾರ ಮೆಣಸಿನ ಹುಡಿ ಒಂದು ಚಮಚ ಸಾಕು.

ಡಬ್ಬದಿಂದ ಸಾಂಬಾರ್ ಹುಡಿ ಸೇರಿಕೊಂಡಿತು ಇದೂ ಒಂದು ಚಮಚ ಇರಲಿ.

ಕತ್ತರಿಸಿದ ನೀರುಳ್ಳಿಗೆ ಕೈಯಾಡಿಸಿ ಎಸಳೆಸಳು ಬಿಡಿಸಿ.

ಉಪ್ಪು ಇಂಗು ಇತ್ಯಾದಿ ಎಲ್ಲವನ್ನೂ ಬೆರೆಸಿ.

ಬಾಣಲೆಯಿಂದ ಒಂದು ಚಮಚ ಎಣ್ಣೆ ಹಾಕಿದರೆ ಉತ್ತಮ.

ಒಂದು ದೊಡ್ಡ ಸೌಟು ಕಡ್ಲೆ ಹಿಟ್ಟು ಹಾಕಿ ಚೆನ್ನಾಗಿ ಕಲಸಿ.

ಬೇಕಿದ್ದರೆ ಒಂದೆರಡು ಚಮಚ ನೀರು ಹಾಕಬಹುದು.

ಹತ್ತು ನಿಮಿಷ ಬಿಟ್ಟು ,

ಕಡ್ಲೆಹಿಟ್ಟು ಸಾಕಾಗಲಿಲ್ಲವೆಂದಾದರೆ ಇನ್ನಷ್ಟು ಸೇರಿಸಿ.

ಒಟ್ಟಿನಲ್ಲಿ ನೀರುಳ್ಳಿ ಎಸಳುಗಳು ಕಡ್ಲೆ ಹಿಟ್ಟಿನೊಂದಿಗೆ ಬೆರೆತಿರಬೇಕು.

ಕಾದ ಎಣ್ಣೆಗೆ ಅಂಗೈಯಲ್ಲಿ ಉಂಡೆಯಂತೆ ತೆಗೆದು ಹಾಕುತ್ತ ಬನ್ನಿ.

ಎರಡೂ ಬದಿ ಹೊಂಬಣ್ಣ ಬಂದಾಗ ತೆಗೆಯಿರಿ.

ಒಂದು ನೀರುಳ್ಳಿಯಿಂದ ಎಂಟು ಪಕೋಡಾ/ಬಜೆ/ಬಜ್ಜಿಗಳಾಗಿವೆ.

ಇದು ನಮ್ಮ  ಸಂಜೆಯ ತಿನಿಸು.

ಚಹಾದೊಂದಿಗೆ ಸವಿದೆವು ಅನ್ನಿ.






0 comments:

Post a Comment