ಬೇಸಿಗೆ ಬಂತಲ್ವೇ, ಬಚ್ಚಂಗಾಯಿ ಮಾಮೂಲು, ತಿನ್ನುವುದಕ್ಕಿಂತ ಹೆಚ್ಚು ಕಸ ವಿಲೇವಾರಿಯದ್ದೇ ಸಮಸ್ಯೆ ಆಗ್ಬಿಟ್ಟಿದೆ.
ಬೆಳಗಿನ ತಿಂಡಿಯ ನಂತರ ಹತ್ತು ಗಂಟೆಯ ಹೊತ್ತಿಗೆ ತಿನ್ನಲಿಕ್ಕಾಗಿ ಬಚ್ಚಂಗಾಯಿ ಹೋಳುಗಳು ತಯಾರಾದುವು. ಪಕ್ಕದಲ್ಲಿ ಮಧ್ಯಾಹ್ನದ ಅಡುಗೆಗಾಗಿ ಸೌತೆಕಾಯಿ ಕಾಯುತ್ತಲಿತ್ತು. ಸೌತೆಯೊಂದಿಗೆ ಬಚ್ಚಂಗಾಯಿ ಸಿಪ್ಪೆ ತರಕಾರಿ ಹೋಳುಗಳಾಗಿ ಮಾರ್ಪಟ್ಟಿತು.
ತೊಗರಿ ಬೇಳೆ ಬೇಯಿಸಿದ್ದಾಯ್ತ, ತರಕಾರಿ ಹೋಳುಗಳು ನಂತರ ಬೇಯಲಿ, ಕುಕ್ಕರ್ ಒಂದು ಸೀಟಿ ಹಾಕಿದ ನಂತರ ಒತ್ತಡ ಇಳಿಸುತ್ತ ಬನ್ನಿ, ನಂತರ ಮುಚ್ಚಳ ತೆರೆಯಿರಿ. ಈಗ ಒಂದು ನೀರುಳ್ಳಿ ಹೆಚ್ಚಿ ಹಾಕಿರಿ.
ನಮ್ಮ ತೆಂಗಿನ ತುರಿಯೂ ಸಿದ್ಧವಿದೆ. ಇನ್ನೇಕೆ ತಡ, ಮಸಾಲೆ ಹುಡಿ ತಿಂಗಳಿಗಾಗುವಷ್ಟು ಮಾಡಿ ಇಡುವ ರೂಢಿ ನನ್ನದು.
ತೆಂಗಿನತುರಿ, ಮಸಾಲೆ, ಹುಳಿ ಇತ್ಯಾದಿಗಳನ್ನು ಅರೆದು ಬೇಯಿಸಿದ ಸಾಮಗ್ರಿಗೆ ಕೂಡಿ, ರುಚಿಗನುಸಾರ ಬೆಲ್ಲ, ಉಪ್ಪು ಹಾಕಿ. ಅವಶ್ಯಕತೆಗೆ ತಕ್ಕಷ್ಟು ನೀರೆರೆದು ಕುದಿಸಿ, ಬೆಳ್ಳುಳ್ಳಿ ಹಾಗೂ ಕರಿಬೇವಿನ ಒಗ್ಗರಣೆ ಕೊಡುವಲ್ಲಿಗೆ ನಮ್ಮ ಅಡುಗೆ, ಕಸದಿಂದ ರಸ ಸಿದ್ಧವಾಗಿದೆ.
0 comments:
Post a Comment