ಬಚ್ಚಂಗಾಯಿ ಹೋಳು ಮಾಡುತ್ತ ಇದ್ದ ಹಾಗೆ, ಥಟ್ ಎಂದು ಆಲೋಚನೆಯೊಂದು ಹುಟ್ಟಿತು. ಈ ಬಾರಿ ಬಚ್ಚಂಗಾಯಿ ಸಿಪ್ಪೆಯಿಂದ ಉಪ್ಪಿನಕಾಯಿ ಹಾಕಿದರೆ ಹೇಗೆ?
“ ಅಡ್ಡಿಯಿಲ್ಲ, ಹೇಗೆ ಹಾಕಿದ್ರೀ.. ?
ಜಾಡಿ ಹಿಡಿಸುವಷ್ಟೇನೂ ಹೆಚ್ಚಿ ಹಾಕಿಲ್ಲ, ನಮಗಿಬ್ಬರಿಗೆ ಎರಡು ಹೊತ್ತಿನ ಊಟಕ್ಕೆ ಸಾಕಾಗುವಷ್ಟು ಹೆಚ್ಚಿದ್ದು ಅಷ್ಟೇ. ಅದರಲ್ಲಿಯ ಹಸಿರು ಸಿಪ್ಪೆ ಹೆರೆದು ತೆಗೆಯಬೇಕು, ನಂತರ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ…
ಉಪ್ಪಿನಕಾಯಿ ಹಸಿ ಹೊರಡಿ (ಮಸಾಲೆ) ಹಾಗೂ ಹುರಿದ ಹೊರಡಿಗಳೆರಡೂ ಅಡುಗೆ ಮನೆಯೊಳಗೆ ಇತ್ತು, ಬಿಡುವಿದ್ದಾಗ ಮಾಡಿಇಟ್ಕೊಂಡಿದ್ದು ಕಣ್ರೀ..
ಎರಡೂ ವಿಧದ ಮಸಾಲೆಗಳನ್ನು ಒಂದೊಂದು ಚಮಚ ಬೆರೆಸಿ ಹೊಂದಿಸುವಲ್ಲಿಗೆ ಉಪ್ಪಿನಕಾಯಿ ಸಿದ್ಧವಾಗಿ ಬಿಟ್ಟಿತು.
ನಮ್ಮ ಮನೆ ಯಜಮಾನರಂತೂ ಈ ಉಪ್ಪಿನಕಾಯಿ ತಿಂದು ಪುಟ್ಟ ಭಾಷಣ ಬಿಗಿದರು. “ ಹೌದೂ, ದೊಡ್ಡ ಸಮಾರಂಭ ಇರುವಾಗ ಬಚ್ಚಂಗಾಯಿ ಜ್ಯೂಸು ಮಾಡುವುದು, ಸಿಪ್ಪೆ ಅತ್ತ ಬಿಸಾಡುವುದು. ಊಟದ ಸಮಯಕ್ಕೆ ಬೇರೇನೋ ಉಪ್ಪಿನಕಾಯಿ.. ಮೇಲೋಗರಕ್ಕೆ ಇನ್ಯಾವುದೋ ತರಕಾರಿ, ನೋಡೋಣ, ಮುಂದಿನ ಬಾರಿ ಅಡುಗೆಯವರ ಬಳಿ ಹೇಳಬೇಕು, ತರಕಾರಿ ಹೆಚ್ಚುವ ಸುಧರಿಕೆಯವರು ಬಚ್ಚಂಗಾಯಿ ಕೊಚ್ಚಿ ಕೊಡಲಿಕ್ಕಾಗದು ಎಂದೇನೂ ಹೇಳುವವರಲ್ಲ. “
“ ಮೇಲೋಗರ ಆಗದಿದ್ರೆ ಬೇಡ, ಪಲ್ಯ ಆದರೂ
ಮಾಡಬಹುದು.
0 comments:
Post a Comment