Pages

Ads 468x60px

Sunday, 11 December 2022

ರಾಗಿ ತರಿ ಇಡ್ಲಿ

 ಮಗುವಿಗಾಗಿ ರಾಗಿ ತರಿಸಿಹುಡಿ ಮಾಡಿದ ವಿಧಾನ ಬರೆದಿದ್ದೇನಲ್ಲ,  ಇದನ್ನು ಅದರ ಮುಂದುವರಿದ ಭಾಗವೆಂದು ತಿಳಿದು ಓದಿರಿ.


ಜಗ್ಗಣ್ಣನ ಅಂಗಡಿಯಿಂದ ಎರಡು ಕಿಲೋ ರಾಗಿ ತರಿಸಿದ್ದಾಗಿದೆ ಮುಂದಿನವಾರ ಮಧುಕರ ಊರಿಗೆ ಬರುವವನಿದ್ದಾನೆ ಅವನುಬೆಂಗಳೂರಿಗೆ ಪುನಃ ಹೊರಡುವಾಗ ರಾಗಿ ಹುಡಿ ಕಳುಹಿಸುವ ಅಂದಾಜು ನನ್ನದು.


ಅವನೇನೋ ಬಂದ ಬರುವಾಗ ಸುಮ್ಮನೇ ಬರಲಿಲ್ಲ “ ಅಮ್ಮ ಏನೆಲ್ಲ ಬಂದಿದೆ ನೋಡು.. “

“ .. ರಾಗಿ ಹುಡಿಯೂ ಬಂದಿದೆ… ಅಲ್ಲ ಇದನ್ನು ಇಲ್ಲಿಗೆ ಯಾಕೆ ತಂದದ್ದೂ ಅಲ್ಲಿಯೇ ತಂಗಿಗೆ ಕೊಡಬಹುದಿತ್ತಲ್ಲ. “ ನನಗೋಅಚ್ಚರಿ.    “ ಹೋಗಮ್ಮ ಪಕ್ಕದಮನೆಯಾ ಹಾಗೆ ಕೊಟ್ಟು ಬರಲಿಕ್ಕೇ… “ ರೇಗಿದ.


ಸುಮ್ಮನಾಗಬೇಕಾಯಿತು.    “ ಅಮ್ಮಇದು ಆರ್ಗೇನಿಕ್ ರಾಗಿ ಹುಡಿ ಗೊತ್ತಾಯ್ತಾ ನೀನೇ ಏನಾದ್ರೂ ಮಾಡು. “

“ ಆರ್ಗೇನಿಕ್ ಅಂದ್ರೇನು ಡಾಮರು ರಸ್ತೆ ಮೇಲೆ ರಾಗಿ ಒಣಗಿಸೂದಂತೆ ಗೊತ್ತಾ? “

ಅದೇನೋ ನಂಗೊತ್ತಿಲ್ಲ ನಾನೂ ಕಂಡಿದ್ದೇನೆ  ಕಡೆ ರಸ್ತೆ ತುಂಬ ಹುಲ್ಲು ಹರಡಿರ್ತಾರೆ ನಮ್ಮ ಕಾರು ಅದರ ಮೇಲೇಹೋಗ್ಬೇಕು..”


“ ನಂಗೆ ನೀನೇ ಪುಡಿ ಮಾಡಿ ಕೊಟ್ಬಿಡು ಅಣ್ಣನ ಓರ್ಗೇನಿಕ್ ರಾಗಿ ಬೇಡ. “  ಅನ್ನುವುದೇ ಮಗಳು.


ಹಿಂದಿನ ವಿಧಾನದಲ್ಲೇ  ಬಾರಿಯೂ ರಾಗಿಮಣ್ಣಿಯ ಹುಡಿ ಸಿದ್ಧವಾಯಿತು.   

ಹುಡಿಯನ್ನು ಜರಡಿಯಾಡಿಸುವಾಗ ರಾಗಿಯ ತರಿ ಅರ್ಧ ಲೋಟ ದೊರೆಯಿತು  ಮೊದಲು ರಾಗಿಹುಡಿ ತಯಾರಿಸುವಾಗ ನಾಲ್ಕುಹಸುಗಳನ್ನು ಸಾಕುವ ಲಲಿತಕ್ಕ ಇದ್ದಳುಅವಳಿಗೇ ಕೊಟ್ಟ ನೆನಪು ಈಗ ನಾನೇನ್ಮಾಡ್ಲೀ..  ಐಡಿಯಾ ಇಡ್ಲಿ ಮಾಡೋಣ ಹೇಗೆ?


ಒಂದು ಲೋಟ ಉದ್ದು ಅಳೆದು ತೊಳೆದು ನೀರು ಎರೆದು ಇಡುವುದು.

ಅರ್ಧ ಲೋಟ ರಾಗಿ ಸಾಕಾಗದು ಒಂದು ಲೋಟ ಅಕ್ಕಿ ತರಿ ಅಳೆಯಿರಿ.

ಒಟ್ಟಿಗೆ ಒಂದೂವರೆ ಲೋಟ ಆಯ್ತು.


ಉದ್ದು ನೆನೆದು ಹಿಗ್ಗಿದೆ ಇದೀಗ ಅರೆಯುವ ಸಮಯ ಅಕ್ಕಿ ರಾಗಿ ತರಿಗಳಿಗೆ  ಮುಳುಗುವಷ್ಟು ನೀರು ಎರೆದಿರಾ ಮಿಕ್ಸಿಯಲ್ಲಿಉದ್ದು ನುಣ್ಣಗೆ ಅರೆದಿರಾ

ಎಲ್ಲವನ್ನೂ ಒಟ್ಟಿಗೆ ಬೆರೆಸಿದಿರಾ,

ಉಪ್ಪು ಹಾಕಿ ಮುಚ್ಚಿ ಇಡುವಲ್ಲಿಗೆ ಇಡ್ಲಿ ಹಿಟ್ಟು ಆಯ್ತು.  

ಹುದುಗು ಬಂದ ಹಿಟ್ಟನ್ನು ನಾಳೆ ಮುಂಜಾನೆ ಇಡ್ಲಿ ಎರೆಯಿರಿ ಹುರಿದ ರಾಗಿ ಅಲ್ವೇ ಘಮಘಮಿಸುವ ಇಡ್ಲಿಯನ್ನು ಖುಷಿಖುಷಿಯಾಗಿ ತಿನ್ನಿ





0 comments:

Post a Comment