ಹಸಿ ಮಸಾಲೆ ಹೇಗೆ?
ಬೇಕಾಗುವ ಸಾಮಗ್ರಿ
ಮೆಣಸು, ಸಾಸಿವೆ, ಅರಸಿಣ.
ನಾನು ಮೆಣಸಿನ ಹುಡಿಯನ್ನು ಬಳಸಿದ್ಜೇನೆ. ಸಾಮಾನ್ಯವಾಗಿ 3 ಅಳತೆ ಮೆಣಸು ಅಂದರೆ ಒಂದು ಅಳತೆ ಮೆಣಸಿನ ಹುಡಿ ಎಂದು ತಿಳಿಯಿರಿ.
ಒಂದು ಅಳತೆ ಸಾಸಿವೆ ಹಾಗೂ ಮೂರನೇ ಒಂದರಷ್ಟು ಅರಸಿನ ಇರಲಿ.
ಅಳತೆ ಆಯ್ತು.
ಇದನ್ನು ಹಾಗೇನೇ ಹುಡಿ ಮಾಡಿದರಾಯ್ತು. ಸಾಸಿವೆ ನುಣ್ಣಗೆ ಆದ ನಂತರ ಮೆಣಸಿನ ಹುಡಿ ಅರಸಿನ ಹುಡಿ ಸೇರಿಸಿ ಬೆರೆಸಿ. ಎಲ್ಲವನ್ನೂ ಮಿಕ್ಸಿ ಮಾಡಿಕೊಡುತ್ತೆ. ಜಾರ್ ಮಾತ್ರ ನೀರ ಪಸೆ ಇರದೆ ಶುಭ್ರವಾಗಿರಬೇಕು.
ಹುರಿದ ಮಸಾಲೆ
ಜೀರಿಗೆ, ಮೆಂತೆ, ಇಂಗು ಹುರಿಯಿರಿ. ಸ್ವಲ್ಪ ಸ್ವಲ್ಪ ಸಾಕು.
ಎಣ್ಣೆ ಹಾಕಿಯೂ ಹಾಕದೆಯೂ ಹುರಿಯಬಹುದು.
ಸಾಸಿವೆ ಅರ್ಧ ಲೋಟ ಸೇರಿಸಿ ಸಿಡಿಯುವ ತನಕ ಹುರಿಯಿರಿ. ಅಂದಾಜು ನಾಲ್ಕು ನಿಮಿಷ ಬೇಕಾದೀತು.
ನಂತರ ಅರ್ಧ ಲೋಟ ಮೆಣಸಿನ ಹುಡಿ, 2 ಚಮಚ ಅರಸಿನ ಸೇರಿಸಿ ಬೆರೆಸಿಕೊಳ್ಳಿ. ಕೂಡಲೇ ಸ್ಟವ್ ನಂದಿಸಿ ತಣಿಯಲು ಬಿಡಿ.
ಚೆನ್ನಾಗಿ ಆರಿದ ನಂತರ ಹುಡಿ ಮಾಡಿ ಇಟ್ಟುಕೊಳ್ಳುವುದು.
ಈ ಹುರಿದ ಮಸಾಲೆಗೆ ಕಾಳುಮೆಣಸಿನ ಹುಡಿ, ಬೆಳ್ಳುಳ್ಳಿ, ಕರಿಬೇವು ಇತ್ಯಾದಿ ಹುರಿಯುವಾಗ ಸೇರಿಸಬಹುದಾಗಿದೆ. ಪ್ರತಿ ಬಾರಿ ಹುಡಿ ಮಾಡಿದಾಗ ವಿಭಿನ್ನ ರುಚಿಯ ಮಸಾಲೆ ನಮ್ಮದು. ಸಾಂಬಾರ್ ಹುಡಿ ಮಾಡುವ ತರಹವೇ ಮಾಡಿದರಾಯ್ತು.
ಕೊನೆಯಲ್ಲಿ ಶುಭ್ರವಾದ ಜಾಡಿಗೆ ತುಂಬಿಸಿ ಮುಚ್ಚಿ ಇಡುವುದು.
ನಮ್ಮ ಊರಿನ ಕ್ರಮದ ಉಪ್ಪಿನಕಾಯಿಗೆ ಎಣ್ಣೆ ಹಾಕುವುದಕ್ಕಿಲ್ಲ.
ಈಗ ವರ್ಷವಾದರೂ ಮುಗಿಯದಷ್ಟು ಉಪ್ಪಿನಕಾಯಿ ಹಾಕುವುದಕ್ಕೂ ಇಲ್ಲ, ಆಯಾ ಋತುಮಾನದಲ್ಲಿ ಸಿಗುವ ಹುಳಿ ಮಿಶ್ರಿತಹಣ್ಣುಗಳೇ ನಮ್ಮ ಉಪ್ಪಿನಕಾಯಿಗಳು. ಕರಂಡೆ, ಅಂಬಟೆ, ದಾರೆಹುಳಿ, ಬೀಂಬುಳಿ, ಲಿಂಬೆ…
ನನ್ನ ಮಕ್ಕಳ ಬಳಗದಲ್ಲಿ ಎಳೆಯ ಸೌತೇಕಾಯಿ ಭಲೇ ಫೇಮಸ್…..
0 comments:
Post a Comment